ಟಿ20 ವಿಶ್ವಕಪ್ ಟೂರ್ನಿ ಸಮೀಪಿಸುತ್ತಿರುವ ಹೊತ್ತಿನಲ್ಲೇ ಟೀಮ್ ಇಂಡಿಯಾದಲ್ಲಿ ಹಲವು ಪ್ರಯೋಗಗಳನ್ನ ಮಾಡಲಾಗ್ತಿದೆ. ಹಲವರು ಮಾಜಿ ಆಟಗಾರರು ಈ ಪ್ರಯೋಗಗಳ ವಿರುದ್ಧ ಕಿಡಿಕಾರ್ತಿದ್ದಾರೆ. ಆದ್ರೆ, ಸಬಾ ಕರೀಂ ಮಾತ್ರ ತಂಡದ ಪ್ರಯೋಗಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಟಿ20 ಫಾರ್ಮೆಟ್ನಲ್ಲಿ ರೋಹಿತ್ ಶರ್ಮಾರ ನಾಯಕತ್ವಕ್ಕೂ ಕರೀಂ, ಪುಲ್ ಮಾರ್ಕ್ಸ್ ನೀಡಿದ್ದಾರೆ. ಆದ್ರೆ ಕೆಲವೊಂದು ಪಂದ್ಯಗಳಲ್ಲಿ ಕೆಲ ನಿರ್ಣಯಗಳನ್ನ ಅಳೆದು ತೂಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 2-1ರಿಂದ ಮುನ್ನಡೆ ಸಾಧಿಸಿದೆ. ಏಕದಿನ ಸೀರೀಸ್ ಗೆದ್ದಿರೋ ಟೀಂ ಇಂಡಿಯಾ ಟಿ20 ಸರಣಿ ಗೆಲ್ಲೋ ವಿಶ್ವಾಸದಲ್ಲಿದೆ. ಇದಾದ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ವಿರುದ್ಧ ಏಕದಿನ ಸರಣಿ ಆಡಲಿದೆ. ಈ ಮುನ್ನವೇ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ ಆಡುವ ಬಳಗ ಫೈನಲೈಸ್ ಆಗುವ ಸಾಧ್ಯತೆ ಇದೆ.
ಜಿಂಬಾಬ್ವೆ ಪ್ರವಾಸಕ್ಕೆ ಮುನ್ನವೇ ಸೆಲೆಕ್ಷನ್ ಕಮಿಟಿ ಏಷ್ಯಾಕಪ್‌ಗಾಗಿ ಟೀಂ ಇಂಡಿಯಾ ಫೈನಲ್ ಮಾಡುವ ಸಾಧ್ಯತೆಯಿದೆ. ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರೋ ಏಷ್ಯಾಕಪ್ ಇದೇ ಆಗಸ್ಟ್ 27ನೇ ತಾರೀಖಿನಿಂದಲೇ ಶುರುವಾಗಲಿದೆ. ಈಗ ಮೆಗಾ ಟೂರ್ನಿ ಯುಎಇನಲ್ಲಿ ನಡೆಯಲಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post