ವರಮಹಾಲಕ್ಷ್ಮೀ ಹಬ್ಬಕ್ಕೆ ಸೀರಿಯಲ್ ನಾಯಕಿಯರ ಮೋಗದಲ್ಲಿ ಲಕ್ಷ್ಮೀ ಕಳೆ ಬಂದಿದೆ. ಬಣ್ಣ ಬಣ್ಣದ ಸೀರೆ ಉಟ್ಟು ಶ್ರೀ ಲಕ್ಷ್ಮೀಗೆ ಪೂಜೆ ಸಲ್ಲಿಸಿದ್ದಾರೆ. ನಟಿ ರಶ್ಮಿ ಪ್ರಭಾಕರ್ ನೀರಳೆ ಬಣ್ಣದ ಸೀರೆಯಲ್ಲಿ ಸಿರಿ ಲಕ್ಷ್ಮೀಯನ್ನ ಕೈಯಲ್ಲಿ ಹಿಡಿದು ಮಿಂಚುತ್ತಿದ್ದಾರೆ.
ಥೇಟ್ ಲಕ್ಷ್ಮೀಯಂತೆ ಕಾಣ್ತಿದ್ದಾರೆ ನಟಿ ರಶ್ಮೀ. ಮದುವೆಯ ನಂತರ ತಮ್ಮ ಮೊದಲನೇ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
ನಟಿ ಶುಭಾ ಪೂಂಜಾ ಕೂಡ ವಿಭಿನ್ನ ರೀತಿಯ ಫೋಟೋ ಶೂಟ್ ಮಾಡಿಸಿದ್ದು, ಹಾಫ್ ಸಾರಿ ತೊಟ್ಟು ಮಹಾಲಕ್ಷ್ಮೀಯನ್ನ ಪೂಜಿಸಿದ್ದಾರೆ. ನಟಿ ಶುಭ ಪೂಂಜಾಗೂ ಕೂಡ ಮದುವೆಯ ನಂತರ ಇದು ಮೊದಲನೇ ವರಮಹಾಲಕ್ಷ್ಮೀ ಹಬ್ಬ. ನಟಿ ಶುಭ ಬಹಳಾನೇ ಕಂಗೊಳಿಸುತ್ತಿದ್ದಾರೆ.
ಇನ್ನು, ನಟಿಯರಾದ ನಮ್ರತಾ ಗೌಡ ಹಾಗೂ ಸಂಜನಾ ಬುರ್ಲಿ ಸಂಪ್ರಾದಯ ಸೀರೆಯಲ್ಲಿ ಅಭಿಮಾನಿಗಳಿಗಳಿಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳನ್ನ ತಿಳಿಸಿದ್ದಾರೆ. ಕಿರುತೆರೆಯ ನಾಯಕಿಯರ ಈ ವಿಭಿನ್ನ ಲುಕ್ ಎಲ್ಲರನ್ನ ಸೇಳೆಯುತ್ತಿದೆ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post