ಕನ್ನಡದ ಎಲ್ಲಾ ಕ್ಷೇತ್ರದ ಸಾಧಕರನ್ನ ಸಂಭ್ರಮಿಸೋ ವೇದಿಕೆ ಇದು. ಅವರ ಜೀವನದ ಪಯಣವನ್ನ ಅವರಿಗೆ ಹೆಮ್ಮೆಯಿಂದ ತೋರಿಸುವ ವೇದಿಕೆಯಿದು. ಅವರ ಜೀವನದ ಕಾಲಘಟ್ಟದ ಸ್ನೇಹಿತರನ್ನ ಕಣ್ಮುಂದೆ ತರುವ ವೇದಿಕೆಯಿದು. ಅದೇ ನಮ್ಮ ನಿಮ್ಮೆಲ್ಲರ ನೆಚ್ಚಿನ ವೀಕೆಂಡ್ ರಿಯಾಲಿಟಿ ಶೋ ವಿಕೇಂಡ್ ವಿಥ್ ರಮೇಶ್.
ರಮೇಶ್ ಅರವಿಂದ್ ಅವರ ಸಾರಥ್ಯದಲ್ಲಿ ಅದ್ಭುತವಾಗಿ ಮೂಡಿ ಬರುವ ರಿಯಾಲಿಟಿಯ ರಿಯಾಲಿಟಿ ಶೋ. ಇಲ್ಲಿ ಎಲ್ಲಾ ಕ್ಷೇತ್ರದ ರಿಯಲ್ ಹಿರೋ- ಹಿರೋಹಿನ್ಗಳನ್ನ ಸೆಲೆಬ್ರೇಟ್ ಮಾಡಲಾಗತ್ತೆ. ಸದ್ಯದಲ್ಲೇ ಎಲ್ಲರ ನೆಚ್ಚಿನ ವಿಕೇಂಡ್ ವಿಥ್ ರಮೇಶ್ ನಿಮ್ಮನ್ನು ರಂಜಿಸಲು ಹೊಸ ಸೀಸನ್ರೊಂದಿಗೆ ಬರ್ತಿದೆ. ಜೀ ಕನ್ನಡ ವಾಹಿನಿಯ ಬ್ಯೂಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ಈ ರಿಯಾಲಿಟಿ ಶೋ ಬರುವ ಬಗ್ಗೆ ಹಿಂಟ್ ಕೊಟ್ಟಿದ್ದಾರೆ. ಈ ಕಾರ್ಯಕ್ರಮದ ಸುದಿರ್ಘ ಪಯಣವನ್ನು ಮೆಲುಕು ಹಾಕುತ್ತಾ ಹೊಸ ಸೀಸನ್ ಬರುವ ಬಗ್ಗೆ ಕ್ಲ್ಯೂ ನೀಡಿದ್ದಾರೆ. ಜೊತೆಗೆ ವೀಕ್ಷಕರಿಗೆ ಪ್ರೆಶ್ನೆಯೊಂದನ್ನ ಕೇಳಿದ್ದಾರೆ.
ನನ್ನ ನೆಚ್ಚಿನ ರಿಯಾಲಿಟಿ ಶೋ ಬಂದು ಇವತ್ತಿಗೆ ಸತತ ಎಂಟು ವರ್ಷಗಳು ಕಳೆದಿವೆ. ಮತ್ತೆ ಹೊಸ ಸೀಸನ್ನ ಟಿವಿಯಲ್ಲಿ ನೋಡಲು ಬಯಸುತ್ತೀರಾ? ಅಂತಾ ಒಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟಿದ್ದಾರೆ. ಇಲ್ಲಿ ಹೇಳಿರೋ ರೀತಿ ನೋಡಿದರೆ ವಿಕೇಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನ ಒಟಿಟಿಯಲ್ಲಿ ಏನಾದ್ರು ಅಂದ್ರೆ ಡಿಜಿಟಲ್ಗೆ ಸೀಮಿತ ಮಾಡುವ ಪ್ಲ್ಯಾನ್ಸ್ ಹೊಂದಿದಿಯಾ ಅನ್ನೋ ಡೌಟ್ ಅಂತೂ ಬರೋದು ಸಹಜ. ಜೊತೆಗೆ ನಿಮ್ಮ ನೆಚ್ಚಿನ ಸಾಧಕರನ್ನ ಹೆಸರುಗಳನ್ನ ಕಾಮೆಂಟ್ನಲ್ಲಿ ತಿಳಿಸಿ ಎಂದು ವೀಕ್ಷಕರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಿಮ್ಮೆಲ್ಲರ ನೆಚ್ಚಿನ ರಿಯಾಲಿಟಿ ಶೋ ವಿಕೇಂಡ್ ವಿಥ್ ರಮೇಶ್ ನಿಮ್ಮ ಮುಂದೆ ಬರಲು ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ. ಈಗ ಕರುನಾಡ ವೀಕ್ಷಕರಲ್ಲಿ ಈ ಹೊಸ ಸೀಸನ್ ಕಾರ್ಯಕ್ರಮದ ಬಗ್ಗೆ ಕೂತೂಹಲ ದುಪ್ಪಟ್ಟ ಆಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post