ರಾಜ್ಯದ 32 ಜಿಲ್ಲೆಗಳಿಗೂ ‘ಅಪ್ಪು ಎಕ್ಸ್ಪ್ರೆಸ್’ ಆ್ಯಂಬುಲೆನ್ಸ್ ಸೇವೆ ಆರಂಭಿಸುವುದಾಗಿ ನಟ ಪ್ರಕಾಶ್ ರಾಜ್ ಘೋಷಣೆ ಮಾಡಿದ್ದಾರೆ.
ತಮ್ಮ ಫೌಂಡೇಷನ್ ವತಿಯಿಂದ ‘ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲೆನ್ಸ್’ ಸೇವೆ ಆರಂಭಿಸಿದರು. ಈ ವೇಳೆ ಮಾತನಾಡಿರುವ ಪ್ರಕಾಶ್ ರಾಜ್, ನಾವು ಇಲ್ಲಿ ಸೇರಲು ಕಾರಣ ಅಪ್ಪು. ಅಂದು ಆ್ಯಂಬುಲೆನ್ಸ್ ಇದ್ದಿದ್ದರೆ ಅಪ್ಪು ಉಳಿದು ಬಿಡುತ್ತಿದ್ದರು ಎಂದು ಅನಿಸಿತು. ಅದಕ್ಕಾಗಿ ಈ ಅಪ್ಪು ಎಕ್ಸ್ಪ್ರೆಸ್. ಇದು ಕೇವಲ ಆರಂಭ ಮುಂದೆ 32 ಆ್ಯಂಬುಲೆನ್ಸ್ ಜಿಲ್ಲೆಗಳಿಗೆ ನೀಡುತ್ತೇನೆ.
ಇದನ್ನೂ ಓದಿ: ಬರ್ತ್ಡೇ ಸ್ಪೆಷಲ್.. ಅಪ್ಪು ಹೆಸರಲ್ಲಿ ಮತ್ತಷ್ಟು ಸಮಾಜ ಸೇವೆ ಮಾಡೋದಾಗಿ ಪ್ರಕಾಶ್ ರಾಜ್ ಘೋಷಣೆ
ಕೇವಲ ನನಗೆ ಮಾತ್ರವಲ್ಲ, ಪ್ರತಿಯೊಬ್ಬರಲ್ಲೂ ಅಪ್ಪು ಅಗಲಿಕೆಯ ನೋವು ಕಾಡುತ್ತಿದೆ. ಅಪ್ಪು ಅಗಲಿಕೆ ರಾಜ್ಯದ ಜನರಿಗೆ ನೋವು ತಂದಿತ್ತು. ನಮ್ಮ ಸಮಾಜಕ್ಕೆ ಮತ್ತಷ್ಟು ಕೆಲಸ ಆಗಬೇಕಿತ್ತು. ಮತ್ತೊಮ್ಮೆ ಅಪ್ಪು ಹುಟ್ಟು ಬರಲು 40 ವರ್ಷ ಬೇಕು ಎಂದು ಪುನೀತ್ ರಾಜ್ಕುಮಾರ್ ಅವರನ್ನ ಸ್ಮರಿಸಿದರು.
ಇದನ್ನೂ ಓದಿ: ನುಡಿದಂತೆ ನಡೆದ ಪ್ರಕಾಶ್ ರಾಜ್.. ‘ಅಪ್ಪು ಆ್ಯಂಬುಲೆನ್ಸ್ ಸೇವೆ’ ಆರಂಭ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post