ಬಾಗಲಕೋಟೆ: ಮಗ ನಾಪತ್ತೆ ಅಂತ ತಾಯಿ ದೂರು ನೀಡಿದ್ದ ಪ್ರಕರಣಕ್ಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿದ್ದ ಯುವಕ ಚೀಲದಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಮುಧೋಳ ತಾಲೂಕಿನ ನಾಗಣಾಪುರ ಗ್ರಾಮದಲ್ಲಿ ನಡೆದಿದೆ.
ವಸಂತ ಮಾಲಿಂಗಪ್ಪ ಕುರಬಳ್ಳಿ (24) ಕೊಲೆಯಾದ ಮಗನಾಗಿದ್ದು, ಪ್ರಕರಣದ ಸಂಬಂಧ ತಾಯಿ ಕಮಲವ್ವ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧನ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ..?
ನಾಗಣಾಪುರ ಗ್ರಾಮದ ವಸಂತ ಮಾಲಿಂಗಪ್ಪ ಕುರಬಳ್ಳಿ ನಾಪತ್ತೆಯಾಗಿರುವ ಬಗ್ಗೆ ತಾಯಿ ಕಮಲವ್ವ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ತನಿಖೆಯಲ್ಲಿ ಶಾಕಿಂಗ್ ಅಂಶಗಳು ಲಭ್ಯವಾಗಿತ್ತು. ನಾಪತ್ತೆಯಾಗಿದ್ದ ಯುವಕನ ಮೃತದೇಹ ಚೀಲದಲ್ಲಿ ಮೂಟೆ ಕಟ್ಟು ಬೀಸಾಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಕೂಡಲೇ ಪ್ರಕರಣ ವಿಚಾರಣೆ ತೀವ್ರಗೊಳಿಸಿದ ಪೊಲೀಸರಿಗೆ ಕೊಲೆ ಹಿಂದೆ ದೂರು ನೀಡಿದ್ದ ತಾಯಿಯೇ ಆರೋಪಿ ಅಂತ ತಿಳಿದು ಬಂದಿತ್ತು. ಅಂದಹಾಗೇ, ಮೃತ ವಸಂತ, ಕಮಲವ್ವಗೆ ದತ್ತು ಮಗನವಾಗಿದ್ದು, ಆಸ್ತಿ ಕೇಳಿದ್ದಕ್ಕೆ ಹಾಗೂ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿ ಬಂದಿದೇ ಕಾರಣ ಎನ್ನಲಾಗಿದೆ. ಆರೋಪಿ ಕಮಲವ್ವ ತನ್ನ ಮಗಳ ಗಂಡನ ತಂದೆ ನಿಂಗಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರ ಮಗನಿಗೆ ತಿಳಿದು ಆತ ಬುದ್ಧಿವಾದ ಹೇಳಿದ್ದನಂತೆ, ಇದರಿಂದ ತನ್ನ ಅಳಿಯಂದಿರು (ಹೆಣ್ಣು ಮಕ್ಕಳ ಗಂಡಂದಿರು) ಹಾಗೂ ಪ್ರಿಯಕರನ ಜೊತೆ ಸೇರಿ ಮಗನನ್ನೇ ಕೊಲೆ ಮಾಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೂನ್ 19 ರಂದು ಬೆಳಗ್ಗೆ 4 ಗಂಟೆಗೆ ತಾಯಿ ಕಮಲವ್ವ ,ಅಳಿಯಂದಿರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣ ಹಾಗೂ ಸಿಂಧೂರ ಬೀರಣ್ಣ ತಂದೆ, ಪ್ರಿಯಕರ ನಿಂಗಪ್ಪ ಸೇರಿ ವ ಕೊಲೆ ವಸಂತನನ್ನು ಕೊಲೆ ಮಾಡಿದ್ದಾರೆ. ಮನೆ ಬಳಿ ಮಲಗಿದ್ದ ವಸಂತನ ಎದೆ ಮೇಲೆ ಕಲ್ಲು ಎತ್ತಿ ಹಾಕಿ ಬಳಿಕ ಕತ್ತು ಮರ್ಮಾಂಗ ಹಿಸುಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆ ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ದಾಸನಾಳ ಸೀಮೆಯ ಕಾಲುವೆಯಲ್ಲಿ ಎಸೆದು ಬಂದಿದ್ದಾರೆ. ದಾಸನಾಳ ಸೀಮೆ ಪ್ರದೇಶ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರುತ್ತದೆ.
ಆ ಬಳಿಕ ತನಗೇನು ಗೊತ್ತಿಲ್ಲ ಎಂಬಂತೆ ತಾಯಿ ಕಮಲವ್ವ ಜುಲೈ 6 ರಂದು ಮಗ ನಾಪತ್ತೆ ಅಂತ ಲೋಕಾಪುರ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸ್ ತನಿಖೆ ವೇಳೆ ತಾಯಿ ಹಾಗೂ ಅಳಿಯಂದಿರ ಬಣ್ಣ ಬಯಲಾಗಿದೆ. ಘಟನೆ ನಡೆದ ಒಂದು ತಿಂಗಳ ಬಳಿಕ ಪೊಲೀಸರು ಕೊಲೆಗಡುಕರ ಬಣ್ಣ ಬಯಲು ಮಾಡಿದ್ದು, ವಯಸ್ಸಲ್ಲದ ವಯಸ್ಸಲ್ಲಿ ಕಮಲವ್ವಳ ಅನೈತಿಕ ಸಂಬಂಧ ಮಗನ ಕೊಲೆಗೆ ಕಾರಣವಾಗಿದೆ. ಆರೋಪಿಗಳನ್ನು ಬಂಧಿಸಿರುವ ಲೋಕಾಪುರ ಠಾಣೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post