ಕ್ರಿಕೆಟ್ ಜಗತ್ತಿನಲ್ಲಿ ಮುಂದಿನ ವರ್ಷದಿಂದ ಮತ್ತೊಂದು ಲೀಗ್ ಆರಂಭವಾಗಲಿದೆ. ಈ ಹೊಸ ಲೀಗ್ ಆರಂಭಕ್ಕೂ ಮುನ್ನ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗೆ ನಡುಕ ಶುರುವಾಗಿದೆ. ಯಾವುದು ಆ ಲೀಗ್..? ಆ ಲೀಗ್ನಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ಯಾಕೆ ಭಯ ಯಾಕೆ..? ನೋಡೋಣ ಬನ್ನಿ..!
IPL..! ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್. ಸಾವಿರಾರು ಕೋಟಿ ರೂಪಾಯಿಯ ಹಣದ ಹೊಳೆಯೇ, ಈ ಲೀಗ್ನಲ್ಲಿ ಹರಿಯುತ್ತೆ. ಒಂದೇ ಒಂದು ಅಂತಾರಾಷ್ಟ್ರೀಯ ಪಂದ್ಯವಾಡದ ಯುವ ಆಟಗಾರರು ಕೂಡ, ರಾತ್ರೋ ರಾತ್ರಿ ಕೋಟ್ಯಾಧಿಪತಿಗಳಾಗ್ತಾರೆ. ವಿದೇಶಿ ಆಟಗಾರರಂತೂ, ಐಪಿಎಲ್ಗಾಗಿ ದೇಶವನ್ನೇ ಬಿಡಲು ರೆಡಿ ಇರ್ತಾರೆ.
ವಿಶ್ವ ಕ್ರಿಕೆಟ್ನಲ್ಲಿ IPL ಆರಂಭವಾದ ಮೇಲೆಯೇ, T20 ಕ್ರಿಕೆಟ್ ಕ್ರೇಝ್ ಹೆಚ್ಚಾಯ್ತು ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. BBL , ಕೆರಿಬಿಯನ್ ಪ್ರೀಮಿಯರ್ ಲೀಗ್, ಪಾಕಿಸ್ತಾನ ಸೂಪರ್ ಲೀಗ್ ಹುಟ್ಟಿಕೊಳ್ಳಲು ಕೂಡ, ಐಪಿಎಲ್ ಕಾರಣ. ಈಗ ಮತ್ತೊಂದು ಲೀಗ್ ಮುಂದಿನ ವರ್ಷದಿಂದ ಆರಂಭವಾಗಲಿದೆ. UAEಯ ಎಮಿರೇಟ್ಸ್ ಕ್ರಿಕೆಟ್ ಬೋರ್ಡ್ನ ಟಿ20 ಲೀಗ್ಗೆ 2023ರಲ್ಲಿ ಕಿಕ್ಸ್ಟಾರ್ಟ್ ಸಿಗಲಿದೆ.
ಮುಂದಿನ ವರ್ಷದಿಂದ ILT20 ಆರಂಭ..!
IPLಫ್ರಾಂಚೈಸಿಗಳೇ ಅಲ್ಲೂ ಓನರ್ಗಳು..!
ಯೆಸ್..! 2023ರಿಂದ ಇಸಿಬಿ ನೇತೃತ್ವದಲ್ಲಿ ಇಂಟರ್ನ್ಯಾಷನಲ್ ಲೀಗ್ ಟಿ20 ಶುರುವಾಗಲಿದೆ. ಐಪಿಎಲ್ ಫ್ರಾಂಚೈಸಿ ಓನರ್ಗಳೇ, ಯುಎಇ ಲೀಗ್ನ ತಂಡಗಳನ್ನ ಖರೀದಿಸಿದ್ದಾರೆ. ಯುಎಇ ಲೀಗ್ನಲ್ಲಿ ಪ್ರತಿ ತಂಡಕ್ಕೆ 2.5 ಮಿಲಿಯನ್ ಡಾಲರ್ ಅಂದ್ರೆ, 20 ಕೋಟಿ ಪರ್ಸ್ ವ್ಯಾಲ್ಯೂ ನಿಗದಿಪಡಿಸಲಾಗಿದೆ. ಇದರಿಂದ ಪ್ರತಿ ಸ್ಟಾರ್ ಪ್ಲೇಯರ್ಗೆ, 3.5 ಕೋಟಿ ಸಿಗಲಿದೆ. ಐಪಿಎಲ್ಗೆ ಹೋಲಿಸಿದ್ರೆ ಈ ಮೊತ್ತ ತುಂಬಾನೇ ಕಡಿಮೆ. ಆದ್ರೆ ಬೇರೆ ಲೀಗ್ಗಳಿಗೆ ಹೋಲಿಸಿದ್ರೆ, ಇದೇ ಹೆಚ್ಚು. ಐಪಿಎಲ್ ನಂತರ ಅತ್ಯಂತ ಜನಪ್ರಿಯ ಆಗಿರೋ ಬಿಬಿಎಲ್ನಲ್ಲಿ, ಸ್ಟಾರ್ ಆಟಗಾರರು ಇದಕ್ಕಿಂತ ಕಡಿಮೆ ಮೊತ್ತಕ್ಕೆ ಕಾಂಟ್ರ್ಯಾಕ್ಟ್ ಮಾಡಿಕೊಂಡಿದ್ದಾರೆ.
UAE ಲೀಗ್ನಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ನಡುಕ ಶುರು..!
ದೇಶ- ಹಣ ಎರಡರಲ್ಲಿ ಯಾವುದು ಆಟಗಾರರ ಆಯ್ಕೆ..!
ಯೆಸ್..! ಬ್ಯಾಕ್ ಟು ಬ್ಯಾಕ್ ಲೀಗ್ಗಳಿಂದಾಗಿ, ಯುಎಇ ಲೀಗ್ಗೆ ಶೆಡ್ಯೂಲ್ ಸಮಸ್ಯೆ ಎದುರಾಗಿದೆ. ಲಂಕಾ ಪ್ರೀಮಿಯರ್ ಲೀಗ್, ಪಾಕಿಸ್ತಾನ ಪ್ರೀಮಿಯರ್ ಲೀಗ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಬಿಗ್ಬ್ಯಾಶ್ ಜೊತೆಗೆ ಮುಂದಿನ ವರ್ಷದಿಂದ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯೂ ಟಿ20 ಲೀಗ್ನ ನಡೆಸಲು ಮುಂದಾಗಿದೆ. ಇದರಿಂದ ಆಟಗಾರರು ಒಂದು ಲೀಗ್ನಲ್ಲಿ ಆಡಬೇಕಾದ್ರೆ, ಮತ್ತೊಂದು ಲೀಗ್ನಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ಇದರಿಂದ ಕ್ರಿಕೆಟ್ ಆಸ್ಟ್ರೇಲಿಯಾಗೆ ಸಂಕಷ್ಟ ಎದುರಾಗಿದೆ. ಬಿಗ್ಬ್ಯಾಶ್ ತೊರೆದು ನಮ್ಮ ಲೀಗ್ನಲ್ಲಿ ಆಡುವಂತೆ ಇಸಿಬಿ, ಡೇವಿಡ್ ವಾರ್ನರ್ ಸೇರಿದಂತೆ ಆಸ್ಟ್ರೇಲಿಯಾದ 15 ಆಟಗಾರರಿಗೆ ಆಫರ್ ನೀಡಿದೆ. ಪ್ರತಿಯೊಬ್ಬ ಆಟಗಾರರಿಗೆ 4 ಕೋಟಿ ಕಾಂಟ್ರ್ಯಾಕ್ ನೀಡಲು ರೆಡಿ ಇದ್ದೇವೆ ಎಂದು ಇಸಿಬಿ ಹೇಳಿದೆ. ಇದರಿಂದ ಕ್ರಿಕೆಟ್ ಆಸ್ಟ್ರೇಲಿಯಾದ ಬಿಗ್ಬ್ಯಾಶ್ ಲೀಗ್ಗೆ ಭಾರಿ ಹೊಡೆತ ಬೀಳಲಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ಚಿಂತೆ ಹೆಚ್ಚಿಸಿದೆ.
4 ಕೋಟಿ ಅಂದ್ರೆ, ಐಪಿಎಲ್ನಲ್ಲಿ ಅನ್ಕ್ಯಾಪ್ಡ್ ಪ್ಲೇಯರ್ಗೆ ನೀಡೋ ಮೊತ್ತ. ಆದ್ರೆ, ಬಿಬಿಎಲ್ನಿಂದ ಸಿಗೋ ಮೊತ್ತಕ್ಕೆ ಕಂಪೇರ್ ಮಾಡಿದ್ರೆ, ಆಸಿಸ್ ಆಟಗಾರರಿಗೆ ಇದು ಬಿಗ್ ಅಮೌಂಟ್ ಆಗಿದೆ. ಹೀಗಾಗಿ ಎಲ್ಲಿ ನಮ್ಮ ಆಟಗಾರರು ಹೆಚ್ಚಿನ ದುಡ್ಡಿನ ಆಸೆಗೆ, ಬಿಗ್ಬ್ಯಾಶ್ ಬಿಟ್ಟು ಯಎಇ ಲೀಗ್ ಆಯ್ಕೆ ಮಾಡಿಕೊಳ್ತಾರೋ.. ಅನ್ನೋ ಭಯ ಕ್ರಿಕೆಟ್ ಆಸ್ಟ್ರೇಲಿಯಾಗೆ ಕಾಡ್ತಿದೆ.
ವಾರ್ನರ್, ಕಮಿನ್ಸ್ಗೆ ಭಾರಿ ಆಫರ್ ನೀಡಿದ ಯುಎಇ ಲೀಗ್..!
ಯೆಸ್, ಯುಎಇ ಲೀಗ್ನಲ್ಲಿ ಪಾಲ್ಗೊಳ್ಳುವಂತೆ ಡೇವಿಡ್ ವಾರ್ನರ್ ಹಾಗೂ ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ಗೆ, ಯುಎಇ ಕ್ರಿಕೆಟ್ ಬೋರ್ಡ್ ಭಾರಿ ಮೊತ್ತದ ಆಫರ್ ನೀಡಿದೆ. ವಾರ್ನರ್ಗೆ 5.5 ಕೋಟಿ ಹಾಗೂ ಕಮ್ಮಿನ್ಸ್ಗೆ 4.5 ಕೋಟಿ ನೀಡಲು ರೆಡಿಯಾಗಿದೆ. ಇನ್ನು ಈ ಇಬ್ಬರು ಸ್ಟಾರ್ ಆಟಗಾರರು, ಯುಎಇ ಲೀಗ್ನಲ್ಲಿ ಆಡಲು ಅನುಮತಿ ನೀಡುವಂತೆ, ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
BCCIನಂತೆ ರೂಲ್ಸ್ ಜಾರಿಗೆ ತರುತ್ತಾ CA..?
ಒಂದು ವೇಳೆ ಆಸ್ಟ್ರೇಲಿಯಾ ಆಟಗಾರರು ಬಿಗ್ಬ್ಯಾಶ್ಗೆ ಗುಡ್ಬೈ ಹೇಳಿದ್ರೆ, ಸ್ಟಾರ್ ಆಟಗಾರರು ಇಲ್ಲದೇ ಬಿಗ್ಬ್ಯಾಶ್ ಲೀಗ್ ನಡೆಸಬೇಕಾಗುತ್ತೆ. ಇದರಿಂದ ಏನು ಮಾಡೋದು ಅಂತ ತಿಳಿಯದೇ ಕ್ರಿಕೆಟ್ ಆಸ್ಟ್ರೇಲಿಯಾ ತಲೆಮೇಲೆ ಕೈ ಹೊತ್ತು ಕೂತಿದೆ. ಅಲ್ಲದೇ, ತಮ್ಮ ಲೀಗ್ ರಕ್ಷಣೆಗಾಗಿ ಬಿಸಿಸಿಐನಂತೆ, ತಮ್ಮ ಆಟಗಾರರಿಗೆ ವಿದೇಶಿ ಲೀಗ್ಗಳಲ್ಲಿ ಭಾಗವಹಿಸದಂತೆ ನಿಯಮ ತರಲು ಕೂಡ CA ಚಿಂತಿಸ್ತಿದೆ.
ಅದೇನೆ ಇರಲಿ, ಅರಬ್ ರಾಷ್ಟ್ರದ ಹೊಸ ಟಿ20 ಲೀಗ್ನಿಂದ, ಕ್ರಿಕೆಟ್ ಆಸ್ಟ್ರೇಲಿಯಾಗೆ ಭಯ ಶುರುವಾಗಿರೋದಂತೂ ನಿಜ. ಮತ್ತೊಂದೆಡೆ ಆಸಿಸ್ ಆಟಗಾರರು ದೇಶ- ದುಡ್ಡು ಇವೆರಡರಲ್ಲಿ ಯಾವುದಕ್ಕೆ ತಮ್ಮ ನಿಷ್ಠೆ ತೋರಲಿದ್ದಾರೆ ಅನ್ನೋದು, ತೀವ್ರ ಕುತೂಹಲ ಮೂಡಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post