ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. 9 ಚಿನ್ನ, 9 ಬೆಳ್ಳಿ ಮತ್ತು 8 ಕಂಚು ಪದಕ ಪಡೆದು ದಾಖಲೆ ಸೃಷ್ಟಿಸಿದೆ. ಕೇವಲ ಒಂದು ಗಂಟೆ ಅಂತರದಲ್ಲೇ ಕುಸ್ತಿ ವೀರರು ಹ್ರ್ಯಾಟಿಕ್ ಚಿನ್ನ ಗೆದಿದ್ದಾರೆ. ಬಜರಂಗ್, ದೀಪಕ್ ಮತ್ತು ಸಾಕ್ಷಿ ಬಂಗಾರ ಗೆದ್ದು ಭಾರತದ ಕೀರ್ತಿ ಪತಾಕೆಯನ್ನ ಮತ್ತಷ್ಟು ಎತ್ತರಕ್ಕೆ ಹಾರಿಸಿದ್ದಾರೆ.. ಇದರ ಜೊತೆಗೆ ಅನ್ಶು ಮಲಿಕ್ ಬೆಳ್ಳಿ ಗೆದ್ರೆ, ದಿವ್ಯಾ ಕಕ್ರಾನ್ ಕಂಚು ಪದಕ ಪಡೆದು ಹೆಗ್ಗಳಿಕೆಗೆ ಕಾರಣವಾಗಿದ್ದಾರೆ.
🥇🥇🥇
A triple threat!
What a night for @WeAreTeamIndia in the wrestling!
They carry off three gold medals! 👏#CommonwealthGames #B2022 pic.twitter.com/P861ifstCk
— Commonwealth Sport (@thecgf) August 5, 2022
ಬರ್ಮಿಂಗ್ ಹ್ಯಾಮ್ನಲ್ಲಿ ನಡೆಯುತ್ತಿರೋ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಪದಕಗಳ ಬೇಟೆ ಮುಂದುವರೆದಿದೆ. ಕಳೆದ ರಾತ್ರಿ ನಡೆದ ಕುಸ್ತಿಯಲ್ಲಿ ಭಾರತದ ಬರೋಬ್ಬರಿ ಮೂವರು ಆಟಗಾರರು ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಕೇವಲ ಒಂದು ಗಂಟೆಯ ಅಂತರದಲ್ಲೇ ಮೂವರು ಕುಸ್ತಿ ಪಟುಗಳು ಬಂಗಾರದ ಬೇಟೆಯಾಡಿದ್ದಾರೆ.
ಬಂಗಾರದ ‘ಕುಸ್ತಿ’ವೀರರು..
ಕಳೆದ ರಾತ್ರಿ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ನಡೆದ ಕುಸ್ತಿಯಲ್ಲಿ ಬಜರಂಗ್ ಪೂನಿಯಾ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಕುಸ್ತಿಯ 65 ಕೆಜಿ ವಿಭಾಗದಲ್ಲಿ ಬಜರಂಗ್ ಪೂನಿಯಾಗೆ ಚಿನ್ನ ಗೆದ್ದಿದ್ದಾರೆ. ಕೆನಡಾದ ಲಂಚ್ಲನ್ ವಿರುದ್ಧ ಬಜರಂಗ್ ಪೂನಿಯಾ ಗೆದ್ದು ಬೀಗಿದ್ದಾರೆ. ವಿಶೇಷವೆಂದ್ರೆ, ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಗೆಲ್ಲೋ ಮೂಲಕ ಬಜರಂಗ್ ಹ್ಯಾಟ್ರಿಕ್ ಮೆಡಲ್ ಪಡೆದಿದ್ದಾರೆ.
Its raining medals for Indian wrestling!🥇
Sakshi Malik makes a strong comeback to clinch another GOLD for India in the women's 62 kg category!#CommonwealthGames2022 | #Wrestling #sakshimalik #GoldMedal #IndiaAt75 #Cheer4India #Birmingham2022 pic.twitter.com/wAa9ecoSZa— Manish Parab (@maniparab_07) August 5, 2022
ಇದಾದ ಕೆಲವೇ ನಿಮಿಷಗಳಲ್ಲೇ ಮಹಿಳೆಯರ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಚಿನ್ನದ ಬೇಟೆಯಾಡಿದ್ದಾರೆ. ಮಹಿಳೆಯರ 62 ಕೆ.ಜಿ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲ್ಲಿಕ್ ಬಂಗಾರ ಗೆದ್ದು ಬೀಗಿದ್ದಾರೆ. ಕೆನಡಾದ ಅನಾ ಗೊಡಿನೆಜ್ ವಿರುದ್ಧ ಸಾಕ್ಷಿ ಮಲಿಕ್ ಗೆಲುವಾಗಿತ್ತು. ಇಷ್ಟಕ್ಕೆ ಭಾರತದ ಚಿನ್ನದ ಬೇಟೆ ನಿಂತಿಲ್ಲ.
Complete Dominance!@BajrangPunia beats Canada's McNeil Lachlan in the men's freestyle 65 Kg weight category final to clinch the gold medal. This is seventh gold India has won so far in #CommonwealthGames2022 pic.twitter.com/G9ozbYkueD
— Namami Gange | #IndiaFightsCorona (@cleanganganmcg) August 5, 2022
ಸಾಕ್ಷಿ ಗೆದ್ದ ಕೆಲವೇ ನಿಮಿಷಗಳಲ್ಲೇ ಕುಸ್ತಿಯಲ್ಲಿ ದೀಪಕ್ ಪೂನಿಯಾ ಬಂಗಾರ ಗೆದ್ದಿದ್ದಾರೆ. ಕುಸ್ತಿಯ 86 ಕೆ.ಜಿ ವಿಭಾಗದಲ್ಲಿ ದೀಪಕ್ ಪೂನಿಯಾಗೆ ಚಿನ್ನಕ್ಕೆ ಮುತ್ತಿಕ್ಕಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ಇನಾಮ್ ವಿರುದ್ಧ ದೀಪಕ್ಗೆ ಗೆಲುವಾಗಿತ್ತು.
आज हरियाणा के पहलवान मैदान में है, आज बस सोना बरसेगा #DeepakPunia #Gold#CWG22 @deepakpunia86 pic.twitter.com/FEGGEzzHlc
— Pankaj Nain IPS (@ipspankajnain) August 5, 2022
ಕಾಮನ್ ವೆಲ್ತ್ನಲ್ಲಿ ತ್ರಿಮೂರ್ತಿಗಳು ಚಿನ್ನದ ಬೇಟೆಯಾಡ್ತಿದ್ರೆ, ಅತ್ತ 68 ಕೆಜಿ ಕುಸ್ತಿ ವಿಭಾಗದಲ್ಲಿ ದಿವ್ಯಾ ಕಕ್ರಾನ್ ಮತ್ತು 125 ಕೆಜಿ ವಿಭಾಗದಲ್ಲಿ ಮೋಹಿತ್ ಗ್ರೇವಾಲ್ಗೆ ಕಂಚು ಬಂದಿದೆ. ಟುಂಗಾದ ಟಿಜರ್ ಲಿಲ್ಲಿ ಕಾಕರ್ ವಿರುದ್ಧ ಗೆದ್ದು ಬೀಗಿದ್ದಾರೆ. ಇನ್ನು ಅನ್ಶು ಮಲಿಕ್ ಕೂಡ 57 ಕೆಜಿ ತೂಕ ವಿಭಾಗದಲ್ಲಿ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.
Our wrestlers are making the nation proud! 🇮🇳
Many congratulations to all of them for their inspiring performances in wrestling.Bajrang Punia 🥇
Deepak Punia 🥇
Sakshi Malik 🥇
Anshu Malik 🥈
Divya Kakran 🥉#CommonwealthGames2022 pic.twitter.com/vFA491gRHJ— VVS Laxman (@VVSLaxman281) August 6, 2022
ಸದ್ಯ ಕಾಮನ್ ವೆಲ್ತ್ನಲ್ಲಿ ಭಾರತ ಬರೋಬ್ಬರಿ 26 ಪದಕಗಳನ್ನ ಗೆಲ್ಲೋ ಮೂಲಕ ಇತಿಹಾಸ ನಿರ್ಮಿಸಿದೆ. 25 ಪದಕಗಳಲ್ಲಿ ಬರೋಬ್ಬರಿ 9 ಬಂಗಾರದ ಪದಕ, 9 ಬೆಳ್ಳಿ ಮತ್ತು 8 ಕಂಚು ಪದಕಗಳು ಇದರಲ್ಲಿ ಸೇರಿವೆ. ಇಷ್ಟಕ್ಕೆ ಮುಗಿದಿಲ್ಲ. ಭಾರತ, ಹಲವು ಕ್ರೀಡೆಗಳಲ್ಲಿ ಭಾಗಿಯಾಗಿದ್ದು, ಪದಕ ಗೆಲ್ಲೂ ಹಂತಕ್ಕೆ ಬಂದು ನಿಂತಿದೆ. ಇನ್ನು ಪದಕ ಗೆದ್ದ ಎಲ್ಲಾ ಆಟಗಾರರಿಗೂ ಪ್ರಧಾನಿ ಮೋದಿಯಿಂದ ಹಿಡಿದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಸೆಲೆಬ್ರೆಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post