ವೆಸ್ಟ್ ಇಂಡೀಸ್ ವಿರುದ್ಧದ ಟೀಂ ಇಂಡಿಯಾದ ಐದು ಪಂದ್ಯಗಳ ಟಿ20 ಸರಣಿಯ 4ನೇ ಪಂದ್ಯ ಇಂದು ನಡೆಯುತ್ತಿದೆ. ಈ ಸರಣಿ ಭಾಗವಾಗಿರೋ ಟೀಂ ಇಂಡಿಯಾದ ಗ್ರೇಟ್ ಫಿನಿಶರ್ ದಿನೇಶ್ ಕಾರ್ತಿಕ್ ಕೆಳಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.
ಇನ್ನು, ಟೀಂ ಇಂಡಿಯಾದ ಬೆಂಚ್ ಸ್ಟ್ರೆಂಥ್ ಬಗ್ಗೆ ಮಾತಾಡಿದ ದಿನೇಶ್ ಕಾರ್ತಿಕ್, ಸದ್ಯ ಒಂದಲ್ಲ, ಎರಡಲ್ಲ, ಮೂರು ತಂಡ ಮಾಡೋ ಸಾಮರ್ಥ್ಯ ನಮಗಿದೆ. ಅಷ್ಟು ಆಟಗಾರರು ಟೀಂ ಇಂಡಿಯಾದಲ್ಲಿ ಇದ್ದಾರೆ ಎಂದು ಹೇಳಿದರು.
ತಂಡದಲ್ಲಿ ಲಭ್ಯವಿರೋ ಆಟಗಾರರ ಸಂಖ್ಯ ಬಹಳ ದೊಡ್ಡದು. ಟೀಂ ಇಂಡಿಯಾ ಪ್ಲಾನ್ ಮಾಡಿದ್ರೆ ಒಮ್ಮೆಗೆ ಮೂರು ತಂಡಗಳನ್ನು ಕಣಕ್ಕಿಳಿಸಬಹುದು. ಈ ಬಗ್ಗೆ ಅನೇಕ ರಾಷ್ಟ್ರಗಳ ಹೆಮ್ಮೆಪಡುತ್ತಾರೆ ಎಂಬ ಬಗ್ಗೆ ನನಗೆ ಅನುಮಾನ ಇದೆ ಎಂದು ತಿಳಿಸಿದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post