ಚಾಮುಂಡಿ ಬೆಟ್ಟಕ್ಕೆ ಸುದೀಪ್ ಭೇಟಿ..
ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಸಕ್ಸಸ್ ಹಿನ್ನೆಲೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಸುದೀಪ್ರನ್ನ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದು ಕಂಡುಬಂತು. ಸುದೀಪ್ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಹೂ ಮಳೆ ಸುರಿಸಿದ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
‘ಗತವೈಭವಕ್ಕೆ’ ಆಶಿಕಾ ನಾಯಕಿ..
ಸಿಂಪಲ್ ಸುನಿ ಭತ್ತಳಿಕೆ ಬಹುನಿರೀಕ್ಷಿತ ಸಿನಿಮಾ ಗತವೈಭವ ಚಿತ್ರಕ್ಕೆ ಆಶಿಕಾ ರಂಗನಾಥ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್ ಈ ಚಿತ್ರದ ನಾಯಕರಾಗಿದ್ದು, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಹೀರೋ ಇಂಟರ್ಡಕ್ಷನ್ ಟೀಸರ್ ದಾಟಿಯಲ್ಲಿಯೇ ನಾಯಕಿಯನ್ನು ಪರಿಚಯಿಸಿರೋ ಸುನಿ ಅದಕ್ಕಾಗಿ ವಿಶೇಷವಾದ ವಿಡಿಯೋ ಬಿಡುಗಡೆ ಮಾಡಿದ್ದಾರೆ. ದೇವಕನ್ಯೆ ಗೆಟಪ್ನಲ್ಲಿ ಚುಟುಚುಟು ಬ್ಯೂಟಿ ಮಿಂಚಿರೋದು ಸ್ಪೆಷಲ್.
ಎನ್ಟಿಆರ್ ಮಗಳ ಮನೆಗೆ Jr NTR ಭೇಟಿ
ತೆಲುಗು ಚಿತ್ರರಂಗದ ಸೂಪರ್ಸ್ಟಾರ್ ಎನ್ಟಿ ರಾಮಾರಾವ್ ಅವರ ಕಿರಿಯ ಮಗಳು ಉಮಾ ಮಹೇಶ್ವರಿ ಎರಡು ದಿನಗಳ ಹಿಂದೆಯಷ್ಟೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು. ಆದ್ರೆ, ವಿದೇಶದಲ್ಲಿದ್ದ ಕಾರಣ ಜೂ ಎನ್ಟಿಆರ್ ಸೋದರತ್ತೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ, ಹೈದರಾಬಾದ್ಗೆ ಬಂದಿಳಿದ ಎನ್ಟಿಆರ್ ನೇರವಾಗಿ ಉಮಾ ಮಹೇಶ್ವರಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ರಾಜ್ಯಾದ್ಯಂತ ಜೋರು ‘ಗಾಳಿಪಟ-2’ ಪ್ರಚಾರ
ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಗಾಳಿಪಟ 2 ಸಿನಿಮಾ ಆಗಸ್ಟ್ 12 ರಂದು ರಾಜ್ಯಾದ್ಯಂತ ತೆರೆಕಾಣ್ತಿದ್ದು, ಎಲ್ಲೆಡೆ ಅದ್ಧೂರಿ ಪ್ರಚಾರ ಶುರು ಮಾಡಿದೆ. ಟ್ರೈಲರ್ ಮತ್ತು ಸಾಂಗ್ಸ್ ಹಿಟ್ ಆಗಿದ್ದು, ವಿಶೇಷವಾಗಿ ಕಾಲೇಜ್ ಸ್ಟೂಡೆಂಟ್ಸ್ ಹೆಚ್ಚು ಆಕರ್ಷಿತರಾಗ್ತಿದ್ದಾರೆ. ಹಾಗಾಗಿ, ರಾಜ್ಯದ ಹಲವು ಕಾಲೇಜುಗಳಲ್ಲಿ ಗಾಳಿಪಟ ಪ್ರಚಾರ ಜೋರಾಗಿ ನಡೀತಿದೆ.
ಮೋಸ್ಟ್ ವಾಂಟೆಡ್ ಹೀರೋಯಿನ್ ರಶ್ಮಿಕಾ
ದುಲ್ಕರ್ ಸಲ್ಮಾನ್ ನಟನೆಯ ‘ಸೀತಾರಾಮ’ ಪ್ರಿ-ರಿಲೀಸ್ ಇವೆಂಟ್ಗೆ ಅತಿಥಿಯಾಗಿ ಬಂದಿದ್ದ ಪ್ರಭಾಸ್, ರಶ್ಮಿಕಾ ಮಂದಣ್ಣರನ್ನ ಮೋಸ್ಟ್ ವಾಂಟೆಡ್ ಹೀರೋಯಿನ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ರಶ್ಮಿಕಾಗೆ ಮೋಸ್ಟ್ ವಾಂಟೆಡ್ ಹೀರೋಯಿನ್ ಅಂತ ಕರೆದಿರೋ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಶ್ಮಿಕಾ ಫ್ಯಾನ್ಸ್ ಸೆಲೆಬ್ರೇಟ್ ಮಾಡ್ತಿದ್ದಾರೆ. ಸೀತಾರಾಮ ಸಿನಿಮಾ ಆಗಸ್ಟ್ 5ರಂದು ರಿಲೀಸ್ ಆಗ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post