ಮಂಡ್ಯ: ಜಿಲ್ಲೆಯಲ್ಲಿ ರುಂಡವಿಲ್ಲದ ಮೃತದೇಹ ಪತ್ತೆ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್ ಸಿಕ್ಕಿದ್ದು, 2 ತಿಂಗಳ ಬಳಿಕ ಮಹಿಳೆಯರಿಬ್ಬರ ಮರ್ಡರ್ ಮಿಸ್ಟರಿ ಬಯಲಾಗಿದೆ.
ಸಿಕ್ಕಿದ್ದು 2 ಮೃತದೇಹ ಆದರೆ ಹಂತಕರು ಮಾಡಿದ್ದು 3 ಕೊಲೆ. ವೇಶ್ಯೆ ಪ್ರೀತಿಗೆ ಬಿದ್ದಿದ್ದ ಬೆಂಗಳೂರು ಮೂಲದ ಸಿದ್ದಲಿಂಗಪ್ಪ (35) ಪತ್ನಿ ಸಂಬಂಧಿ ಚಂದ್ರಕಲಾ ಜೊತೆ ಲವ್ವಿ ಡವ್ವಿ ನಡೆಸಿದ್ದನಂತೆ. ಪ್ರೇಯಸಿ ಜೊತೆ ವೇಶ್ಯಾವಟಿಕೆ ಲಿಂಕ್‌ನಲ್ಲಿದ್ದು ಮಹಿಳೆಯರೇ ಈತನ ಟಾರ್ಗೆಟ್ ಆಗಿದ್ದರಂತೆ.
ಚಂದ್ರಕಲಾಗೆ ಹಣ, ಚಿನ್ನಾಭರಣ ಆಸೆ ಹುಟ್ಟಿಸಿ ಮೂವರು ಮಹಿಳೆಯರ ಕೊಲೆ ಮಾಡಿಸಲಾಗಿದೆ ಎನ್ನಲಾಗಿದೆ. ಜೂ.6 ರಂದು ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ರುಂಡವಿಲ್ಲದ ಸ್ಥಿತಿಯಲ್ಲಿ ಮಹಿಳೆಯರಿಬ್ಬರ ಮೃತದೇಹ ಪತ್ತೆಯಾಗಿದ್ದವು. ಸಾವಿರಾರು ನಾಪತ್ತೆ ಪ್ರಕರಣಗಳನ್ನ ಜಾಲಾಡಿದ್ರು ಸುಳಿವು ಸಿಕ್ಕಿರಲಿಲ್ಲ. ಸದ್ಯ ಮಂಡ್ಯದ ಶ್ರೀರಂಗಪಟ್ಟಣ ಪೊಲೀಸರಿಗೆ ಸವಾಲಾಗಿದ್ದ ಪ್ರಕರಣವನ್ನು ಭೇದಿಸಲಾಗಿದೆ.
ಇತ್ತ ದೇಹದ ಮೇಲ್ಭಾಗ ಸಿಗದೆ, ಮೃತರ ನಾಪತ್ತೆ ಪ್ರಕರಣವೂ ದಾಖಲಾಗದೆ ಕೇಸ್ ಕಗ್ಗಂಟಾಗಿತ್ತು. ಈ ಪ್ರಕರಣ ಭೇದಿಸುವದೇ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಜು.25 ರಂದು ಚಾಮರಾಜನಗರದಲ್ಲಿ ದಾಖಲಾದ ಮಿಸ್ಸಿಂಗ್ ಕೇಸ್ನಿಂದ ಸದ್ಯ ಪ್ರಕರಣ ಬಯಲಾಗಿದೆ.
ಜು.3 ರಂದು ನಾಪತ್ತೆಯಾದ ಮಹಿಳೆ ಕುರಿತು ಜು.25 ರಂದು ದೂರು ನೀಡಲಾಗಿದೆ. ಕಾಲ್ ಲಿಸ್ಟ್ ಆಧರಿಸಿ ತನಿಖೆ ನಡೆಸಿದಾಗ 3 ಕೊಲೆ ಪ್ರಕರಣ ಬಯಲಾಗಿದೆ. ಮೇ 30 ರಂದು ಚಿತ್ರದುರ್ಗ ಮೂಲದ ಮಹಿಳೆ ಕೊಲೆಯಾಗಿದ್ದು, ಜು.3 ರಂದು ಚಾಮರಾಜನಗರ ಮೂಲದ ಮತ್ತೊಂದು ಮಹಿಳೆಯನ್ನು ಮನೆಗೆ ಕರೆಸಿ ಕುತ್ತಿಗೆ ಬಿಗಿದು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ರುಂಡ ಮುಂಡ ಬೇರ್ಪಡಿಸಿ ಹಂತಕರು ಎಸೆದಿದ್ದರು. ಚಾಮರಾಜನಗರ ಮೂಲದ ಮಹಿಳೆ ನಾಪತ್ತೆ ಪ್ರಕರಣ ಬಳಿಕ ಕೊಲೆ ರಹಸ್ಯ ಬಯಲಾಗಿದೆ. 2 ಕೊಲೆಗೂ ಮುನ್ನ ಬೆಂಗಳೂರಿನಲ್ಲಿ ಓರ್ವ ಮಹಿಳೆಯನ್ನು ರಾಕ್ಷಸರು ಕೊಲೆಗೈದಿದ್ದರು. ವಿಚಾರಣೆಯಲ್ಲಿ ಮತ್ತೊಂದು ಕೊಲೆ ಹಾಗೂ 5 ಹತ್ಯೆ ಸ್ಕೆಚ್ ಬಗ್ಗೆ ಪಾಪಿಗಳು ಬಾಯ್ಬಿಟ್ಟಿದ್ದಾರೆ.
ಸುಳಿವು ಕೊಟ್ಟವರಿಗೆ ಮಂಡ್ಯ ಪೊಲೀಸರಿಂದ 1 ಲಕ್ಷ ಬಹುಮಾನ..
ಅಪರಿಚಿತ ಮಹಿಳೆಯರಿಬ್ಬರ ಮೃತದೇಹ ಪತ್ತೆ ಪ್ರಕರಣ ಹಿನ್ನೆಲೆ ಶವಗುರುತು ಪತ್ತೆ ಹಚ್ಚಿ ಸುಳಿವು ಕೊಟ್ಟವರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಈ ಹಿಂದೆ ಮಂಡ್ಯ ಪೊಲೀಸರಿಂದ ಜನರಿಗೆ ಆಫರ್ ನೀಡಲಾಗಿತ್ತು. ಪ್ರತ್ಯೇಕ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಶವ ಪತ್ತೆಯಾಗಿತ್ತು.
ಪಾಂಡವಪುರ ವ್ಯಾಪ್ತಿಯ ಬೇಬಿ ಗ್ರಾಮದ ನಾಲೆಯಲ್ಲಿ ಒಂದು ಶವ ಪತ್ತೆಯಾದರೆ, ಶ್ರೀರಂಗಪಟ್ಟಣದ ಅರಕೆರೆಯಲ್ಲಿ ಇನ್ನೊಂದು ಶವ ಪತ್ತೆಯಾಗಿತ್ತು. ಎರಡು ಮೃತದೇಹಗಳು ಒಂದೇ ಮಾದರಿಯಲ್ಲಿ ಪತ್ತೆಯಾಗಿದ್ದು, ಒಂದೇ ರೀತಿ ಹತ್ಯೆಗೈದು ಮೃತದೇಹ ಪ್ರತ್ಯೇಕವಾಗಿ ಎಸೆಯಲಾಗಿತ್ತು. ಎಷ್ಟೇ ಹುಡುಕಾಡಿದರು ಶವಗಳ ಗುರುತು ಪತ್ತೆಯಾಗದ ಹಿನ್ನೆಲೆ ಜಿಲ್ಲೆಯ ಜನತೆಗೆ ಮಂಡ್ಯ ಪೊಲೀಸರಿಂದ 1 ಲಕ್ಷ ಬಂಪರ್ ಆಫರ್ ಘೋಷಣೆ ಮಾಡಲಾಗಿತ್ತು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post