ಓಟಿಟಿ ಬಿಗ್‌ಬಾಸ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಈ ಓಟಿಟಿ ಸೀಸನ್ ಕನ್ನಡಕ್ಕೆ ತುಂಬಾ ಹೊಸದು. ಹಿಂದಿಯಲ್ಲಿ ಈ ಫಾರ್ಮ್ಯಾಟ್ ಅಲ್‌ರೆಡಿ ವರ್ಕ್ ಆಗಿದೆ. ಕನ್ನಡಕ್ಕೆ ವರ್ಕ್ ಆಗುತ್ತಾ ಅನ್ನೋದೇ ಸದ್ಯದ ಕುತೂಹಲ. ಹಾಗಾಗಿ ಈ ಸ್ಪರ್ಧಿಗಳನ್ನ ಪಿಕ್ ಮಾಡಲಾಗಿದೆ.
1. ಯಾರು ಈ ನಂದಿನಿ..?
ಇವರು ಸಾಮಾನ್ಯ ಮಹಿಳೆ ಅಲ್ಲ. ಎಂಟಿವಿ ರೋಡಿಸ್ 2022 ರಿಯಾಲಿಟಿ ಶೋನ ವಿನ್ನರ್. ಪ್ರತಿಯೊಬ್ಬರನ್ನ ದಂಗು ಬಡಿಸಿದ ನಂದಿನಿ, ಈಗ ಓಟಿಟಿ ಬಿಗ್‌ಬಾಸ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ನಂದಿನಿ ಪ್ರೊಷೆಷನಲ್ ಫುಟ್‌ಬಾಲ್ ಪ್ಲೇಯರ್ ಮತ್ತು ಡ್ಯಾನ್ಸರ್. 25 ವರ್ಷದ ಈ ಅಥ್ಲಿಟ್, ಧೈರ್ಯವೇ ದೊಡ್ಡ ಅಸ್ತ್ರ. ಸಾಹಸ ಮಾಡೋದೇ ಇವರ ಹವ್ಯಾಸ. ರೋಡೀಸ್‌ನಲ್ಲಿ ಇವರ ತಾಕತ್ ನೋಡಿ ಬೆರಗಾದವರು ಸಿಕ್ಕಾಪಟ್ಟೆ ಜನ.
2. ಯಾರು ಈ ಜಸ್ವಂತ್ ಬೋಪಣ್ಣ..?
ಕರ್ನಾಟಕದ ಹ್ಯಾಂಡ್ಸಮ್ ಹುಡುಗ. ಕೂರ್ಗ್ ಯುವಕ. ಹೆಸರು ಜಸ್ವಂತ್ ಬೋಪಣ್ಣ. ಜಸ್ವಂತ್ ಬೋಪಣ್ಣ ನೋಡೋಕೆ ಥೇಟ್ ಭುವನ್ ಪೊನ್ನಣ್ಣನ ಥರಾನೇ ಇದ್ದಾನೆ. ಈತ ಕೂಡ ನಂದಿನಿಯಷ್ಟೇ ಟ್ಯಾಲೆಂಟೆಡ್. ಜಸ್ವಂತ್ ಮೊದಲು ಫಿಟ್‌ನೆಸ್ ಟ್ರೈನರ್. ಆ ನಂತರ ಡ್ಯಾನ್ಸರ್. ಆ ನಂತರ ಮಾಡಲ್ ಆಗಿ ಮಿಂಚಿದವರು. ಕಳೆದ ರೋಡಿಸ್ ಸೀಸನ್ ಫಸ್ಟ್ ರನ್ನರಪ್ ಆಗಿರೋ ಜಸ್ವಂತ್ ಬೋಪಣ್ಣ, ಕೂರ್ಗ್‌ನವರಾದರು ಹುಟ್ಟಿದ್ದು ಸೆಂಟರಲ್ ಆಫ್ರಿಕಾದ ಕೆಮಾರನ್‌ನಲ್ಲಿ. ಸ್ಕೂಲಿಂಗ್ ಮುಗಿಸಿ 2011ರಲ್ಲಿ ಇಂಡಿಯಾಗೆ ವಾಪಸ್ ಆದ ಜಸ್ವಂತ್ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಡಿಗ್ರಿ ಮುಗಿಸಿದರು. ಆ ನಂತರ ಮಾಡಲಿಂಗ್ ಕ್ಷೇತ್ರದಲ್ಲಿ ಮಿಂಚಿದರು. ಜೊತೆಗೆ ಫಿಟ್‌ನೆಸ್ ಟ್ರೈನರ್ ಆಗಿ ಹೆಚ್ಚು ಪ್ರಖ್ಯಾತಿ ಪಡೆದಿದ್ದಾರೆ ಜಸ್ವಂತ್.
3. ಯಾರು ಈ ಅರ್ಜುನ್..?
ಶನಿ ಸೀರಿಯಲ್‌ನಲ್ಲಿ ಶಿವನ ಪಾತ್ರ ಮಾಡಿದ್ದ ಅರ್ಜುನ್ ಓಟಿಟಿ ಬಿಗ್‌ಬಾಸ್ ಸೀಸನ್‌ನ ಸಂಭಾವ್ಯ ಸ್ಪರ್ಧಿ. ಅರ್ಜುನ್ ಕೇವಲ ಸೀರಿಯಲ್‌ಗಳಲ್ಲಿ ಮಾತ್ರ ಅಭಿನಯಿಸಿಲ್ಲ, ಕಲರ್ಸ್ ವಾಹಿನಿಯ ಶಾಂತಂ ಪಾಪಂ ಸೀರಿಸ್‌ನಲ್ಲಿ ಆ್ಯಂಕರ್ ಆಗಿಯೂ ಕಾಣಿಸಿಕೊಂಡಿದ್ದಾರೆ.
4. ಯಾರು ಈ ಸಾನ್ಯಾ..?
ಕಿರುತೆರೆಯ ಬೆಡಗಿ ಬಾಲ ನಟಿಯಾಗಿ ಎಂಟ್ರಿ ಕೊಟ್ಟಿದ್ದ ಈಕೆ, ಪುಟ್ಟಗೌರಿ ಎಂದೇ ಪ್ರಖ್ಯಾತ. ಡ್ಯಾನ್ಸಿಂಗ್ ಚಾಂಪಿಯನ್‌ನಲ್ಲಿ ಮಿಂಚಿದ್ದ ಈ ಸುಂದರಿ ಯಾರು ಗೊತ್ತಾ? ಅವರೆ ಸಾನ್ಯಾ. ಇವರ ಬಗ್ಗೆ ಹೇಳೋದೇ ಬೇಡ. ಈಕೆ ಚಿರಪರಿಚಿತ ಫೇಸ್. ಬಣ್ಣದ ಲೋಕದಲ್ಲಿ ಮುಂದೆ ಮಿಂಚುವ ಭರವಸೆ ಮೂಡಿಸಿರುವ ನಟಿ. ಸಾನ್ಯಾ ಕೂಡ ಓಟಿಟಿ ಬಿಗ್‌ಬಾಸ್ ಸೀಸನ್‌ನ ಸಂಭಾವ್ಯ ಸ್ಪರ್ಧಿ ಎಂದು ಹೇಳಲಾಗ್ತಿದೆ.
5. ಯಾರು ಈ ರಾಕೇಶ್..?
ಜೋಶ್ ಸಿನಿಮಾ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ರಾಕೇಶ್ ಉತ್ತಮ ನಟ ಕಮ್ ಸಿಂಗರ್. ಹಲವು ಸಿನಿಮಾಗಳಲ್ಲಿ ನಟಿಸಿರೋ ರಾಕೇಶ್, ಈ ಬಾರಿಯ ಬಿಗ್‌ಬಾಸ್ ಸ್ಪರ್ಧಿ ಎಂದು ಹೇಳಲಾಗ್ತಿದೆ.
6. ಯಾರು ಈ ಲೋಕೇಶ್..?
ರಿಯಾಲಿಟಿ ಶೋ ವೀಕ್ಷಕರಿಗೆ ಗೊತ್ತಿರೋರೇ. ಕಾಮಿಡಿ ಕಿಲಾಡಿಗಳು ಕಲಾವಿದ ಲೋಕೇಶ್ ಬಿಗ್‌ಬಾಸ್ ಸಂಭಾವ್ಯ ಸ್ಪರ್ಧಿ. ಜನರನ್ನ ಸಾಕಷ್ಟು ರಂಜಿಸಿರುವ ಲೋಕೇಶ್‌ಗೆ ಕರ್ನಾಟಕದ ಅತಿ ದೊಡ್ಡ ವೇದಿಕೆ ಬಿಗ್‌ಬಾಸ್ ಸಿಕ್ಕಿರೋ ಚಾನಸ್ಸ್ ಜಾಸ್ತಿಯಿದೆ. ಇನ್ನು, ಈರಣ್ಯ ಯೋಗೇಶ್ವರ್, ಅಕ್ಷತಾ, ಇದು ಈ ಓಟಿಟಿ ಬಿಗ್‌ಬಾಸ್ ಸೀಸನ್ ಒಂದರ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ಸಿಕಿದ್ದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post