ಕನ್ನಡ ಸಿನಿಮಾ ಪ್ರೇಕ್ಷಕರು ‘ವಿಕ್ರಾಂತ್ ರೋಣ’ ಚಿತ್ರದ ರಂಜನೆಯ ಕಾವಿನಲ್ಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಗಾಳಿಪಟ-2 ಮನೋರಂಜನೆ ಶುರುವಾಗಲಿದೆ. ಗಾಳಿಪಟದ ಗಮ್ಮತ್ತು ಶುರುವಾಗಿ ಒಂದೇ ವಾರಕ್ಕೆ ಎರಡು ಅದ್ಭುತ ಲವ್ ಸ್ಟೋರಿ ಸಿನಿಮಾಗಳ ಸಮಾಗಮ ಆಗಲಿದೆ. ಆಗಸ್ಟ್ 19ರಂದು ಎರಡು ಮ್ಯೂಸಿಕಲ್ ರೊಮ್ಯಾಟಿಕ್ ಸಿನಿಮಾಗಳ ರಂಜನೆ ಶುರುವಾಗಲಿದೆ. ಒಂದು ಮೊಗ್ಗಿನ ಮನಸು ಖ್ಯಾತಿಯ ಸೃಜನಾತ್ಮಕ ನಿರ್ದೇಶಕ ಶಶಾಂಕ್ ಸಾರಥ್ಯದ ‘ಲವ್ 360 ಡಿಗ್ರಿ’ ಮತ್ತೊಂದು ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮಾನ್ಸುನ್ ರಾಗ.
ಹೊಸಬರನ್ನ ಪ್ರೇಕ್ಷಕರ ಮುಂದೆ ನಿಲ್ಲಿಸಿ ಗೆಲ್ಲಿಸೋದರಲ್ಲಿ ನಿರ್ದೇಶಕ ಶಶಾಂಕ್ ಪಂಟರ್ ಅನ್ನಬಹುದು. 14 ವರ್ಷದ ಹಿಂದೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನ ಮೊಗ್ಗಿನ ಮನಸು ಸಿನಿಮಾದಲ್ಲಿ ನಿಲ್ಲಿಸಿ ಗೆಲ್ಲಿಸಿದ್ರು. ಈಗ ಮತ್ತು ಅದೇ ಫಾರ್ಮುಲದೊಂದಿಗೆ ಡಾ.ಪ್ರವೀಣ್ ಮತ್ತು ರಚನಾ ಇಂದಿರ್ ಅವರನ್ನ ಪ್ರೇಕ್ಷಕರ ಆಶೀರ್ವಾದಕ್ಕೆ ಲವ್ 360 ಡಿಗ್ರಿ ಸಿನಿಮಾದ ಮೂಲಕ ಮುಂದೆ ತರುತ್ತಿದ್ದಾರೆ. ಈಗಾಗಲೇ ‘ಲವ್ 360 ಡಿಗ್ರಿ’ ಸಿನಿಮಾದ ಜಗವೇ ನೀನು ಗೆಳತಿಯೆ ಹಾಡು ಕನ್ನಡಿಗರ ಫೇವರೆಟ್ ಗೀತೆಯಾಗಿ ಗೆದ್ದಿದೆ. ಜೊತೆಗೆ ಶಿವಣ್ಣ ಅವರಿಂದ ಲಾಂಚ್ ಆದ ಟ್ರೈಲರ್ ಕೂಡ ಸಖತ್ ಇಂಪ್ರೆಸಿವ್ ಆಗಿದೆ. ಲವ್ 360 ಡಿಗ್ರಿ ಸಿನಿಮಾ ಟ್ರೈಲರ್ ನೋಡ್ತಾ ಇದ್ರೆ ಪಕ್ಕಾ ನಾಯಕಿ ರಚನಾ ಇಂದರ್ಗೆ ರಾಜ್ಯ ಪ್ರಶಸ್ತಿ ಬಂದೆ ಬರುತ್ತೆ ಅನ್ಸುತ್ತೆ. ಅಷ್ಟು ಅದ್ಭುತವಾಗಿ ‘ಲವ್ 360 ಡಿಗ್ರಿ’ ಸಿನಿಮಾದಲ್ಲಿ ಹೆಂಗೆ ನಾವು ಖ್ಯಾತಿ ರಚನಾ ಅಭಿನಯ ಮಾಡಿದ್ದಾರೆ.
‘ಲವ್ 360’ ಡಿಗ್ರಿ ಸಿನಿಮಾದ ಜೊತೆಗೆ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಕೂಡ ನಿರೀಕ್ಷೆಯ ಲೋಕ ಫೆವರೆಟ್ ಆಗಿರೋದು ವಿಶೇಷ. ಕಳೆದ ದಿನ ರಿಲೀಸ್ ಆದ ಮಾನ್ಸೂನ್ ರಾಗ ಟ್ರೈಲರ್ ವಾವ್ ಅನ್ನಿಸೋ ಮಟ್ಟಕ್ಕೆ ಮೂಡಿಬಂದಿದ್ದು ಮಾನ್ಸೂನ್ ರಾಗ ಶೋರ್ ಶಾಟ್ ಏನಾದ್ರು ಮಾಡೇ ಮಾಡುತ್ತೆ ಅನ್ನೋ ಭರವಸೆ ಈಗ ಸಿನಿಮಾ ಲೋಕದಲ್ಲಿ ಮೂಡಿದೆ. ಇವತ್ತಿನ ಫೈವ್ ಜಿ ಪ್ರೇಕ್ಷಕರನ್ನ ಸೇಳೆಯಲು ಮುಖ್ಯವಾಗಿ ಬೇಕಾಗಿರೋದು ಮ್ಯೂಸಿಕ್ ಮತ್ತು ಮೇಕಿಂಗ್. ಈ ಎರಡು ಚೆನ್ನಾಗಿದ್ದರೆ ಥಿಯೇಟರ್ನ ಕಡೆ ತಿರುಗಿ ನೋಡ್ತಾರೆ ಬುದ್ಧಿವಂತ ಪ್ರೇಕ್ಷಕರು. ಈಗ ಪ್ರೇಕ್ಷಕ ಪ್ರಭುಗಳನ್ನ ತನ್ನತ್ತ ತಿರುಗಿ ನೋಡುವ ಕೆಲಸ ಮಾಡ್ತಿದೆ ಮಾನ್ಸೂನ್ ರಾಗ. ಅದ್ಭುತ ಮ್ಯೂಸಿಕ್ ಕಲರ್ಫುಲ್ ದೃಶ್ಯಗಳು, ಮೀನಿಂಗ್ ಫುಲ್ ಡೈಲಾಗ್ಸ್, ಭರವಸೆ ಮೂಡಿಸುವ ನಟರು. ಈ ಎಲ್ಲದರ ಸಮಿಶ್ರಣದಂತೆ ಕಾಣುತ್ತಿದೆ ಮಾನ್ಸೂನ್ ರಾಗ.
ಬಹುನಿರೀಕ್ಷಿತ ‘ಮಾನ್ಸೂನ್ ರಾಗ’ ಸಿನಿಮಾ ಟ್ರೈಲರ್ ರಿಲೀಸ್ ಆಗಿದ್ದು, ರಾಜ್ಯಾದ್ಯಂತ ಆಗಸ್ಟ್ 19ಕ್ಕೆ ಸಂಪೂರ್ಣ ಸಿನಿಮಾ ಥಿಯೇಟರ್‌ನಲ್ಲಿ ರಿಲೀಸ್ ಆಗ್ತಿದೆ. ಅಂದಹಾಗೆ ಇದು ಭಾವನಾತ್ಮಕವಾಗಿರುವ ಮ್ಯೂಸಿಕಲ್ ಸಿನಿಮಾವಂತೆ. ‘ನಟ ರಾಕ್ಷಸ’ ಎಂದೇ ಖ್ಯಾತಿ ಪಡೆದಿರುವ ನಟ ಡಾಲಿ ಧನಂಜಯ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಅವರು ಮೊದಲ ಬಾರಿಗೆ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿರುವುದು ವಿಶೇಷ. ವಿಖ್ಯಾತ್ ಗೌಡ ನಿರ್ಮಾಣದಲ್ಲಿ ಎಸ್.ರವಿಂದ್ರನಾಥ್ ನಿರ್ದೇಶನದಲ್ಲಿ ಮಾನ್ಸೂನ್ ರಾಗ ಮೂಡಿಬಂದಿದ್ದು ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಈ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾಕ್ಕೆ ಪ್ರೇಕ್ಷಕರ ಹೆಚ್ಚಿನ ಆಶೀರ್ವಾದ ಸಿಗಲಿದೆ ಅನ್ನೋದನ್ನ ಕಾದು ನೋಡಬೇಕು.
View this post on Instagram
Thanks bro @dr_bhushana ❤️ https://t.co/tYc4mX7STM
— Dhananjaya (@Dhananjayaka) August 6, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post