ಚೆನ್ನೈ: ಗಂಜಿ ಬೇಯಿಸುತ್ತಿದ್ದ ಪಾತ್ರೆಗೆ ಬಿದ್ದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಧುರೈನಲ್ಲಿ ನಡೆದಿದೆ. ಮುತ್ತುಕುಮಾರ್ ಮೃತ ದುರ್ದೈವಿ. ಈ ದುರ್ಘಟನೆಯ ಭಯಾನಕ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮಧುರೈನ ಪಜಂಗನಾಥಂ ಬಳಿ ಮುತ್ತು ಮಾರಿಯಮ್ಮಮ್ ದೇವಸ್ಥಾನದ ಭಕ್ತರಿಗಾಗಿ ಶುಕ್ರವಾರ ದೊಡ್ಡದಾದ ಪಾತ್ರದಲ್ಲಿ ಅನ್ನ ಬೇಯಿಸಲಾಗುತ್ತಿತ್ತು. ಬಿಸಿ ಗಂಜಿಗೆ ಬಿದ್ದ ಮುತ್ತುಕುಮಾರ್ ಅಡುಗೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದು, ಈ ವೇಳೆ ತಲೆ ತಿರುಗಿ ಬಿಸಿ ಗಂಜಿಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಜುಲೈ 29 ರಂದು ಈ ಘಟನೆ ನಡೆದಿದ್ದು, ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post