ಸೋಶಿಯಲ್ ಮೀಡಿಯಾದಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ವೈರಲ್ ಆಗಿರೋ ವಿಡಿಯೋ ಒಂದನ್ನ ಶೇರ್ ಮಾಡಿದ್ದಾರೆ. ಎದೆ ನಡುಗಿಸುವ ವಿಡಿಯೋ ಅದಾಗಿದ್ದು, ವೀಕ್ಷಕರನ್ನ ಒಂದು ಸಲ ದಂಗುಬಡಿಸುವಂತಿದೆ.
ಏನಿದೆ ವಿಡಿಯೋದಲ್ಲಿ..?
ವ್ಯಕ್ತಿಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಅಂಗಡಿಗೆ ಬರುತ್ತಿರುತ್ತಾರೆ. ಅಂಗಡಿ ಸಮೀಪಿಸುತ್ತಿದ್ದಂತೆಯೇ ವ್ಯಕ್ತಿ ಸೈಡ್ವಾಕ್ ಮೇಲೆ ಕಾಲಿಟ್ಟು ಅಂಗಡಿಗೆ ಹೋಗಲು ಮುಂದಾಗ್ತಾರೆ. ಅದರಂತೆ ವಾಕರ್ ಮೇಲೆ ಹೆಜ್ಜೆಯನ್ನಿಟ್ಟು ಮುಂದೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಕೊನೆ ಕ್ಷಣದಲ್ಲಿ ಸೈಡ್ವಾಕರ್ ಹಠಾತ್ ಡ್ರೈನ್ಗೆ ಕುಸಿದು ಬೀಳುತ್ತದೆ. ಅದೃಷ್ಟ ಅಂದರೆ ಆ ನ್ಯಾರೋ ಎಸ್ಕೇಪ್ ಆಗಿದ್ದಾರೆ. ಒಂದು ಸೆಕೆಂಡ್ ಯಾಮಾರಿದ್ರೂ ಅವರೂ ಸಹ ಕುಸಿದು ಬೀಳುವವರಿದ್ದರು.
30 ಸೆಕೆಂಡ್ ಇರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
I’m going to spend the weekend trying to figure out what message the Universe was sending this man. What would you be thinking if you were him? pic.twitter.com/U55PDCZPry
— anand mahindra (@anandmahindra) August 5, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post