ಕಲಬುರಗಿ; ಬೆಂಗಳೂರಿನಲ್ಲಿ ಭರ್ಜರಿ ರೆಸ್ಪಾನ್ಸ್ ಬಳಿಕ ಕಲಬುರಗಿಯಲ್ಲಿ ನ್ಯೂಸ್ ಫಸ್ಟ್ ಎಜುಕೇಶನ್ ಕಾನ್‌ಕ್ಲೇವ್ ಆಯೋಜನ ಮಾಡಲಾಗಿದೆ. ವಿಟಿಯು ಎಜುಕೇಶನ್ ಕಾನ್‌ಕ್ಲೇವ್ ಇವತ್ತು ಮತ್ತು ನಾಳೆ ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರ್ ಕಾಲೇಜುಗಳು ಇದರಲ್ಲಿ ಭಾಗಿಯಾಗಲಿವೆ. ಒಂದೇ ಸೂರಿನಡಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಲಭ್ಯವಾಗಲಿದೆ. ಎಲ್ಲ ಅನುಮಾನಗಳಿಗೆ ಸ್ಥಳದಲ್ಲೇ ಪರಿಣಿತರು ಮತ್ತು ತಜ್ಞರುಗಳಿಂದ ಉತ್ತರ ಸಿಗಲಿದೆ.
VTU ಸಹಯೋಗದಲ್ಲಿ ನ್ಯೂಸ್ ಫಸ್ಟ್ ಎಜುಕೇಷನ್ ಕಾನ್ ಕ್ಲೇವ್..
ಪಿಯುಸಿ ರಿಸಲ್ಟ್ ಬಂದಿದೆ. ಎಂಜಿನಿಯರಿಂಗ್‌ಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಯಾವ ಕೋರ್ಸ್ ತಗೊಳ್ಬೇಕು, ಯಾವ ಕಾಲೇಜು ಒಳಿತು, ಫೀ ಸ್ಟ್ರಕ್ಚರ್ ಹೇಗೆ ಹೀಗೆ ಒಂದಲ್ಲ ಹತ್ತಾರು ಗೊಂದಲಗಳಿರ್ತವೆ. ಆ ಗೊಂದಲಗಳಿಗೆ ತೆರೆ ಎಳೆಯಲು ನ್ಯೂಸ್ ಫಸ್ಟ್ ಮತ್ತೊಮ್ಮೆ ವೇದಿಕೆಯೊಂದು ಕಲ್ಪಿಸಿದೆ. ಬೆಂಗಳೂರಿನಲ್ಲಿ ನಡೆದ ಎಜುಕೇಷನ್ ಕಾನ್‌ಕ್ಲೇವ್ ಸಕ್ಸಸ್ ಬಳಿಕ, ಕಲ್ಯಾಣ ಕರ್ನಾಟಕಕ್ಕೂ ಎಜುಕೇಷನ್ ಕಾನ್‌ಕ್ಲೇವ್ ಕಾಲಿಟ್ಟಿದೆ.
ಕಲಬುರಗಿಯಲ್ಲಿ ಇಂದಿನಿಂದ 2 ದಿನ ಎಜುಕೇಷನ್ ಕಾನ್‌ಕ್ಲೇವ್..
ವಿಟಿಯು ಸಹಯೋಗದೊಂದಿಗೆ ನ್ಯೂಸ್ ಫಸ್ಟ್ ನಡೆಸುತ್ತಿರುವ ಎಜುಕೇಷನ್ ಕಾನ್ ಕ್ಲೇವ್ 2 ದಿನಗಳ ಕಾಲ ಕಲಬುರಗಿಯಲ್ಲಿ ನಡೆಯುತ್ತಿದೆ. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಾನ್ ಕ್ಲೇವ್ ಇದ್ದು, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ಪ್ರತಿಷ್ಠಿತ ಇಂಜಿನಿಯರ್ ಕಾಲೇಜುಗಳು ಇದರಲ್ಲಿ ಭಾಗಿಯಾಗಲಿವೆ.
ಕಲಬುರಗಿಯಲ್ಲಿ ಇಂದು, ನಾಳೆ ಎಜುಕೇಜನ್ ಕಾನ್ ಕ್ಲೇವ್..
ಕಲಬುರಗಿಯಲ್ಲಿ ಇಂದು ಮತ್ತು ನಾಳೆ ವಿಟಿಯು ಸಹಯೋಗದೊಂದಿಗೆ ನ್ಯೂಸ್ ಫಸ್ಟ್ ಎಜುಕೇಷನ್ ಕಾನ್ ಕ್ಲೇವ್ ನಡೆಯುತ್ತಿದೆ. ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಎಜುಕೇಜನ್ ಕಾನ್ ಕ್ಲೇವ್ ಇದ್ದು, ಪರಿಷತ್ ಸದಸ್ಯ ಶಶೀಲ್ ನಮೋಸಿ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 10 ಗಂಟೆಗೆ ಎಜ್ಯೂಕೇಷನ್ ಕಾನ್ ಕ್ಲೇವ್ಗೆ ಉದ್ಘಾಟನೆಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಕಾನ್ ಕ್ಲೇವ್ನಲ್ಲಿ 20ಕ್ಕೂ ಹೆಚ್ಚು ಇಂಜಿನಿಯರ್ ಕಾಲೇಜುಗಳು ಆಗಮಿಸಿವೆ. ಜೊತೆಗೆ ಕಾನ್ಕ್ಲೇವ್ನಲ್ಲಿ ಡಿಸಿ ಯಶವಂತ್ ಗುರುಕರ್, ಪೊಲೀಸ್ ಆಯುಕ್ತ ರವಿಕುಮಾರ್ ಕೂಡ ಉಪಸ್ಥಿತಿ ಇರಲಿದ್ದಾರೆ.
ಬೆಂಗಳೂರಿನಲ್ಲಿ ನ್ಯೂಸ್ ಫಸ್ಟ್ನ ಕಾನ್ಕ್ಲೇವ್ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಕಲಬುರಗಿಯಲ್ಲೂ ಇಂಜಿನಿಯರ್ ಕನಸು ಕಾಣ್ತಿರುವ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ನ್ಯೂಸ್ ಫಸ್ಟ್ ಎಜುಕೇಷನ್ ಕಾನ್ ಕ್ಲೇವ್ ಆಯೋಜಿಸುತ್ತಿದೆ. ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕೋರ್ಸ್ಗಳಿಗೆ ಸಂಬಂಧಪಟ್ಟ ಮಾಹಿತಿ ಪಡೆಯೋ ಮೂಲಕ ಸದುಪಯೋಗ ಪಡೆದುಕೊಳ್ಳಬೇಕಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post