ನಿನ್ನೆ ನಾಡಿನೆಲ್ಲಡೆ ವರಮಹಾಲಕ್ಷ್ಮೀ ಹಬ್ಬವನ್ನ ಸಂಭ್ರಮ, ಸಡಗರದಿಂದ ಆಚರಿಸಲಾಯಿತು. ಅದರಂತೆ ರಾಕಿಂಗ್ ಸ್ಟಾರ್ ಯಶ್ ನಿವಾಸದಲ್ಲೂ ವರಮಹಾಲಕ್ಷ್ಮೀ ಹಬ್ಬದ ಸಗಡರ ಜೋರಾಗಿತ್ತು.
ಇಂದು ಬೆಳಗ್ಗೆ ನಟಿ ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಬ್ಬದ ಸಡಗರವನ್ನ ಹಂಚಿಕೊಂಡಿದ್ದಾರೆ. ಇಬ್ಬರು ಮುದ್ದಾದ ಮಕ್ಕಳ ಜೊತೆ ಹಬ್ಬವನ್ನ ಆಚರಿಸಿರುವ ರಾಧಿಕಾ ಪಂಡಿತ್, ಮಕ್ಕಳ ಜೊತೆಗಿನ ಕೆಲವು ಫೋಟೋಗಳನ್ನ ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾರೆ.
ಎಲ್ಲಾ ಫೋಟೋ ಒಂದಕ್ಕಿಂತ ಒಂದು ಕ್ಯೂಟ್ ಆಗಿವೆ. ಐರಾ, ಯಥರ್ವ ಹಾಗೂ ನೆಚ್ಚಿನ ನಟಿಯನ್ನ ಕಣ್ತುಂಬಿಕೊಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post