ಬಹುನಿರೀಕ್ಷಿತ ಬಿಗ್‌ಬಾಸ್ ಹೊಸ ಸೀಸನ್ ಓಟಿಟಿಯಲ್ಲಿ ಈಗಾಗಲೇ ಶುರುವಾಗಿದೆ. ಇದೀಗ ಎರಡನೇ ಸ್ಪರ್ಧಿಯಾಗಿ ಇನ್ಸ್ಟಾಗ್ರಾಮ್ನಿಂದ ಫೇಮಸ್ ಆಗಿರುವ ಸೋನು ಶ್ರೀನಿವಾಸ ಗೌಡ ಬಿಗ್ ಬಾಸ್ಗೆ ಹೋಗ್ತಾರೆ ಎಂದು ಈ ಮೊದಲು ಮಾಹಿತಿ ನೀಡಿದ್ವಿ. ಈಗ ಆ ಸುದ್ದಿ ನಿಜವಾಗಿದ್ದು, ಎರಡನೇ ಬಿಗ್ ಬಾಸ್ ಸ್ಪರ್ಧಿಯಾಗಿ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಹಲವು ಕಾಂಟ್ರೋವರ್ಸಿಗಳಿಗೆ ತುತ್ತಾಗಿರುವ ಸೋನು ಶ್ರೀನಿವಾಸ ಗೌಡ ಓಟಿಟಿಯಲ್ಲಿ ಸದ್ದು ಮಾಡೋಕೆ ಸಿದ್ದರಾದಂತೆ ಕಾಣುತಿತ್ತು. ಸುದೀಪ್ ಅವರು ಹೇಗೆ ಅನಿಸ್ತಿದೆ ಅಂತಾ ಕೇಳಿದಾಗ ತುಂಬಾ ಖುಷಿಯಾಗ್ತಿದೆ ಎಕ್ಸ್ಪ್ರೆಸ್ ಮಾಡೋಕೆ ಆಗ್ತಿಲ್ಲ ಎಂದರು. ಅದಕ್ಕೆ ಕಿಚ್ಚ ಹೇಳ್ಬೇಕು.. ಏನೇನೋ ಹೇಳಿದ್ದೀರಂತೆ ಎಂದು ವೇದಿಕೆಯ ಮೇಲೆ ತಮಾಷೆ ಮಾಡಿದ್ದಾರೆ.
ಇನ್ನು ಮಾತನ್ನ ಮುಂದುವರೆಸಿದ ಸುದೀಪ್, ಎಷ್ಟು ಪ್ರಿಪೇರ್ ಆಗಿದ್ದೀರಿ ಅಂತಾ ಕೇಳಿದಾಗ, ಅದಕ್ಕೆ ಸೋನು ಪ್ರಿಪರೇಶನ್ ಅಂತಾ ಏನೂ ಆಗಿಲ್ಲ ಸರ್. ಏನೇ ಇದ್ರೂ ಆನ್ ಸ್ಪಾಟ್ನಲ್ಲಿಯೇ ಮಾತ್ನಾಡ್ತೀನಿ ಅಂದ್ರು. ಅದಕ್ಕೆ ಸುದೀಪ್ ಅದು ಗೊತ್ತು ನಮಗೆ ಅಂತಾ ಮತ್ತೇ ಟಾಂಗ್ ಕೊಟ್ಟಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post