ಇಂಜುರಿಯಿಂದಾಗಿ ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿರೋ ಕೆ.ಎಲ್ ರಾಹುಲ್ ಹಾಗೂ ವೇಗಿ ದೀಪಕ್ ಚಹರ್, ಏಷ್ಯಾಕಪ್ ಟೂರ್ನಿಗಾಗಿ ತಂಡಕ್ಕೆ ಕಮ್ಬ್ಯಾಕ್ ಮಾಡಲಿದ್ದಾರೆ.
ಇಬ್ಬರು ಸ್ಟಾರ್ ಆಟಗಾರರು ಸಂಪೂರ್ಣ ಫಿಟ್ ಆಗಿದ್ದು, ತಂಡದ ಆಯ್ಕೆಗೆ ಲಭ್ಯರಿದ್ದಾರೆ. ಆಗಸ್ಟ್ 8 ರಂದು ಆಯ್ಕೆ ಸಮಿತಿ ಏಷ್ಯಾಕಪ್ಗಾಗಿ ತಂಡವನ್ನ ಪ್ರಕಟಿಸಲಿದೆ. ಆಗಸ್ಟ್ 27 ರಿಂದ ಸೆಪ್ಟೆಂಬರ್ 11ರವರೆಗೆ ಯುಎಇನಲ್ಲಿ ಏಷ್ಯಾಕಪ್ ಟೂರ್ನಿಯ ನಡೆಯಲಿದೆ.
ಮುಂಬರುವ ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾದ ಆಯ್ಕೆ ಸರ್ಕಸ್ ಜೋರಾಗಿದೆ. ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲೂ ಇದೇ ತಂಡ ಕಣಕ್ಕಿಳಿಯುತ್ತೆ ಅನ್ನೋ ಸಂದೇಶ ರವಾನೆಯಾಗಿದೆ. ಹೀಗಾಗಿ ಆಯ್ಕೆ ಸಮಿತಿ ಮತ್ತು ಮ್ಯಾನೇಜ್ಮೆಂಟ್ ಸದ್ಯ ಅಳೆದು ತೂಗೋ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದು, ಚುಟುಕು ವಿಶ್ವಕಪ್ಗೂ ಮುನ್ನ ಕೋರ್ ಟೀಮ್ ಸೆಟ್ ಮಾಡಲು ಮುಂದಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post