ಚೀನಾದ ನರಿಬುದ್ಧಿಯಿಂದಾಗಿ ಜನಪ್ರಿಯ ರೀಲ್ಸ್ ಆ್ಯಪ್ ಟಿಕ್ಟಾಕ್ (TikTok) ಭಾರತದಲ್ಲಿ ಬ್ಯಾನ್ ಆಗಿದೆ. ಅದೆಷ್ಟೋ ರೀಲ್ಸ್ ಪ್ರಿಯರು ನೊಂದುಕೊಂಡಿದ್ದರು. ಲೇಟೆಸ್ಟ್ ವರದಿಗಳ ಪ್ರಕಾರ ಮತ್ತೆ ಟಿಕ್ಟಾಕ್ ಭಾರತಕ್ಕೆ ವಾಪಸ್ ಆಗಲಿದೆಯಂತೆ.
ರೀಲ್ಸ್ ಪ್ರಿಯರಿಗೆ ಗುಡ್ನ್ಯೂಸ್
ಭಾರತದಲ್ಲಿ ಪುನರ್ ಆರಂಭಿಸುವ ಬಗ್ಗೆ TikTokನ Byetdance ಕಂಪನಿಯ ಮಾಲೀಕರು ಕಳೆದ ಒಂದು ತಿಂಗಳ ಹಿಂದೆ ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಮಾತುಕತೆ ನಡೆಸಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಸ್ಕೈಸ್ಪೋರ್ಟ್ಸ್ನ (Skyesports) ಸಿಇಓ ಶಿವ ನಂದೆ ಜೊತೆ ಮಾತುಕತೆ ನಡೆದಿದೆ ಎನ್ನಲಾಗಿದೆ. 2020 ವೇಳೆಗೆ ಚೀನಾ ಆ್ಯಪ್ ಟಿಕ್ಟಾಕ್ ಭಾರತದಾದ್ಯಂತ ಆವರಿಸಿಕೊಂಡಿತ್ತು. ಆದರೆ ಭಾರತ ಸರ್ಕಾದ ಭದ್ರತೆಯ ಕಾರಣಕ್ಕೆ ಚೀನಾದ 58 ಆ್ಯಪ್ಗಳನ್ನ ಬ್ಯಾನ್ ಮಾಡಿತ್ತು.
ಶಿವ ನಂದೆ ಮಾಧ್ಯಮವೊಂದಕ್ಕೆ ಮಾತನಾಡಿರುವ ಪ್ರಕಾರ, ಸದ್ಯದಲ್ಲೇ ಟಿಕ್ಟಾಕ್ ಭಾರತಕ್ಕೆ ವಾಪಸ್ ಆಗಲಿದೆ ಎಂದಿದ್ದಾರೆ. ವರದಿಗಳ ಪ್ರಕಾರ, ಭಾರತದಲ್ಲಿ ಟಿಕ್ಟಾಕ್ ಸಕ್ರಿಯಗೊಳಿಸಲು ಎಲ್ಲಾ ಸಿದ್ಧತೆಗಳು ನಡೆದಿವೆ. ಶೇಕಡಾ 100 ರಷ್ಟು ಬರುವುದು ಪಕ್ಕಾ ಎಂದು ವರದಿಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post