ಲಕ್ನೋ: ರಕ್ಷಾ ಬಂಧನದ ಅಂಗವಾಗಿ ಉತ್ತರ ಪ್ರದೇಶದ ಮಹಿಳೆಯರಿಗೆ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಉಡುಗೊರೆಯೊಂದನ್ನ ನೀಡಿದ್ದಾರೆ.
ಆಗಸ್ಟ್ 10ರಿಂದ 12ರವರೆಗೆ ರಕ್ಷಾಬಂಧನದ ಅಂಗವಾಗಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಅವಕಾಶವನ್ನ ಉತ್ತರ ಪ್ರದೇಶ ಮಹಿಳೆಯರಿಗೆ ನೀಡಲಾಗಿದೆ. ರಾಜ್ಯದ ಸಹೋದರಿಯರಿಗೆ ರಕ್ಷಾಬಂಧನದ ಶುಭಾಶಯ ಅಂತ ತಿಳಿಸಿರುವ ಯೋಗಿ ಅದಿತ್ಯನಾಥ್, ಈ ಉಡುಗೊರೆಯನ್ನ ಸದುಪಯೋಗ ಪಡಿಸಿಕೊಳ್ಳಬೇಕು. ರಕ್ಷಾಬಂಧನದ ವಿಶೇಷವಾಗಿ ಉತ್ತರ ಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲಾ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕಾಗಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಬೇಕು ಅಂತ ತಿಳಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post