ಕಲರ್ಸ್ ಕನ್ನಡದಲ್ಲಿ ತುಂಬಾ ದಿನಗಳಿಂದ ಸದ್ದು ಮಾಡುತ್ತಿರುವ ಧಾರಾವಾಹಿ ಕೆಂಡಸಂಪಿಗೆ. ಸುಮನಾ ಅನ್ನೋ ಪಕ್ಕಾ ಮಿಡಲ್ ಕ್ಲಾಸ್ಹುಡುಗಿಯ ಸುತ್ತ ಸುತ್ತುವ ಈ ಕಥೆ ವೀಕ್ಷಕರಿಗೆ ಹೊಸದೊಂದು ಅನುಭವದ ಸವಿ ನೀಡಲು ಬರ್ತಿದೆ. ಕೆಂಡ ಸಂಪಿಗೆ ಮೂಲಕ ನಟಿ ಅಮೃತಾ ರಾಮೂರ್ತಿ ಕಂಬ್ಯಾಕ್ ಮಾಡುತ್ತಿದ್ದಾರೆ. ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಮೃತಾ ತಾಯ್ತನದ ಸಂಭ್ರಮದಲ್ಲಿದ್ದರು. ಇದೇ ಕಾರಣಕ್ಕೆ ನಟನೆಯಿಂದ ದೂರ ಉಳಿದಿದ್ದ ನಟಿ ಸದ್ಯ ಮತ್ತೊಂದು ಇನ್ನಿಂಗ್ಸ್ ಶುರು ಮಾಡ್ತಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅಮೃತಾ, ನನ್ನ ಮಗಳು ಎರಡೂವರೆ ತಿಂಗಳಿರುವಾಗ ಕೆಂಡಸಂಪಿಗೆಯ ತಂಡ ನನ್ನನ್ನು ಸಂಪರ್ಕಿಸಿತು. ನಾನು ಇದುವರೆಗೂ ಅಭಿನಯಿಸಿರುವ ಪಾತ್ರಗಳಿಗಿಂತ ಈ ಪಾತ್ರ ವಿಭಿನ್ನವಾಗಿದೆ. ಹೀಗಾಗಿ ಈ ಪಾತ್ರ ಒಪ್ಪಿಕೊಂಡೆ. ನಾನು ಇಲ್ಲಿಯವರೆಗೆ ನಿರ್ವಹಿಸಿದ ಎಲ್ಲಾ ಹೋಮ್ಲಿ ಪಾತ್ರಗಳಿಂದಾಗಿ ಅದಕ್ಕೆ ಫಿಕ್ಸ್ ಆಗಿದ್ದೀನಿ. ಚೆಂಜ್ ಬೇಕಿತ್ತು. ಇದು ಒಂದು ಪ್ರಮುಖ ತಿರುವು. ಇದು ಚಾಲೆಂಜಿಂಗ್ ಪಾತ್ರಾಗಿತ್ತು. ನಾನು ಇಂತಹ ಪಾತ್ರ ಕೂಡ ಮಾಡಬಹುದು ಅಂತಾ ಪ್ರೇಕ್ಷಕರು ನಿರೀಕ್ಷಿಸಿರಲ್ಲ. ಅಷ್ಟು ವಿಭಿನ್ನವಾಗಿದೆ. ಮಹತ್ವಾಕಾಂಕ್ಷಿ ಬ್ಯುಸಿನೆಸ್ ವುಮನ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು ನಟಿ ಅಮೃತಾ.
ಇನ್ನು, ನಟಿ ಕಾವ್ಯಾ ಶಿವಾ ಕೆಂಡ ಸಂಪಿಗೆಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾವ್ಯಾ ಕನ್ನಡದ ಹುಡುಗಿಯಾದ್ರೂ ಗುರುತಿಸಿಕೊಂಡಿದ್ದು ಮಾತ್ರ ತೆಲುಗಿನಲ್ಲಿ. ಅಲ್ಲಿನ ಪ್ರೇಕ್ಷಕರಿಗೆ ಚಿರಪರಿಚಿತರಾಗಿದ್ದು, ಕನ್ನಡಕ್ಕೆ ಹೊಸಬರು. ಬಹುನಿರೀಕ್ಷಿಸಿತ ಧಾರಾವಾಹಿ ಕೆಂಡಸಂಪಿಗೆ ಹೊಸತನದ ಜೊತೆ ರಂಜಿಸಲು ಬರುತ್ತಿದೆ. ಧಾರಾವಾಹಿ ಇದೇ ತಿಂಗಳು ಆನ್ ಏರ್ ಆಗುವ ಸಾಧ್ಯತೆಯಿದ್ದು, ಅಧಿಕೃತ ಮಾಹಿತಿ ಹೊರಬಂದಿಲ್ಲ.
View this post on Instagram
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post