ಕೇರಳ: ದೇವರನಾಡಿನಲ್ಲಿ ಸಾಮಾಜಿಕ ಕಾರ್ಯಕರ್ತರಿಬ್ಬರು ವಿಭಿನ್ನವಾಗಿ ಪ್ರತಿಭಟನೆ ನಡೆಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕೇರಳದ ಮಲ್ಲಾಪುರಂನಲ್ಲಿ ಮಳೆಯಿಂದ ರಸ್ತೆಗುಂಡಿಗಳು ತುಂಬಿ ಕೆರೆಯಂತಾಗಿದ್ದವು. ಈ ವೇಳೆ ಸರ್ಕಾರದ ಗಮನ ಸೆಳೆಯಲು ಮುಂದಾದ ಸಾಮಾಜಿಕ ಕಾರ್ಯಕರ್ತರು ರಸ್ತೆಗುಂಡಿಯಲ್ಲೇ ಸ್ನಾನ ಮಾಡಿದ್ದಾರೆ. ಅಮಾಜ್ ಪೊರಳಿ ಮತ್ತು ಅಜಾರ್ ಮಹಮದ್ ಎಂಬ ಇಬ್ಬರು ಯುವಕರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ರಸ್ತೆಗುಂಡಿ ಮುಚ್ಚುವಂತೆ ಆಗ್ರಹಿಸಿದ ಯುವಕರು ರಸ್ತೆಯಲ್ಲೇ ಸ್ನಾನ ಮಾಡಿ ಗಮನ ಸೆಳೆದಿದ್ದಾರೆ. ಇನ್ನು ರಸ್ತೆಯಲ್ಲಿ ನಿಂತ ನೀರಿನಲ್ಲೇ ಬಟ್ಟೆ ತೊಳೆದು ರಸ್ತೆಗುಂಡಿ ಮುಚ್ಚುವಂತೆ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಈ ಸಾಮಾಜಿಕ ಕಾರ್ಯಕರ್ತರ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸ್ಥಳೀಯ ಶಾಸಕ ಲತೀಫ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದ್ದಾರೆ. ಇದೇ ವೇಳೆ ಜನರು ರಸ್ತೆಗುಂಡಿ ಇರುವ ಕಡೆ ಬಾಳೆಗಿಡವನ್ನಾದ್ರೂ ನೋಡಿ ಅಂತಾ ಆಕ್ರೋಶ ಹೊರಹಾಕಿದ್ದಾರೆ.
Taking bath in pothole to draw officials’ attention in #Malappuram #Kerala https://t.co/uAod9guBB1
— biju govind (@bijugovind) August 8, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post