ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದ ‘ಕಠಿಣ ನಿಯಮ’ಗಳು ತಮ್ಮ ಪಕ್ಷದ ನಾಯಕರ ಮೇಲೂ ಜಾರಿಯಾಗುತ್ತಿವೆ. ಮೊನ್ನೆಯಷ್ಟೇ ಮಹಿಳೆಯೊಬ್ಬರ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪದ ಮೇಲೆ ಬಿಜೆಪಿ ಯುವ ನಾಯಕ ಶ್ರೀಕಾಂತ್ ತ್ಯಾಗಿ ಅವರ ಅನಧಿಕೃತ ಕಟ್ಟಡವನ್ನ ತೆರವು ಮಾಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ವಾರಣಸಿಯಲ್ಲಿರುವ ಮತ್ತೊಬ್ಬ ಬಿಜೆಪಿ ನಾಯಕನ ಬಿಲ್ಡಿಂಗ್ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ.
ವಾರಣಸಿ ಬಿಜೆಪಿ ಘಟಕದ ಜಿಲ್ಲಾ ಉಪಾಧ್ಯಕ್ಷ ಅಖಂಡ್ ಸಿಂಗ್ (ಸತ್ಯ ಪ್ರಕಾಶ್ ಸಿಂಗ್) ಗೆ ಸಂಬಂಧಿಸಿದ ಬಿಲ್ಡಿಂಗ್ ಡೆಮಾಲಿಷ್ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಬಿಲ್ಡಿಂಗ್ ನಿರ್ಮಿಸಿ, ಕಚೇರಿಯನ್ನ ಮಾಡಿಕೊಂಡಿದ್ದರು. ಸಿಕ್ರೌಲ್ ವಾರ್ಡ್ನಲ್ಲಿರುವ ವರುಣ ಪರ್ ಏರಿಯಾದಲ್ಲಿ ಬಿಲ್ಡಿಂಗ್ ನಿರ್ಮಿಸಿದ್ದರು.
ಅನಧಿಕೃತವಾಗಿ ಕಚೇರಿ ನಿರ್ಮಾಣ ಮಾಡಿರೋದಕ್ಕೆ ಅಲ್ಲಿನ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನೆ ಕೂಡ ಮಾಡಿದ್ದರು. ಇದೀಗ ಅಂಖಂಡ್ ಸಿಂಗ್ಗೆ ಅನಧಿಕೃತವಾಗಿ 1,080 ಸ್ಕ್ವೇರ್ ಫೀಟ್ ಜಾಗದಲ್ಲಿ ನಿರ್ಮಿಸಿದ್ದ ಕಡ್ಡವನ್ನ ತೆರವುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post