ಟೀಮ್ ಇಂಡಿಯಾ ಯುವ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಟಿ20 ವಿಶ್ವಕಪ್ ತಂಡದ ಆಯ್ಕೆ ರೇಸ್ನಿಂದ ಔಟ್ ಆಗಿದ್ದಾರೆ.
ಖುದ್ದು ತಂಡದ ಆಯ್ಕೆ ಸಮಿತಿಯೇ, ಸುಂದರ್ಗೆ, ನೀವು ವಿಶ್ವಕಪ್ ಯೋಜನೆಯ ಭಾಗವಾಗಿಲ್ಲ ಎಂದು ತಿಳಿಸಿದೆ. ಅಲ್ಲದೇ ಫಿಟ್ನೆಸ್ ಬಗ್ಗೆ ಗಮನಹರಿಸುವಂತೆ ಸೂಚಿಸಿದೆ. ಅಲ್ಲದೇ, ಅಶ್ವಿನ್ರನ್ನ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಸದ್ಯದಲ್ಲೇ 2022 ಏಷ್ಯಾಕಪ್ ಟೂರ್ನಿ ಶುರುವಾಗಲಿದೆ. ಈಗಾಗಲೇ ಆಯ್ಕೆ ಸಮಿತಿ ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ 15 ಆಟಗಾರರ ತಂಡ ಅನೌನ್ಸ್ ಮಾಡಿದೆ. ಈ ತಂಡದಲ್ಲೂ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಮುಂದೆ ಬರೋ ವಿಶ್ವಕಪ್ ತಂಡದಲ್ಲೂ ವಾಷಿಂಗ್ಟನ್ ಸುಂದರ್ಗೆ ಚಾನ್ಸ್ ಸಿಗೋದಿಲ್ಲ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post