ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಇದೀಗ ಗೋವಾದ ಪೊಲೀಸರು ಸೋನಾಲಿ ಅವರ ಇಬ್ಬರು ಆಪ್ತರನ್ನ ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ದೆಹದ ಕೆಲವು ಭಾಗಗಳಲ್ಲಿ ಸಣ್ಣಪುಟ್ಟ ಗಾಯಗಳು ಕಂಡು ಬಂದ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ.
ಸೋನಾಲಿಗೆ ಯಾವುದೇ ತೀವ್ರತರ ಗಾಯಗಳು ಕಂಡು ಬಂದಿಲ್ಲ ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಆದರೆ ಬಿಜೆಪಿ ನಾಯಕಿಯ ಇಬ್ಬರು ಆಪ್ತ ಸಹಾಯಕರಾದ ಸುಧಿರ್ ಸಗ್ವನ್ ಮತ್ತು ಸುಖ್ವಿಂದರ್ ವಸಿಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇವರಿಬ್ಬರ ವಿರುದ್ಧ ಫೋಗಟ್ ಸಹೋದರ ರಿಂಕು ಧಂಕಾ ಪೊಲೀಸರಿಗೆ ದೂರು ನೀಡಿದ್ದರು. ಗೋವಾದಲ್ಲಿ ಆಗಸ್ಟ್ 22 ರಂದು ನನ್ನ ಸಹೋದರಿಯ ಕೊಲೆಯಾಗಿದೆ. ಅದು ಸಹಜ ಹೃದಯಾಘಾತವಲ್ಲ, ಕೊಲೆ ಎಂದು ಸಹೋದರ ಆರೋಪಿಸಿದ್ದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post