ನ್ಯೂಜಿಲೆಂಡ್ ಎ ವಿರುದ್ಧದ ಸರಣಿಗಾಗಿ ಭಾರತ ಎ ತಂಡ ಪ್ರಕಟವಾಗಿದೆ. 16 ಸದಸ್ಯರ ಈ ತಂಡದಲ್ಲಿ ಅವಕಾಶ ಸಿಗದ ಕಾರಣ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಸಮಾಧಾನ ಹೊರ ಹಾಕಿದ್ದಾರೆ.
ದೇಶೀಯ ಕ್ರಿಕೆಟ್‌ನಲ್ಲಿ ಸೌರಾಷ್ಟ್ರ ತಂಡದಲ್ಲಿ ಆಡ್ತಿರುವ ಜಾಕ್ಸನ್, ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೂ, ಚಾನ್ಸ್ ನೀಡದೆ ಇರೋದು ಅವಮಾನ ಮಾಡಿದಂತೆ. ಆಯ್ಕೆಗೆ ಪ್ರದರ್ಶನ ನೋಡಬೇಕೆ ಹೊರತು ವಯಸ್ಸನ್ನಲ್ಲ. ಕನಸು ಕಾಣುವ ಹಕ್ಕು ನನಗೂ ಇದೆ. ಅಂದಹಾಗೆ 35 ವರ್ಷವಷ್ಟೆ ಆಗಿರೋದು, 75 ವರ್ಷವಲ್ಲ ಎಂದು ಟ್ವಿಟರ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post