ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ಲಾರಿಗಳು ಕಿಲ್ಲರ್ ಲಾರಿ ಅನ್ನೋ ಕುಖ್ಯಾತಿಗೆ ಪಾತ್ರವಾಗುತ್ತಿವೆ. ಒಂದರ ಹಿಂದೆ ಒಂದರಂತೆ ಅಮಾಯಕರ ಜೀವಗಳನ್ನು ಈ ಕಿಲ್ಲರ್ ಲಾರಿಗಳು ಬಲಿ ಪಡೆಯುತ್ತಿವೆ. ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ದೊಡ್ಡಬೆಳವಂಗಲ ಸಮೀಪದ ಕತ್ತಿಹೊಸಹಳ್ಳಿ ಬಳಿ ನಡೆದಿದೆ.
ರಾಜು (3೦) ಮೃತ ದುರ್ದೈವಿ. ಬಿಬಿಎಂಪಿ ಕಸದ ಲಾರಿಯು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯು ಮಾವಿನಕುಂಟೆ ಮೂಲದ ನಿವಾಸಿ. ಲಾರಿ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಈ ದುರ್ಘಟನೆ ಸಂಭವಿಸಿದೆ. ಲಾರಿ ಚಾಲಕ ಡಿಕ್ಕಿ ಹೊಡೆದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾನೆ.
ಸದ್ಯ ಘಟನಾ ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರ್ಘಟನೆಯು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಇದನ್ನೂ ಓದಿ: BBMP ಕಿಲ್ಲರ್ ಲಾರಿಗೆ ಡೆಲಿವರಿ ಬಾಯ್ ಸಾವು-2 ತಿಂಗಳಿನಲ್ಲಿ 4ನೇ ಜೀವ ಕಸದ ಲಾರಿಗೆ ಬಲಿ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post