ಕನ್ನಡದ ಹಿರಿಯ ನಟಿ ಲೀಲಾವತಿ ಅವರ ಅರೋಗ್ಯದ ಬಗ್ಗೆ ಹರಡಿದ್ದ ಗಾಸಿಪ್ಗಳಿಗೆ ಸ್ಪಷ್ಟನೆ ನೀಡಿರೋ ನಟ ವಿನೋದ್ ರಾಜ್ ಅವರು, ಲೀಲಾವತಿ ಅಮ್ಮ ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರೋ ರೀತಿಯಲ್ಲಿ ಅವರ ಆರೋಗ್ಯದಲ್ಲಿ ಸಮಸ್ಯೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯೂಸ್ಫಸ್ಟ್ ಜೊತೆಗೆ ಮಾತನಾಡಿದ ನಟ ವಿನೋದ್ ರಾಜ್ ಅವರು, ಕಳೆದ ವರ್ಷ ಬಾತ್ ರೂಮ್ನಲ್ಲಿ ಬಿದ್ದ ಕಾರಣ ಹಾಗೂ ವಯೋ ಸಹಜ ಕಾಯಿಲೆಯಿಂದ ಲೀಲಾವತಿ ಬಳಲುತ್ತಿದ್ದಾರೆ. ಅನಾರೋಗ್ಯ ಸಮಸ್ಯೆ ಇದ್ದರೂ ತನ್ನ ಸೋಲದೇವನ ಹಳ್ಳಿ ಜನತೆಗಾಗಿ ಆಸ್ಪತ್ರೆ ಕಟ್ಟಿಸಿದ್ದಾರೆ. ತನ್ನ ಆಸ್ಪತ್ರೆಯಲ್ಲಿ ಒಂದು ದಿನ ವಿಶ್ರಾಂತಿ ಪಡೆದುಕೊಂಡು ಬಂದಿದ್ದಾರೆ ಅಷ್ಟೇ.
ಸದ್ಯ ಲೀಲಾವತಿ ಅವರ ಓಡಾಡೋವ ಪರಿಸ್ಥಿತಿಯಲ್ಲಿ ಇಲ್ಲ. ಸಂಪೂರ್ಣ ಹಾಸಿಗೆ ಹಿಡಿದ್ದಿದ್ದಾರೆ. ಆದ್ರೆ ಬಂದವರಿಗೆ ದಿಂಬಿನ ಸಹಾಯದಿಂದ ಕುಳಿತು ಕೊಂಡು ಮಾತನಾಡುವ ಸ್ಥಿತಿಯಲ್ಲಿದ್ದಾರೆ. ವಯಸು 85 ದಾಟಿದ್ದರೂ ಇಂದಿಗೂ ಚುರುಕಾಗಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post