ಕಿರುತೆರೆಯಲ್ಲಿ ಮುದ್ದು ಮುದ್ದಾಗಿ ಮಿಂಚುತಿರುವ ಚೆಲುವೆ ಸೌಮ್ಯಾ ಭಟ್. ಇವರ ಹೆಸರಿಗೆ ತಕ್ಕಂತೆ ಸೌಮ್ಯ ಸ್ವಭಾವದ ಹುಡುಗಿ. ಇವರು ಕಿರುತೆರೆಯ ಬ್ಲಾಕ್ ಬಾಸ್ಟರ್ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದೀಗ ಹಿಟ್ಲರ್ ಕಲ್ಯಾಣದಲ್ಲಿ ಪವಿತ್ರಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸೌಮ್ಯಾ ಮೂಲತಃ ಕರಾವಳಿ ಚೆಲುವೆ. ಕರಾವಳಿಯಿಂದ ಬೆಂಗಳೂರಿಗೆ ಪಯಣ ಬೆಳಸಿದ್ದೆ ನಟನೆಗೊಸ್ಕರ. ಈ ಚಲುವೆಯು ನಟನೆಗೂ ಬರೋ ಮುಂಚೆ ಯಾವ ಕೆಲಸ ಮಾಡುತ್ತಿದ್ದರು ಗೊತ್ತಾ? ಹೌದು ಆ ಉತ್ತರ ನಮಗೆ ಸಿಕ್ಕಿದೆ. ನಟಿ ಸೌಮ್ಯಾ ಕಿರುತೆರೆಯ ಕಲಾವಿದೆ ಆಗೋಕು ಮುಂಚೆ ಟೀಚರಮ್ಮ ಆಗಿದಂತೆ. ಸೌಮ್ಯಾ ಭಟ್ ಅವರು ತಿರುಪತಿ ಆರ್ಎಸ್ವಿಪಿ ಕಾಲೇಜಿನಲ್ಲಿ ಸಂಸ್ಕೃತ ವಿದ್ಯಾಭ್ಯಾಸ ಮುಗಿಸಿ ಹೈಸ್ಕೂಲ್ ಶಿಕ್ಷಕಿಯಾಗಿ ಸೇರಿಕೊಂಡು ತಮ್ಮ ಸ್ವಂತ ವೃತ್ತಿ ಬದುಕನ್ನ ಆರಂಭ ಮಾಡಿದರು.
ಹೈಸ್ಕೂಲ್ನ ಶಿಕ್ಷಕಿಯಾಗಿರುವಾಗಲೇ ನಟನೆ ಇವರನ್ನು ಅರಸಿ ಬಂತು. ಅಲ್ಲಿಂದ ನಟನೆಗೊಸ್ಕರ ಬೆಂಗಳೂರಿಗೆ ಬರಬೇಕಾಯ್ತು. ಆ ಸಂದರ್ಭದಲ್ಲಿ ಶಿಕ್ಷಕಿ ವೃತ್ತಿಯನ್ನ ಸಂಪೂರ್ಣವಾಗಿ ಬಿಟ್ಟರು. ಹೌದು, ನಟಿ ಸೌಮ್ಯಾ ಅವರಿಗೆ ಜನಪ್ರಿಯ ತಂದುಕೊಟ್ಟಿದ್ದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೇಧಾ ಪಾತ್ರ. ಆದಾದ ಮೇಲೆ ಮ್ಯಾಜಿಕ್ ರೀತಿಯಲ್ಲಿ ಹಿಟ್ಲರ್ ಕಲ್ಯಾಣದಲ್ಲಿ ಪವಿತ್ರಾ ಎಂಬ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಹೈಸ್ಕೂಲ್ ಟೀಚರಮ್ಮ ಆಗಿ ಮುಂದುವರೆಯಬೇಕಿದ್ದ ಸೌಮ್ಯಾ ಭಟ್ ಈಗ ಸಕ್ಸಸ್ಫುಲ್ ಕಲಾವಿದೆಯಾಗಿ ಕಿರುತೆರೆಯಲ್ಲಿ ಮಿಂಚ್ತಿರೋದು ನಿಜಕ್ಕೂ ಅಚ್ಚರಿಯೇ ಸರಿ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post