ದುಬೈ ಮೈದಾನದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ, ಶತಕದ ಬರಕ್ಕೆ ಬ್ರೇಕ್ ಹಾಕಿದ್ದಾರೆ. ಅಫ್ಘನ್ ಬೌಲರ್ಗಳ ಬೆಂಡೆತ್ತಿದ ಕಿಂಗ್, 3 ವರ್ಷದಿಂದಿದ್ದ ಸೆಂಚುರಿ ಯಾವಾಗ.? ಎಂಬ ಪ್ರಶ್ನೆಗೆ ಉತ್ತರ ಕೊಟ್ಟು 4 ದಿನಗಳೇ ಉರುಳಿವೆ. ಆದ್ರೆ, ಕ್ರಿಕೆಟ್ ಲೋಕದಲ್ಲಿ ಮಾತ್ರ ಕಿಂಗ್ ಮೇನಿಯಾ ಕಿಂಚಿತ್ತೂ ಕಡಿಮೆಯಾಗಿಲ್ಲ.. ಒಂದೇ ಒಂದು ಶತಕದಿಂದ ರನ್ಮಷೀನ್, ಸೋಷಿಯಲ್ ಮೀಡಿಯಾದಲ್ಲಿ ಪ್ರವಾಹವನ್ನೇ ಎಬ್ಬಿಸಿದ್ದಾರೆ.
ಇನ್ನೂ ನಿಂತಿಲ್ಲ ವಿರಾಟ್ ಕೊಹ್ಲಿ ಶತಕ ಸಂಭ್ರಮ.!
ಸೆಂಚುರಿ ಸಂಭ್ರಮದ ನಡುವೆಯೂ ಕಾಡ್ತಿದೆ ಹಳೆ ನೋವು.!
ಹೌದು, ವಿರಾಟ್ ಕೊಹ್ಲಿ ಶತಕದ ಸಂಭ್ರಮ ಇನ್ನೂ ನಿಂತಿಲ್ಲ. 3 ವರ್ಷಗಳಿಂದ ಕಾದು ಕುಳಿತಿದ್ದ ಸೆಂಚುರಿ, ಕೊನೆಗೂ ಬಂದ ಖುಷಿ, ಸಂಭ್ರಮ ಫ್ಯಾನ್ಸ್ ವಲಯದಲ್ಲಿ ದಿನೇ ದಿನೇ ಹೆಚ್ಚಾಗ್ತಿದ್ಯೆ, ಹೊರತೂ ಕಡಿಮೆಯಾಗ್ತಿಲ್ಲ. ಈ ಹಿಂದೆ ಟೀಕಿಸಿ, ಸಾಮರ್ಥ್ಯವನ್ನೇ ಪ್ರಶ್ನಿಸಿದವರು ಮೇಲಂತೂ ಕೊಹ್ಲಿ ಸೇನೆ ಮುಗಿಬಿದ್ದಿದೆ. ಆದ್ರೆ, ಕೊಹ್ಲಿ ಮಾತ್ರ ಯಾವುದೋ ಒಂದು ಚಿಂತೆಯಲ್ಲಿದ್ದಾರೆ.
‘ಯಾರಿಗೂ ನೋವು ಮಾಡ್ಬೇಡಿ’
‘ತಿನ್ನಿರಿ, ಕುಡಿಯಿರಿ ಮತ್ತು ಸಂತೋಷಪಡಿ ಗೆಳೆಯರೆ. ಆದ್ರೆ, ಯಾರಿಗೂ ನೋವುಂಟು ಮಾಡಬೇಡಿ’
-ವಿರಾಟ್ ಕೊಹ್ಲಿ, ಕ್ರಿಕೆಟಿಗ
YES..! ಸ್ವತಃ ವಿರಾಟ್ ಕೊಹ್ಲಿ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ಸಾಲುಗಳಿವು. ಕೆಲವರು ಇದನ್ನ ನಾರ್ಮಲ್ ಆಗೇ ತೆಗೆದುಕೊಂಡಿದ್ದಾರೆ. ಆದ್ರೆ, ಹಲವರು ವಿರಾಟ್ ಇನ್ನೂ ಹಳೆ ಗಾಯದ ನೆನಪಿನಲ್ಲೇ ಇದ್ದಾರೆ ಅನ್ನೋ ಮಾತುಗಳನ್ನಾಡ್ತಿದ್ದಾರೆ. ಜೊತೆಗೆ ವಿಶ್ವದ ಮೋಸ್ಟ್ ಸೆಲಬ್ರೇಟೆಡ್ ಕ್ರಿಕೆಟರ್ಗೆ ಇಷ್ಟು ನೋವುಂಟು ಮಾಡಿದ್ಯಾರು ಅನ್ನೋ ಪ್ರಶ್ನೆ ಮಾಡ್ತಿದ್ದಾರೆ.
ಮನಬಂದಂತೆ ಟೀಕಿಸಿದವರಿಗೆಲ್ಲಾ ಟಾಂಗ್ ಕೊಟ್ರಾ ಕೊಹ್ಲಿ.?
ಕಳೆದ 3 ವರ್ಷಗಳಿಂದ ಇನ್ಕನ್ಸಿಸ್ಟೆಂಟ್ ಪ್ರದರ್ಶನ ನೀಡ್ತಾ ಇದ್ದ ಕೊಹ್ಲಿಯನ್ನ ಟೀಕಿಸದವರೇ ಇಲ್ಲ. ಅದರಲ್ಲೂ ಕೆಲ ಮಾಜಿ ಕ್ರಿಕೆಟರ್ಸ್, ಕ್ರಿಕೆಟ್ ಎಕ್ಸ್ಫರ್ಟ್ಸ್ಗಳಂತೂ, ಮನಬಂದಂತೆ ಮಾತುಗಳನ್ನಾಡಿದ್ರು. ತಂಡದಿಂದ ಡ್ರಾಪ್ ಮಾಡಿ ಅಂದಿದ್ದಲ್ಲದೇ, ಕೊಹ್ಲಿ ಫಿನಿಶ್ಡ್ ಎಂದು ಬಹಿರಂಗವಾಗೇ ಹೇಳಿದ್ರು. ಇದೆಲ್ಲದರಿಂದ ನೊಂದು ಏಕಾಂಗಿತನ ಕಾಡಿತ್ತು. ಸ್ವತಃ ಕೊಹ್ಲಿಯೇ ಈ ಹಿಂದೆ ಹೇಳಿಕೊಂಡಿದ್ರು. ಹೀಗಾಗಿ ಈ ಪೋಸ್ಟ್ ಅನ್ನ, ಅಂದು ಮನಬಂದಂತೆ ಮಾತನಾಡಿದವರಿಗೆ ಕೊಟ್ಟ ಟಾಂಗ್ ಎಂದು ಹಲವರು ಹೇಳ್ತಿದ್ದಾರೆ.
ಮ್ಯಾನೇಜ್ಮೆಂಟ್, ಬಿಸಿಸಿಐ ವಿರುದ್ಧದ ಅಸಮಾಧಾನನಾ.?
ಕಳೆದ 3 ವರ್ಷದಿಂದ ಶತಕ ಬಂದಿಲ್ಲ ಅನ್ನೋ ಕೊರಗಿನ ಜೊತೆಗೆ, ಕಳೆದೊಂದು ವರ್ಷದಲ್ಲಿ ವೃತ್ತಿ ಜೀವನದಾಲ್ಲಾದ ಬದಲಾವಣೆಗಳೂ ಕೂಡ ವಿರಾಟ್ಗೆ ಮಾನಸಿಕವಾಗಿ ಘಾಸಿ ಮಾಡಿದ್ವು. ಅದರಲ್ಲೂ ಏಕದಿನ ನಾಯಕತ್ವದಿಂದ ಕೆಳಗಿಸಿದ ಘಟನೆಯಂತೂ ವಿರಾಟ್ರನ್ನ ವಿಚಲಿತ ಮಾಡಿದ್ದು ಸುಳ್ಳಲ್ಲ. ಈ ವಿಚಾರದಲ್ಲಿ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್ಮೆಂಟ್ ನಡೆಸಿಕೊಂಡ ರೀತಿ ಹಾಗೂ ಕಷ್ಟದಲ್ಲಿ ಬೆಂಬಲಕ್ಕೆ ನಿಲ್ಲದ ಬಗ್ಗೆ ಪರೋಕ್ಷವಾಗಿ ಅಸಮಾಧಾನವನ್ನ ಕೊಹ್ಲಿ ಹೊರ ಹಾಕಿದ್ರು. ಇದೀಗ ಶತಕ ಸಿಡಿಸಿ ಫಾರ್ಮ್ ಬಂದ ಬೆನ್ನಲ್ಲೇ ಬಿಸಿಸಿಐ ಹಾಗೂ ಮ್ಯಾನೇಜ್ಮೆಂಟ್ಗೆ ಇನ್ಸ್ಸ್ಟಾಗ್ರಾಂ ಪೋಸ್ಟ್ನಲ್ಲೇ ತಿರುಗೇಟು ಕೊಟ್ಟಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗ್ತಿದೆ.
ಕ್ರಿಕೆಟ್ ಕರಿಯರ್ ಆರಂಭದಿಂದ ಕೆಲ ತಿಂಗಳ ಹಿಂದಿನವರೆಗೆ ವಿರಾಟ್ ಕೊಹ್ಲಿಯ ಆ್ಯಟಿಟ್ಯೂಡ್ ಬೇರೆಯದ್ದೇ ರೀತಿಯಲ್ಲಿತ್ತು. ಆದ್ರೆ, ಇತ್ತೀಚಿನ ದಿನಗಳಲ್ಲಿ ಕಂಪ್ಲೀಟ್ ಚೇಂಜ್ ಆಗಿದೆ. ಸದಾ ದೇವರ ಬಗ್ಗೆ ಮಾತನಾಡುತ್ತಿರುವ ಕೊಹ್ಲಿ, ಸೋಷಿಯಲ್ ಮೀಡಿಯಾಗಳಲ್ಲೂ ಮಿಸ್ಟ್ರಿ ಪೋಸ್ಟರ್ಗಳನ್ನ ಹಾಕ್ತಿದ್ದಾರೆ. ಮೈದಾನದಲ್ಲೂ ಕೊಹ್ಲಿಯ ಅಗ್ರೆಸ್ಸೀವ್ ಆ್ಯಟಿಟ್ಯೂಡ್ ಸ್ವಲ್ಪ ಮಟ್ಟಿಗೆ ಮಾಯವಾದಂತೆ ಕಾಣ್ತಿದೆ.
ಅದೇನೆ ಇರಲಿ, ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಮೋಸ್ಟ್ ಇಂಪಾರ್ಡೆಂಟ್ ಪ್ಲೆಯರ್. ಸದ್ಯ ಶತಕ ಸಿಡಿಸಿ ಕೊಹ್ಲಿ ಕಮ್ಬ್ಯಾಕ್ ಮಾಡಿರೋದಂತೂ, ವಿಶ್ವಕಪ್ಗೂ ಮುನ್ನ ಇಡೀ ತಂಡಕ್ಕೆ ಆನೆ ಬಲ ತಂದಿದೆ. ಸದ್ಯ ಟೀಕೆ, ಟಿಪ್ಪಣಿಗಳಿಂದ ಮುಕ್ತವಾಗಿರೋ ಕೊಹ್ಲಿ, ಮುಂದಿನ ದಿನಗಳಲ್ಲೂ ಹೀಗೆ ಅಬ್ಬರಿಸಲಿ ಅನ್ನೋದಷ್ಟೇ ಅಭಿಮಾನಿಗಳ ಆಶಯವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post