ಸೂಪರ್-4 ಹಂತದಲ್ಲೇ ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಹೊರಬಿದ್ರೂ, ಟಾಪ್ ಆರ್ಡರ್ ಸಮಸ್ಯೆ ಟ್ರಬಲ್ ಶೂಟ್ ಆಗಿದ್ದು, ಆತ್ಮವಿಶ್ವಾಸ ಹೆಚ್ಚಿಸಿದೆ. ಹಾಗೆಂದ ಮಾತ್ರಕ್ಕೆ ಆತಂಕ ದೂರ ಆಗಿದೆ ಅನ್ನೋ ಹಾಗೇ ಇಲ್ಲ. ಹೊಸ ಸಮಸ್ಯೆಯೊಂದು ಕೋಚ್ – ಕ್ಯಾಪ್ಟನ್ರನ್ನ ಕಾಡೋಕೆ ಸ್ಟಾರ್ಟ್ ಆಗಿದೆ.
ಮಹತ್ವದ ಏಷ್ಯಾಕಪ್ ಟೂರ್ನಿಯ ಫೈನಲ್ಗೆ ಟೀಮ್ ಇಂಡಿಯಾ ಕ್ವಾಲಿಫೈ ಆಗಿಲ್ಲ. ಸೂಪರ್-4 ಹಂತದಲ್ಲೇ ಎಡವಿದ ತಂಡ ಹೀನಾಯವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಹಾಗಿದ್ರೂ, ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾದಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗಿದೆ. ತಂಡದ ಸ್ಟಾರ್ಗಳು ಫಾರ್ಮ್ಗೆ ಮರಳಿರೋದು ಆಟಗಾರರ ಕಾನ್ಫಿಡೆನ್ಸ್ ಹೆಚ್ಚಿಸಿದೆ.
ಬಿಗ್ ಸ್ಟಾರ್ಗಳ ಕಮ್ಬ್ಯಾಕ್, ಕೋಚ್ ದ್ರಾವಿಡ್ ನಿರಾಳ.!
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ. ಟೀಮ್ ಇಂಡಿಯಾದ ಈ ಸೂಪರ್ ಸ್ಟಾರ್ಗಳ ಫಾರ್ಮ್ ಏಷ್ಯಾಕಪ್ಗೂ ಮುನ್ನ ತಂಡಕ್ಕೆ ದೊಡ್ಡ ತಲೆ ನೋವಾಗಿತ್ತು. ನಾಯಕ, ಮಾಜಿ ನಾಯಕ ಏಷ್ಯಾಕಪ್ನಲ್ಲೂ ಫೇಲ್ ಆಗಿದ್ರೆ, ತಂಡದಲ್ಲಿ ಇರಿಸಿಕೊಳ್ಳಲೂ ಆಗದ, ಡ್ರಾಪ್ ಮಾಡಲು ಆಗದ ಸಂದಿಗ್ಧ ಪರಿಸ್ಥಿತಿ ಎದುರಾಗ್ತಿತ್ತು. ಆದ್ರೆ, ಏಷ್ಯಾಕಪ್ನಲ್ಲಿ ಜಬರ್ದಸ್ತ್ ಕಮ್ಬ್ಯಾಕ್ ಮಾಡಿರೋ ಈ ಬಿಗ್ಸ್ಟಾರ್ಸ್, ಬಿಗ್ ರಿಲೀಫ್ ನೀಡಿದ್ದಾರೆ. ಕೊಹ್ಲಿ 276 ರನ್ ಸಿಡಿಸಿದ್ರೆ, ರೋಹಿತ್ 141 ರನ್ ಸಿಡಿಸಿ ಟೂರ್ನಮೆಂಟ್ನಲ್ಲಿ ಭಾರತದ ಟಾಪ್-2 ಹೈಯೆಸ್ಟ್ ರನ್ ಗೆಟರ್ಸ್ ಆಗಿದ್ದಾರೆ.
ಒಂದು ಸಮಸ್ಯೆ ಮುಗಿತು ಅನ್ನೋವಾಗ್ಲೆ, ಇನ್ನೊಂದು ತಲೆನೋವು.!
ಯೆಸ್, ಬಿಗ್ಸ್ಟಾರ್ಗಳು ಕಮ್ಬ್ಯಾಕ್ ಮಾಡಿದ್ರು. ಟೀಮ್ ಇಂಡಿಯಾದ ಟಾಪ್ ಆರ್ಡರ್ ಸಮಸ್ಯೆಗೆ ಪರಿಹಾರ ಸಿಗ್ತು ಅನ್ನೋದು ಸದ್ಯ ನಿರಾಳತೆ ಮೂಡಿಸಿದೆ. ಆದ್ರೆ, ಇದರ ಜೊತೆಗೇನೆ ಇನ್ನೊಂದು ಸಮಸ್ಯೆ ಉದ್ಭವಿಸಿದೆ. ಟಿ20 ವಿಶ್ವಕಪ್ಗೂ ಮುನ್ನ ಇದಕ್ಕೆ ಪರಿಹಾರ ಸಿಗಲಿಲ್ಲ ಅಂದ್ರೆ, ಹಿನ್ನೆಡೆ ಪಕ್ಕಾ. ಮಿಡಲ್ ಆರ್ಡರ್, ಲೋವರ್ ಆರ್ಡರ್ ಆಟಗಾರರ ಅಸ್ಥಿರ ಫಾರ್ಮ್ ಮೇಲೆ ವರ್ಕೌಟ್ ಮಾಡಲೇಬೇಕಿದೆ.
ಏಷ್ಯಾಕಪ್ನಲ್ಲಿ ಸೂರ್ಯನ ಆಟ ಅಷ್ಟಕಷ್ಟೇ.!
ಸೂರ್ಯ ಕುಮಾರ್.. ಟೀಮ್ ಇಂಡಿಯಾ ಅಪಾರ ಭರವಸೆಯಿಟ್ಟಿರೋ ಬ್ಯಾಟ್ಸ್ಮನ್. ಆದ್ರೆ, ಈ ಹಿಂದಿನ ಸರಣಿಗಳಲ್ಲಿ ಅಬ್ಬರಿಸಿ, ಬೊಬ್ಬಿರಿದ ಈ ಸೂರ್ಯ, ಏಷ್ಯಾಕಪ್ನಲ್ಲಿ ಥಂಡಾ ಹೊಡೆದ್ರು. ದುರ್ಬಲ ಹಾಂಗ್ಕಾಂಗ್ ಎದುರು 71 ರನ್ ಸಿಡಿಸಿದ್ದು ಬಿಟ್ರೆ, ಉಳಿದೆಲ್ಲಾ ತಂಡಗಳ ಎದುರು ಕಳಪೆ ಪ್ರದರ್ಶನ ನೀಡಿದ್ದಾರೆ.
ಮಿಂಚದ ಹಾರ್ದಿಕ್ ಪಾಂಡ್ಯ, ಅಬ್ಬರಿಸದ ರಿಷಭ್ ಪಂತ್.!
ಟೀಮ್ ಇಂಡಿಯಾ ಡೆರ್ ಡೆವಿಲ್ ಬ್ಯಾಟರ್ಸ್ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಕೂಡ ಏಷ್ಯಾಕಪ್ನಲ್ಲಿ ಠುಸ್ ಪಟಾಕಿಯಾಗಿದ್ದಾರೆ. ಆಡಿದ 4 ಪಂದ್ಯಗಳಲ್ಲಿ ಪಂತ್ 51, ಹಾರ್ದಿಕ್ 50 ರನ್ಗಳಿಸುವಷ್ಟರಲ್ಲೇ ಸುಸ್ತಾಗಿದ್ದಾರೆ. ತಂಡದ ಗೇಮ್ ಚೇಂಜರ್ಸ್ ಎನಿಸಿಕೊಂಡ ಆಟಗಾರರೇ ವೈಫಲ್ಯ ಅನುಭವಿಸಿರೋದು ಹೊಸ ಟೆನ್ಷನ್ ಅಲ್ಲದೇ ಮತ್ತೇನು.?
ಕಾರ್ತಿಕ್ಗೆ ಅವಕಾಶ ಸಿಗಲಿಲ್ಲ, ಹೂಡ ಪರ್ಫಾಮ್ ಮಾಡ್ಲಿಲ್ಲ.!
ಫಿನಿಷರ್ ಎಂಬ ಹಣೆ ಪಟ್ಟಿ ಹೊಂದಿರೋ ದಿನೇಶ್ ಕಾರ್ತಿಕ್ಗೆ ಪ್ಲೆಯಿಂಗ್ ಇಲೆವೆನ್ನಲ್ಲಿ ಸರಿಯಾಗಿ ಅವಕಾಶವೇ ಸಿಗಲಿಲ್ಲ. ಇನ್ನು 3 ಪಂದ್ಯಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ದೀಪಕ್ ಹೂಡ ನಿರಾಸೆ ಮೂಡಿಸಿದ್ರು. 3 ಪಂದ್ಯಗಳಲ್ಲೂ ಹೂಡ ಗಳಿಸಿದ್ದು, ಕೇವಲ 19 ರನ್ ಮಾತ್ರ.
ದ್ವಿಪಕ್ಷೀಯ ಸರಣಿಗಳಲ್ಲಿ ಇವರೆಲ್ಲರೂ ಇಂಪ್ರೆಸ್ಸೀವ್ ಪ್ರದರ್ಶನ ನೀಡಿದವರೆ! ಅದೇ ಆಧಾರದಲ್ಲಿ ಇವರಿಗೆ ಸ್ಥಾನ ಸಿಕ್ಕಿದ್ದು ಕೂಡ. ಆದ್ರೆ, ಬಿಗ್ ಟೂರ್ನಮೆಂಟ್ನಲ್ಲಿ ಇವರು ಎಡವಿದ್ದಾರೆ. ಏಷ್ಯಾಕಪ್ನ ಪ್ರೆಶರ್ ಅನ್ನೇ ಹ್ಯಾಂಡಲ್ ಮಾಡಲಾಗದ ಈ ಪ್ಲೇಯರ್ಸ್, ಮುಂದೆ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ಎದುರು ಹೇಗೆ ಆಡ್ತಾರೆ ಅನ್ನೋದು ಸದ್ಯ ಹುಟ್ಟಿರುವ ಪ್ರಶ್ನೆಯಾಗಿದೆ. ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ರನ್ನೂ ಇದೇ ಸಮಸ್ಯೆ ಪ್ರಶ್ನೆಯಾಗಿ ಕಾಡ್ತಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post