ಏಷ್ಯಾಕಪ್ ಕಿರೀಟ ಗೆದ್ದಿರುವ ಶ್ರೀಲಂಕಾ ತಂಡ ಇದೀಗ ಏಷ್ಯಾಗೆ ಬಾಸ್. ಆದ್ರೆ, ಈ ಟೂರ್ನಿ ಆರಂಭಕ್ಕೂ ಮುನ್ನ ಈ ತಂಡ ಚಾಂಪಿಯನ್ ಆಗುತ್ತೆ ಅಂತಾ ಯಾರೂ ಉಹಿಸಿರಲಿಲ್ಲ. ಅಂಡರ್ ಡಾಗ್ಸ್ ಆಗಿ ಟೂರ್ನಿಗೆ ಎಂಟ್ರಿಕೊಟ್ಟ ಸಿಂಹಳೀಯ ಪಡೆ ಟ್ರೋಫಿ ಎತ್ತಿ ಘರ್ಜಿಸಿದ್ದೇ ರೋಚಕ.
ZERO TO HERO .. NO WHERE TO SOME WHERE ಅಂತಾರಲ್ವಾ. ಈ ಮಾತು ಶ್ರೀಲಂಕಾ ಕ್ರಿಕೆಟ್ ಟೀಮ್ಗೆ ಸಖತ್ ಆಗ್ ಸೂಟ್ ಆಗುತ್ತೆ. ಈ ಹಿಂದಿನ 2 ವರ್ಷಗಳ ಹಿಂದಿನ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ, ಲಂಕಾ ಎಷ್ಟು ದುರ್ಬಲ ತಂಡ ಅನ್ನೋದು ಗೊತ್ತಾಗುತ್ತೆ. ಆದ್ರೆ, ಈಗ ಏಷ್ಯಾಕಪ್ ಕಿರೀಟಕ್ಕೆ ತಂಡ ಮುತ್ತಿಕ್ಕಿದೆ. ಪಾಕಿಸ್ತಾನ ವಿರುದ್ಧದ ಫೈನಲ್ ಫೈಟ್ನಲ್ಲಿ 23 ರನ್ಗಳ ರಣ ರೋಚಕ ಗೆಲುವು ದಾಖಲಿಸಿರೋ ಲಂಕಾ ಪಡೆ ಅಸಾಧ್ಯ ಎಂದವರಿಗೆ ವಿ ಡಿಡ್ ಇಟ್ ಅಂತಾ ಸ್ಟ್ರೇಟ್ ಹಿಟ್ ಹೊಡೆದಿದೆ.
ಆರಂಭದಲ್ಲಿ ಅಂಡರ್ಡಾಗ್ಸ್, ಅಂತ್ಯದಲ್ಲಿ ಚಾಂಪಿಯನ್ಸ್.!
ಏಷ್ಯಾಕಪ್ ಟೂರ್ನಿಯ ಶೆಡ್ಯೂಲ್ ಪ್ರಕಟವಾದಾಗ್ಲೇ ಶ್ರೀಲಂಕಾ ತಂಡವನ್ನ ಯಾವ ಎದುರಾಳಿ ಪಡೆಯೂ ಸೀರಿಯಸ್ಸಾಗಿ ತೆಗೆದುಕೊಂಡೇ ಇರಲಿಲ್ಲ. ಟೂರ್ನಿ ಆರಂಭವಾಗಿ ಮೊದಲ ಪಂದ್ಯದಲ್ಲಿ ಲಂಕಾ, ಅಫ್ಘಾನಿಸ್ತಾನ ಎದುರು ಹೀನಾಯವಾಗಿ ಸೋತ ಮೇಲಂತೂ ಲಂಕಾ ಕಥೆ ಮುಗೀತು ಅಂತಾನೇ ಡಿಸೈಡ್ ಮಾಡಲಾಗಿತ್ತು. ಆದ್ರೆ, ಆಗಿದ್ದೇ ಬೇರೆ.., ಆ ಬಳಿಕ ಆಡಿದ ಎಲ್ಲಾ ಪಂದ್ಯಗಳಲ್ಲೂ ಗೆಲುವಿನ ರಣಭೇರಿ ಬಾರಿಸಿದ ಲಂಕನ್ ಲಯನ್ಸ್ ಇಂದು ಏಷ್ಯಾಗೇ ಚಾಂಪಿಯನ್ಸ್..! ಲಂಕನ್ನರ ಈ ಅಸಾಧಾರಣ ಸಾಧನೆಯ ಹಿಂದೆ ಇಂಟರೆಸ್ಟಿಂಗ್ ವಿಚಾರಗಳಿವೆ.
Have no words to explain this feeling! Thank you all! ❤️ #SriLanka #Believe #PAKvSL #AsiaCup2022Final @OfficialSLC #Champions pic.twitter.com/versgXAkFM
— Dasun Shanaka (@dasunshanaka1) September 11, 2022
ಲಂಕನ್ನರ ಅಲ್ಟಿಮೇಟ್ ಸಾಧನೆಗೆ ಸಿಎಸ್ಕೆ ತಂಡವೇ ಸ್ಪೂರ್ತಿ.!
ದುಬೈ ಪಿಚ್ನಲ್ಲಿ ಟಾಸ್ ಗೇಮ್ ಚೈಂಜರ್ ಅನ್ನೋ ಮಾತು ಫೈನಲ್ ಫೈಟ್ಗೂ ಮುನ್ನ ಎಲ್ಲೆಡೆ ಕೇಳಿ ಬಂದಿತ್ತು. ದುರಾದೃಷ್ಟವಶಾತ್ ಲಂಕಾ ತಂಡ ಕೂಡ ಟಾಸ್ ಸೋಲುಂಡಿತು. ಹಾಗಿದ್ರೂ ಎಲ್ಲರ ಮಾತು ಸುಳ್ಳು ಮಾಡಿ ಚಾಂಪಿಯನ್ ಪಟ್ಟಕ್ಕೇರಿತು. ಇದರ ಹಿಂದಿನ ಸೀಕ್ರೆಟ್ ಚೆನ್ನೈ ಸೂಪರ್ ಕಿಂಗ್ಸ್. ಹೌದು.. 2021ರ ಐಪಿಎಲ್ ಫೈನಲ್ನಲ್ಲಿ ಧೋನಿ ಪಡೆ ಟಾಸ್ ಸೋತರೂ ಇದೇ ದುಬೈ ಪಿಚ್ನಲ್ಲಿ ಗೆದ್ದು ಬೀಗಿತ್ತು. ಪಂದ್ಯಕ್ಕೂ ಮುನ್ನ ಇದೇ ಗೆಲುವಿನ ಮಾತನಾಡಿದ್ದ ತಂಡ, ಸಿಎಸ್ಕೆ ಹಾಗೂ ಧೋನಿಯನ್ನ ಸ್ಫೂರ್ತಿಯಾಗಿ ತೆಗೆದುಕೊಂಡಿತ್ತಂತೆ. ಇದನ್ನ ಸ್ವತಃ ಲಂಕನ್ ಕ್ಯಾಪ್ಟನ್ ರಿವೀಲ್ ಮಾಡಿದ್ದಾರೆ.
ವಲ್ಡ್ಕ್ಲಾಸ್ ಬೌಲರ್ ಇಲ್ಲ ಎಂದವರಿಗೆ ಗೆಲುವಿನ ಟಾಂಗ್.!
ಏಷ್ಯಾಕಪ್ ಆರಂಭಕ್ಕೂ ಮುನ್ನ ಶ್ರೀಲಂಕಾ ನಾಯಕ ದಶುನ್ ಶನಕ ಹಾಗೂ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಡೈರಕ್ಟೆರ್ ನಡುವೆ ಟಾಕ್ವಾರ್ ನಡೆದಿತ್ತು. ಈ ಸಮಯದಲ್ಲಿ ಮಾತನಾಡಿದ್ದ ಬಾಂಗ್ಲಾ ಡೈರೆಕ್ಟರ್, Khaled Mahmud ಲಂಕಾ ತಂಡದಲ್ಲಿ ವರ್ಲ್ಡ್ ಕ್ಲಾಸ್ ಬೌಲರ್ಗಳೇ ಇಲ್ಲ ಅಂತಾ ಹೇಳಿ ಹೀಯಾಳಿಸಿದ್ರು. ಬಾಂಗ್ಲಾದ ಈ ಅತಿರೇಕದ ಮಾತಿಗೆ ಇಡೀ ಲಂಕಾ ತಂಡ ಇದೀಗ ಗೆಲುವಿನ ಟಾಂಗ್ ಕೊಟ್ಟಿದೆ.
ಆ್ಯಷಸ್ನಲ್ಲಿ ಮುಖಭಂಗ, ಏಷ್ಯಾಕಪ್ನಲ್ಲಿ ಸಾಧನೆ.!
ಶ್ರೀಲಂಕಾ ತಂಡ ಈ ಅವಿಸ್ಮರಣೀಯ ಸಾಧನೆಗೆ ಆಟಗಾರರು ಎಷ್ಟು ಕಾರಣವೋ ಅಷ್ಟೇ ಮೇನ್ ರೋಲ್ ಪ್ಲೇ ಮಾಡಿದ್ದು ಕೋಚ್ ಕ್ರಿಸ್ ಸಿಲ್ವರ್ವುಡ್. ಆ್ಯಷನ್ನ ಹೀನಾಯ ಸೋಲಿನ ಬೆನ್ನಲ್ಲೇ ಇಂಗ್ಲೆಂಡ್ ಬೋರ್ಡ್ ಹೆಡ್ ಕೋಚ್ ಹುದ್ದೆಯಿಂದ ಸಿಲ್ವರ್ವುಡ್ರನ್ನ ಕಿತ್ತು ಹಾಕಿತ್ತು. ವಿಶ್ವಕಪ್ ಕಿರೀಟವನ್ನೇ ಗೆಲ್ಲಿಸಿಕೊಟ್ಟಿದನ್ನೇ ಮರೆತು ಹೀಗೆ ತಂಡದಿಂದ ಗೇಟ್ ಪಾಸ್ ನೀಡಿದ್ರಿಂದ ಸಿಲ್ವರ್ವುಡ್ ನೊಂದಿದ್ದು ಸುಳ್ಳಲ್ಲ. ಅಂದು ನೊಂದಿದ್ದ ಕೋಚ್ ಸಿಲ್ವರ್ವುಡ್ ಈಗ ಸ್ಟಾರ್ಗಳೇ ಇಲ್ಲದ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿ, ತಮ್ಮ ತಾಖತ್ತು ಪ್ರೂವ್ ಮಾಡಿದ್ದಾರೆ.
ಕಠಿಣ ಪರಿಶ್ರಮ, ಛಲ ಬಿಡದ ಹೋರಾಟ.!
ಹೆಡ್ ಕೋಚ್ ಕ್ರಿಸ್ ಸಿಲ್ವರ್ವುಡ್ ಮಾತ್ರವಲ್ಲ. ಆಟಗಾರರ ಪರಿಶ್ರಮಕ್ಕೂ ಹ್ಯಾಟ್ಸ್ ಆಫ್ ಹೇಳಲೇಬೇಕು. ಕ್ರಿಕೆಟ್ ಜಗತ್ತಿನಲ್ಲಿ ಲಂಕಾ ಪಡೆ ಕಳೆದು ಹೊಯ್ತು ಅನ್ನೋ ಟಾಕ್ ಶುರುವಾಗಿತ್ತು. ತವರಿನ ಪಿಚ್ನಲ್ಲೇ ಗೆಲ್ಲಲಾಗದೇ ಸಿಂಹಳೀಯ ಪಡೆ ತಿಣುಕಾಟ ನಡೆಸ್ತಿತ್ತು. ಅಂತಾ ತಂಡ ಇದೀಗ ಘಟಾನುಘಟಿ ತಂಡಗಳಿಗೆ ಸೋಲಿನ ರುಚಿ ತೋರಿಸಿ ಚಾಂಪಿಯನ್ ಆಗಿದೆ ಅಂದ್ರೆ ಅದು ಸಾಮನ್ಯದ್ದೇ. ಅದರಲ್ಲೂ ಸೋಲಿನೊಂದಿಗೆ ಟೂರ್ನಿ ಅಭಿಯಾನ ಆರಂಭಿಸಿ, ಒಂದೇ ಒಂದು ಪಂದ್ಯ ಸೋಲದೇ ಟ್ರೋಫಿ ಗೆದ್ದಿರೋದ್ರ ಹಿಂದಿರೋ ಆಟಗಾರರ ಶ್ರಮ, ಡೆಡಿಕೇಶನ್ ಹಾಗೂ ಗೆಲ್ಲಲೇ ಬೇಕೆಂಬ ಹಠಕ್ಕೆ ಒಂದು ಸಲಾಂ.
📸 Snapshots from the #AsiaCup victory parade
#RoaringForGlory pic.twitter.com/ZGIEov8OxL— Sri Lanka Cricket 🇱🇰 (@OfficialSLC) September 13, 2022
ಅದೇನೆ ಇರಲಿ ಕೆಲ ತಿಂಗಳ ಹಿಂದೆ ಇಡೀ ಶ್ರೀಲಂಕಾ ದೇಶವೇ ಹೊತ್ತಿ ಉರಿದಿತ್ತು. ಆರ್ಥಿಕ ಬಿಕ್ಕಟ್ಟು, ಇಡೀ ದೇಶವನ್ನ ಅಧೋಗತಿಗೆ ತಳ್ಳಿತ್ತು. ಜನ ದಂಗೆಯೆದ್ದಿದ್ರು. ಆದ್ರೆ, ಕ್ರಿಕೆಟ್ ಮತ್ತು ಕ್ರಿಕೆಟಿಗರ ಮೇಲಿನ ಪ್ರೀತಿ, ಬೆಂಬಲ ಲಂಕಾ ಅಭಿಮಾನಿಗಳಲ್ಲಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ಅಂದು ಸಂಕಷ್ಟದಲ್ಲೂ ತಮ್ಮ ಜೊತೆಗಿದ್ದ ನಾಡ ಜನತೆಗೆ ಏಷ್ಯಾಕಪ್ ಗೆಲುವಿನ ಮೂಲಕ ಕ್ರಿಕೆಟರ್ಸ್ ಖುಣ ತೀರಿಸೋ ಕೆಲಸ ಮಾಡಿದಂತಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post