ಟೀಂ ಇಂಡಿಯಾದ ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಕನ್ನಡಿಗ ರಾಬಿನ್ ಉತ್ತಪ್ಪ, ಕಳೆದ 20 ವರ್ಷಗಳಿಂದ ನನ್ನ ರಾಜ್ಯ ಕರ್ನಾಟಕ ಮತ್ತು ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದಕ್ಕೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.
It has been my greatest honour to represent my country and my state, Karnataka. However, all good things must come to an end, and with a grateful heart, I have decided to retire from all forms of Indian cricket.
Thank you all ❤️ pic.twitter.com/GvWrIx2NRs
— Robin Aiyuda Uthappa (@robbieuthappa) September 14, 2022
ನನ್ನ ವೃತ್ತಿ ಜೀವನದಲ್ಲಿ ಸಪೋರ್ಟ್ ಮಾಡಿದ ಬಿಸಿಸಿಐ, ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್, ಆರ್ಸಿಬಿ, ಮುಂಬೈ ಇಂಡಿಯನ್ಸ್, ಕೆಕೆಆರ್ ಮತ್ತು ಸಿಎಸ್ಕೆ ತಂಡಕ್ಕೆ ಧನ್ಯವಾದಗಳು. ನಾನು ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ನನ್ನ ಪೋಷಕರು, ಅಕ್ಕ ಮತ್ತು ಕ್ರಿಕೆಟ್ ಮೇಟ್ಸ್ಗೆ ಥ್ಯಾಂಕ್ಸ್ ಎಂದಿದ್ದಾರೆ.
ಉತ್ತಪ್ಪಗೆ 36 ವರ್ಷವಾದ್ರೂ, ಕ್ರಿಕೆಟ್ ಆಡೋ ಸಾಮರ್ಥ್ಯ ಕುಂದಿಲ್ಲ. ಈಗಲೂ ಬ್ಯಾಟ್ ಹಿಡಿದು ಅಬ್ಬರಿಸೋ ತಾಖತ್ತು ಉತ್ತಪ್ಪಾಗೆ ಇದೆ. ಆದ್ರೆ, ಅವಕಾಶ ಮಾತ್ರ ಸಿಗ್ತಿಲ್ಲ.. ಹೀಗಾಗಿ ರೈನಾ ಹಾದಿಯಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದು, ವಿದೇಶಿ ಲೀಗ್ಗಳನ್ನ ಆಡೋಕೆ ಮುಂದಾಗಿದ್ದಾರಾ ಉತ್ತಪ್ಪಾ..? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದುವರೆಗೂ ಭಾರತದ ಪರ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 46 ಏಕದಿನ ಪಂದ್ಯಗಳನ್ನು ಆಡಿರೋ ಉತ್ತಪ್ಪ 934 ರನ್, 13 ಟಿ20 ಪಂದ್ಯಗಳಲ್ಲಿ 249 ರನ್ ಸಿಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 205 ಪಂದ್ಯಗಳನ್ನಾಡಿ 4952 ರನ್ ಗಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post