ವಿಶ್ವಕಪ್ ಟೂರ್ನಿಗೆ ಟೀಮ್ ಸೆಲೆಕ್ಷನ್ನಲ್ಲೇ ಆಯ್ಕೆ ಸಮಿತಿ ಎಡವಿತಾ.? ಬೇಕಾದ ಆಟಗಾರರನ್ನೇ ತಂಡದಿಂದ ಕೈ ಬಿಟ್ಟು ಟೂರ್ನಿ ಆರಂಭಕ್ಕೂ ಮೊದಲ ಟೀಮ್ ಇಂಡಿಯಾಗೆ ಹಿನ್ನಡೆಯುಂಟು ಮಾಡಿಬಿಡ್ತಾ.?
ಮಹತ್ವದ ವಿಶ್ವಕಪ್ ಕದನಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. ನಿರೀಕ್ಷೆಯಂತೆ ಪ್ರಯೋಗಕ್ಕೆ ಮುಂದಾಗದ ಆಯ್ಕೆ ಸಮಿತಿ ಮೋಸ್ಟ್ ಎಕ್ಸ್ಪೆಕ್ಟೆಡ್ ತಂಡವನ್ನೇ ಸೆಲೆಕ್ಟ್ ಮಾಡಿದೆ. ಆದ್ರೆ, ರಿಸ್ಕ್ ತೆಗೆದುಕೊಳ್ಳದೇ ಟೀಮ್ ಸೆಲೆಕ್ಟ್ ಮಾಡೋಕೆ ಹೋಗಿ ತಂಡಕ್ಕೆ ಹಿನ್ನಡೆಯುಂಟು ಮಾಡ್ತಾ ಅನ್ನೋ ಪ್ರಶ್ನೆ ಈಗ ಹುಟ್ಟಿದೆ. ಆಸ್ಟ್ರೇಲಿಯಾ ಕಂಡೀಶನ್ಗೆ ಸೂಟ್ ಆಗೋ ಆಟಗಾರರನ್ನ ಕೈ ಬಿಟ್ಟಿರೋದೇ ಇದಕ್ಕೆ ಕಾರಣವಾಗಿದೆ.
One title 🏆
One goal 🎯
Our squad 💪🏻#TeamIndia | #T20WorldCup pic.twitter.com/Dw9fWinHYQ— BCCI (@BCCI) September 12, 2022
ಆಸ್ಟ್ರೇಲಿಯಾದಲ್ಲಿ ಬೇಡ್ವಾ ಹಾರ್ಡ್ ಹಿಟ್ಟರ್ ಇಶಾನ್ ಕಿಶನ್.?
ಕಳೆದ ವಿಶ್ವಕಪ್ ತಂಡದಲ್ಲಿ ಇಶಾನ್ ಕಿಶನ್ ಇದ್ರು, ಆದ್ರೆ ಈ ಬಾರಿ ಇಲ್ಲ ಅನ್ನೋ ಕಾರಣದಿಂದ ಈ ಪ್ರಶ್ನೆ ಕೇಳ್ತಿಲ್ಲ.. ಹೈಟ್ ಡಿಸ್ ಅಡ್ವಾಂಟೇಜ್ ಇದ್ರೂ ಇಶಾನ್ ಕಿಶನ್ ಬೌನ್ಸಿ ಪಿಚ್ನಲ್ಲಿ ಆಡೋದ್ರಲ್ಲಿ ಪಂಟರ್. ಇದನ್ನ ಈಗಾಗಲೇ ಪ್ರೂವ್ ಕೂಡ ಮಾಡಿದ್ದಾರೆ. ಕಿಶನ್ ಇದ್ದಿದ್ರೆ, ರೈಟ್ ಹ್ಯಾಂಡ್-ಲೆಫ್ಟ್ ಹ್ಯಾಂಡ್ ಕಾಂಬಿನೇಷನ್ ಕೂಡ ಸಖತ್ತಾಗಿ ವರ್ಕ್ ಮಾಡ್ಬೋದಿತ್ತು. ಆದ್ರೆ, ಕಿಶನ್ ತಂಡದಲ್ಲೇ ಇಲ್ವೇ.
ಸ್ಪೀಡ್ ಸೆನ್ಸೇಷನ್, ಉಮ್ರಾನ್ ಮಲ್ಲಿಕ್ ಎಲ್ಲಿ.?
ಉಮ್ರಾನ್ ಮಲಿಕ್.. ಕಳೆದೊಂದು ವರ್ಷದಿಂದ ತನ್ನ ಬೌಲಿಂಗ್ ಪೇಸ್ನಿಂದಲೇ ವಿಶ್ವ ಕ್ರಿಕೆಟ್ ಲೋಕದ ಮನ ಗೆದ್ದ ಪ್ಲೇಯರ್. ಮಲ್ಲಿಕ್ ಬೌಲಿಂಗ್ಗೆ ಕ್ಲೀನ್ಬೋಲ್ಡ್ ಆದ ವಿಶ್ವ ಕ್ರಿಕೆಟ್ ದಿಗ್ಗಜರೆಲ್ಲಾ ವಿಶ್ವಕಪ್ಗೆ ಮಲ್ಲಿಕ್ ಬೇಕೆ ಬೇಕು ಅಂದಿದ್ರು. ಆಸ್ಟ್ರೇಲಿಯಾದಂತಹ ಬೌನ್ಸಿ ಟ್ರ್ಯಾಕ್ಗಳಲ್ಲಿ ಮಲಿಕ್ ಬೌಲಿಂಗ್ ಇನ್ನಷ್ಟು ಏಫೆಕ್ಟಿವ್ ಆಗ್ತಿರ್ತಿತ್ತು ಅನ್ನೋದೆ ಇದಕ್ಕೆ ಕಾರಣವಾಗಿತ್ತು, ಆದ್ರೆ, ಸೆಲೆಕ್ಷನ್ ಕಮಿಟಿ ಮಲ್ಲಿಕ್ಗೆ ಸ್ಥಾನವೇ ನೀಡಿಲ್ಲ.
ಆಲ್ರೌಂಡರ್ ಶಾರ್ದೂಲ್ ಠಾಕೂರ್ ಬಿಟ್ಟಿದ್ಯಾಕೆ.?
ಟಿ20 ಕ್ರಿಕೆಟ್ನಲ್ಲಿ ಆಲ್ರೌಂಡರ್ಗಳೇ ಗೇಮ್ ಚೈಂಜರ್ಸ್. ಅದರಲ್ಲೂ ಪೇಸ್ ಆಲ್ರೌಂಡರ್ ತಂಡದಲ್ಲಿದ್ರೆ, ನಾಯಕನಿಗೆ ಅಡ್ವಾಂಟೇಜ್ ಜಾಸ್ತ್ರಿ. ಆದ್ರೆ, ಈ ವಿಚಾರದಲ್ಲಿ ಟೀಮ್ ಇಂಡಿಯಾದ್ದು ತದ್ವಿರುದ್ಧ ನಿಲುವು. ಹಾರ್ದಿಕ್ ಪಾಂಡ್ಯ ಬಿಟ್ರೆ, ಬೇರೋಬ್ಬ ಪೇಸ್ ಆಲ್ರೌಂಡರ್ ಭಾರತದ ವಿಶ್ವಕಪ್ ತಂಡದಲ್ಲಿ ಇಲ್ಲ. ಈಗಾಗಲೇ ತಾಖತ್ತು ನಿರೂಪಿಸಿರೋ ಶಾರ್ದೂಲ್ ಠಾಕೂರ್ರಂತಹ ಆಟಗಾರ ಆಯ್ಕೆಗೆ ಲಭ್ಯವಿದ್ರೂ, ನಗ್ಲೆಟ್ ಮಾಡಲಾಗಿದೆ.
ಚೈನಾಮನ್ ಸ್ಪಿನ್ನರ್ಗೂ ಇಲ್ಲ ಆಸಿಸ್ ಟಿಕೆಟ್.!
7 ಪಂದ್ಯ, 12 ವಿಕೆಟ್, 4.63 ಎಕಾನಮಿ.. ಇದು ಆಸ್ಟ್ರೇಲಿಯಾದಲ್ಲಿ ಕುಲ್ದೀಪ್ ಯಾದವ್ ಸಾಧನೆ. ತವರಿನಂಗಳದಲ್ಲಿ ಕಾಂಗರೂಗಳನ್ನೇ ಕಾಡಿರೋ ಕುಲ್ದೀಪ್, ಈ ಬಾರಿಯ ವಿಶ್ವಕಪ್ ತಂಡದಲ್ಲಿದ್ದಿದ್ರೆ ಟೀಮ್ ಇಂಡಿಯಾ ಪ್ಲಸ್ ಪಾಯಿಂಟ್ ಆಗ್ತಿತ್ತು. ಹಲ ಮಾಜಿ ಕ್ರಿಕೆಟರ್ಸ್ ಕೂಡ ಇದೇ ಮಾತನ್ನಾಡಿದ್ರು. ಆದ್ರೆ, ಸೆಲೆಕ್ಷನ್ ಕಮಿಟಿ, ಮ್ಯಾನೇಜ್ಮೆಂಟ್ ಕುಲ್ದೀಪ್ರನ್ನ ಕಂಪ್ಲೀಟ್ ಸೈಡ್ಲೈನ್ ಮಾಡಿದೆ.
ಮೊಹಮ್ಮದ್ ಸಿರಾಜ್ಗೂ ಸಿಗಲಿಲ್ಲ ಅವಕಾಶ.!
ಟೀಮ್ ಇಂಡಿಯಾದ ಯಂಗ್ಗನ್ ಮೊಹಮ್ಮದ್ ಸಿರಾಜ್ ಫಾರಿನ್ ಪಿಚ್ಗಳಲ್ಲಿ ಎಷ್ಟು ಏಫೆಕ್ಟೀವ್ ಬೌಲರ್ ಅನ್ನೋದು ಗೊತ್ತಿರೋ ವಿಚಾರವೇ. ಲೈನ್ ಆ್ಯಂಡ್ ಲೆಂಥ್ನೊಂದಿಗೆ, ವೆರಿಯೇಶನ್ ಮಾಡ್ತಾ ರೈಟ್ ಏರಿಯಾದಲ್ಲಿ ಅಗ್ರೆಸ್ಸಿವ್ ಆಗಿ ಬೌಲಿಂಗ್ ಮಾಡೋ ತಾಖತ್ತು ಸಿರಾಜ್ಗಿತ್ತು. ಹಾಗಿದ್ರೂ ಸಿರಾಜ್ ನಿರಾಸೆ ಅನುಭವಿಸಿದ್ದಾರೆ.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಸೋಲಿಗೆ ಟೀಮ್ ಕಾಂಬಿನೇಶನ್ ಕೂಡ ಒಂದು ಮೇಜರ್ ಕಾರಣವಾಗಿತ್ತು. ಈ ಬಾರಿಯ ಬಲಿಷ್ಠ ತಂಡವನ್ನೇ ಪ್ರಕಟಿಸಿದ್ರೂ, ಮತ್ತದೇ ಪ್ರಶ್ನೆಗಳು ಕೇಳಿ ಬರ್ತಿದ್ದು, ಟೂರ್ನಿಯಲ್ಲಿ ಹಿನ್ನಡೆ ಕಾಡದಿರಲಿ ಅನ್ನೋದೇ ಎಲ್ಲರ ಆಶಯವಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post