ರಾಜ್ಯದಲ್ಲಿ ಮಳೆಯಿಂದಾಗುತ್ತಿರೋ ಅವಾಂತರಗಳು ಇನ್ನೂ ನಿಲ್ಲುತ್ತಲೇ ಇಲ್ಲ..ಉತ್ತರ ಕರ್ನಾಟಕದ ಭಾಗದಲ್ಲಿ ನದಿಗಳ ಆರ್ಭಟದಿಂದಾಗಿ ಅನ್ನದಾತ ರೋಸಿ ಹೋಗಿದ್ದಾನೆ. ಊರನ್ನೂ ಬೀಡದೇ ಜಲಾಸುರ ಸಿಕ್ಕ ಸಿಕ್ಕಲ್ಲಿ ನುಗ್ಗುತ್ತಿದ್ದಾನೆ. ಬೆಳೆಗಳು ಕೊಚ್ಚಿ ಹೋಗ್ತಿವೆ.. 20ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಿ ಹೋಗಿವೆ.. ಜನ ಪರದಾಡೋದು ಮಾತ್ರ ನಿಲ್ಲುತ್ತಿಲ್ಲ.
ಸುಮಾರು ತಿಂಗಳು ಕಾಲ ರಾಜ್ಯದ ಜನರ ನೆಮ್ಮದಿ ಹಾಳುಗೆಡವಿರೋ ವರುಣಾಸುರನ ಆರ್ಭಟ ಇನ್ನೂ ತಗ್ಗಿಲ್ಲ. ದಕ್ಷಿಣದಲ್ಲಿ ಕೊಂಚ ಮಳೆ ಕಡಿಮೆಯಾಗಿದ್ರೂ ಉತ್ತರದಲ್ಲಿ ಸೈತಾನ ರೂಪ ತಾಳಿದ್ದಾನೆ. ಊರನ್ನೇ ಮುಳುಗಿಸುವಷ್ಟು ತಾಂಡವವಾಡ್ತಿರೋ ಮಳೆ ಕಾಟಕ್ಕೆ ತತ್ತರಿಸಿ ಹೋಗ್ತಿದ್ದಾರೆ..
ಹಳ್ಳ-ಕೊಳ್ಳ, ನದಿಗಳ ರಭಸಕ್ಕೆ ನಿಲ್ತಿಲ್ಲ ಅವಾಂತರ
ಹರಿಯುವ ನೀರಿನಲ್ಲಿ ತಾಯಿ, ಮಗ ಪರದಾಟ..
ಮಹಾ ಮಳೆಯಿಂದ ಹಳ್ಳ,ಕೊಳ್ಳ ಮತ್ತು ನದಿಗಳು ಉಗ್ರ ತಾಂಡವವಾಡ್ತಿವೆ. ನೀರಿನ ರಭಸಕ್ಕೆ ಯಾರೇ ಎದುರಿಗೆ ಬಂದ್ರೂ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಅರಸೀಕೆರೆಯ ಕೆಂಪುಸಾಗರ ರಸ್ತೆಯಲ್ಲಿ ಕೆರೆ ಕೋಡಿ ಬಿದ್ದು, ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿದೆ. ಇದರ ಮಧ್ಯೆಯೇ, ಅಮ್ಮ, ಮಗ ಹರಿಯುವ ನೀರಲ್ಲಿ ಸಿಲುಕಿಕೊಂಡಿದ್ರು. ಕೂಡಲೇ ಎಚ್ಚೆತ್ತ ಗ್ರಾಮಸ್ಥರು, ಹಗ್ಗದ ಸಹಾಯದಿಂದ ಇಬ್ಬರನ್ನೂ ರಕ್ಷಿಸಿದ್ದಾರೆ.
ಗದಗದಲ್ಲೂ ಮಳೆ ಆರ್ಭಟ.. ಈಜಿ ಟ್ರಾನ್ಸ್ಫಾರ್ಮರ್ ದುರಸ್ಥಿ
ಮಲಪ್ರಭಾ ನದಿಯ ನೀರು ನರಗುಂದ ತಾಲೂಕಿನ ಕೊಣ್ಣೂರು ಗ್ರಾಮಕ್ಕೂ ನುಗ್ಗಿದೆ. ಟ್ರಾನ್ಸ್ ಫಾರ್ಮರ್ ನದಿ ನೀರಿನಲ್ಲಿ ಮುಳುಗುವ ಹಂತದಲ್ಲಿತ್ತು. ಲೈನ್ ಮ್ಯಾನ್ ಮಂಜುನಾಥ್ ಕುಂಬಾರ್ ಎಂಬಾತ, 30 ಅಡಿ ಈಜಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಮಂಜುನಾಥರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ವೇದಾವತಿ ನದಿ ನೀರಲ್ಲಿ ಮುಳುಗಿದ ರಾರಾವಿ ಬ್ರಿಡ್ಜ್
ಅತ್ತ ಬಳ್ಳಾರಿಯ ವೇದಾವತಿ ನದಿ ನೀರು ಕಡಿಮೆ ಆದ್ರೂ ಜನರ ಪರದಾಟ ಮಾತ್ರ ತಪ್ಪಿಲ್ಲ. ನದಿ ನೀರಿನ ಮಟ್ಟ ಹೆಚ್ಚಳವಾಗಿ ರಾರಾವಿ ಬ್ರಿಡ್ಜ್ ಮುಳುಗಡೆ ಆಗಿದೆ. ಸಿರಗುಪ್ಪ ತಾಲೂಕಿನ ಸುಮಾರು 20 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವಂತಹ ಸೇತುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಸವಾರರು, ಅಕ್ಕಪಕ್ಕದ ಗ್ರಾಮಸ್ಥರು ಪರದಾಟುತ್ತಿದ್ದಾರೆ.
2 ತಿಂಗಳಲ್ಲಿ 3ನೇ ಬಾರಿಗೆ ದೇವಸ್ಥಾನಕ್ಕೆ ಕೊಲ್ಹಾಪುರದ ಶಿರೋಳ ತಾಲೂಕಿನ ನರಸಿಂಹವಾಡಿ ದತ್ತ ಮಂದಿರ ಜಲಾವೃತವಾಗಿದೆ. ಕೃಷ್ಣಾ, ದೂದ್ ಗಂಗಾ ಮತ್ತು ವೇದಗಂಗಾ ನದಿಯ ಸಂಗಮ ಸ್ಥಳ ಇದಾಗಿದ್ದು, ನೀರು ಹೆಚ್ಚಾಗಿ ಹರಿದು ಬರ್ತಿದೆ.. ಮತ್ತೊಂದ್ಕಡೆ ದಾವಣಗೆರೆಯ ಹೊನ್ನೂರು ಗ್ರಾಮದ ಕೆರೆ ಕೋಡಿ ಒಡೆದಿದೆ. ಪರಿಣಾಮ ನಾಲ್ಕು ಗ್ರಾಮಗಳ ಜಮೀನು ನೀರಿನಲ್ಲಿ ಮುಳುಗಡೆಯಾಗಿದೆ. ಮೆಕ್ಕೆಜೋಳ, ಅಡಿಕೆ, ಭತ್ತ ಸೇರಿ ಹಲವು ಬೆಳೆಗಳು ನಾಶವಾಗಿವೆ.
ಅತ್ತ ನರಗುಂದ ತಾಲೂಕಿನ ಹಲವು ಗ್ರಾಮಗಳಲ್ಲಿ, ಮಲಪ್ರಭಾ ನದಿಯ ಪ್ರವಾಹಕ್ಕೆ ಬೆಳೆಗಳು ಹಾಳಾಗಿವೆ. ಲಖಮಾಪೂರ, ವಾಸನ, ಕೊಣ್ಣೂರ ಸೇರಿ ಹಲವು ಗ್ರಾಮಗಳಲ್ಲಿ ಬೆಳೆಗಳು ನೀರು ಪಾಲಾಗಿವೆ. ಹೀಗಾಗಿ ನರಗುಂದ ತಾಲೂಕಿನ ಒಟ್ಟು 16 ಗ್ರಾಮಗಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ನದಿಯ ಪಾತ್ರಕ್ಕೆ ಯಾರು ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕೃಷ್ಣೆ ಅಬ್ಬರ.. ಸುತ್ತಮುತ್ತಲು ಇರುವ ಊರುಗಳ ಜನ ತತ್ತರ!
ಕೋಯ್ನಾ ಜಲಾಶಯದಿಂದ ನೀರನ್ನ ಬಿಡುಗಡೆ ಮಾಡಿರೋದ್ರಿಂದ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ, ಅವಾಂತರವನ್ನ ಸೃಷ್ಟಿಯಾಗಿದೆ. ರೈತರು ಕಂಗಾಲಾಗಿದ್ದಾರೆ. ಜೊತೆಗೆ 6 ಸೇತುವೆಗಳು ಮುಳುಗಡೆಯಾಗಿದೆ. ಸವಾರರು ಪರದಾಡುವಂತಾಗಿದೆ. ಒಟ್ಟಾರೆ, ಮಹಾ ಮಳೆಯಿಂದ ರಾಜ್ಯದ ಉದ್ದಗಲಕ್ಕೂ ಸಿಕ್ಕಾಪಟ್ಟೆ ಅವಾಂತರದ ಜೊತೆ ಅವಘಡಗಳು ಸಹ ಸಂಭವಿಸುತ್ತಲೇ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post