ಧ್ರುವ ಪತ್ನಿಯ ಸೀಮಂತದ ವಿಡಿಯೋ..
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ದಂಪತಿ ಚೊಚ್ಚಲ ಮಗುವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರೇರಣಾ ಧ್ರುವ ಅವರ ಸೀಮಂತ ಕಾರ್ಯಕ್ರಮ ನಡೆದಿತ್ತು. ಈ ವಿಡಿಯೋವನ್ನ ಈಗ ಧ್ರುವ ಸರ್ಜಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.
ಸಲ್ಲು-ಮೆಗಾಸ್ಟಾರ್ ಡ್ಯಾನ್ಸ್ ವಿಡಿಯೋ ರಿಲೀಸ್
ಮೆಗಾಸ್ಟಾರ್ ಚಿರಂಜೀವಿ ನಟನೆಯ ಗಾಡ್ಫಾದರ್ ಸಿನಿಮಾದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆಸ್ಟ್ ರೋಲ್ ಮಾಡಿದ್ದು, ಇವರಿಬ್ಬರ ಕಾಂಬಿನೇಷನ್ನಲ್ಲಿ ಡ್ಯಾನ್ಸ್ ನಂಬರ್ ಕೂಡ ಇದೆ ಎಂದು ಹೇಳಲಾಗಿತ್ತು. ಇದೀಗ, ಸಲ್ಲು ಭಾಯ್ ಮತ್ತು ಚಿರಂಜೀವಿ ಡ್ಯಾನ್ಸ್ ಸಾಂಗ್ ಬಿಡುಗಡೆಯಾಗಿದ್ದು, ಮೆಗಾ ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ.
ಯಶ್ ರಾಕಿಂಗ್ ಫೋಟೋಸ್ ವೈರಲ್..
ಸೈಮಾದಲ್ಲಿ ಮಿರ ಮಿರ ಅಂತ ಮಿಂಚಿದ್ದ ರಾಕಿಂಗ್ ಸ್ಟಾರ್ ಅವರ ಹೊಸ ಫೋಟೋಶೂಟ್ ಈಗ ಆಲ್ ಇಂಡಿಯಾದಲ್ಲಿ ಚರ್ಚೆಯಾಗಿದೆ. ವೈಟ್ ಅಂಡ್ ವೈಟ್ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರೋ ಕೆಜಿಎಫ್ ನಟನ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಕೆಜಿಎಫ್ ಆದ್ಮೇಲೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳದ ಯಶ್ ಯಾವಾಗ ಅಪ್ಡೇಟ್ ಕೊಡ್ತಾರೆ ಅಂತ ಕಾಯ್ತಿದೆ ರಾಕಿ ಬಳಗ.
‘ಲವ್ 360’ ಚಿತ್ರಕ್ಕೆ 25ರ ಸಂಭ್ರಮ
ಶಶಾಂಕ್ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿ ಬಂದಿದ್ದ ‘ಲವ್ 360’ ಸಿನಿಮಾ ಯಶಸ್ವಿ 25 ದಿನ ಪೂರೈಸಿದೆ. ಪ್ರವೀಣ್ ಮತ್ತು ರಚನಾ ಇಂದರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಲವ್ 360 ಆಗಸ್ಟ್ 19ಕ್ಕೆ ರಿಲೀಸ್ ಆಗಿ ಜನ ಮೆಚ್ಚುಗೆ ಪಡೆದುಕೊಂಡಿತ್ತು. ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸಾಂಗ್ಸ್ ಅಷ್ಟೇ ದೊಡ್ಡ ಹಿಟ್ ಕೂಡ ಆಗಿದ್ದವು.
ಗಲ್ಲಿ ಬಾಯ್ ‘ರಾಣಾ’
ನಿರ್ಮಾಪಕ ಕೆ ಮಂಜು ಮಗ ಶ್ರೇಯಸ್ ನಟನೆಯ ರಾಣಾ ಚಿತ್ರದ ಗಲ್ಲಿ ಬಾಯ್ ಹಾಡಿನ ಪ್ರೋಮೋ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದೆ. ಚಂದನ್ ಶೆಟ್ಟಿ ಲಿರಿಕ್ ಬರೆದು ತಾವೇ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಂದಕಿಶೋರ್ ನಿರ್ದೇಶನ ಮಾಡಿದ್ದು, ರೀಷ್ಮಾ ನಾನಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post