ಪ್ರಧಾನಿ ನರೇಂದ್ರ ಮೋದಿಗೆ ಇಂದು ಜನ್ಮದಿನದ ಸಂಭ್ರಮ. 72ನೇ ವಸಂತಕ್ಕೆ ಪ್ರಧಾನಿ ಕಾಲಿರಿಸಿದ್ದಾರೆ. ಮೂರು ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಎರಡನೇ ಬಾರಿಗೆ ಭಾರತದ ಪ್ರಧಾನಿ ಸ್ಥಾನ ಅಲಂಕರಿಸಿರುವ ಮೋದಿ, ಜನ್ಮದಿನ ಸಂಭ್ರಮಾಚರಣೆಗೆ ಬಿಜೆಪಿ ಹಾಗೂ ಮೋದಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಸೆಪ್ಟೆಂಬರ್ 17.. ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಹುಟ್ಟುಹಬ್ಬ.. ಈ ಹುಟ್ಟುಹಬ್ಬವನ್ನ ಬಿಜೆಪಿ ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆಸಿದೆ.. ದೇಶದ ಹಲವೆಡೆ, ಮೋದಿ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ.
14 ಕೋಟಿ ಪಡಿತರ ಕಿಟ್ಗಳ ವಿತರಣೆ
ದೇಶದ ಉದ್ಧಗಲಕ್ಕೂ ಪ್ರಧಾನಿ ಮೋದಿ ಜನ್ಮದಿನ ಸಂಭ್ರಮಾಚರಣೆ ಸ್ಮರಣಿಯವಾಗಿಸಲು ಬಿಜೆಪಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದಲ್ಲಿ 14 ಕೋಟಿ ಪಡಿತರ ಕಿಟ್ಗಳನ್ನು ವಿತರಿಸಲು ಯೋಜನೆ ರೂಪಿಸಿಕೊಂಡಿದೆ.
ಬಿಜೆಪಿಯಿಂದ ಇಂದಿನಿಂದ ‘ಸೇವಾ ಪಖ್ವಾಡಾ’ ಕಾರ್ಯಕ್ರಮ
ಇನ್ನು, ಪಕ್ಷದ ವತಿಯಿಂದ ಸೆಪ್ಟೆಂಬರ್ 17ರಂದು ‘ಸೇವಾ ಪಖ್ವಾಡಾ’ ಎಂದು ಆಚರಿಸಲು ಸಿದ್ಧತೆ ನಡೆಸಿದೆ.. ಅಕ್ಟೋಬರ್ 2 ರವರೆಗೆ 15 ದಿನಗಳ ಸೇವಾ ಚಟುವಟಿಕೆ ಹಮ್ಮಿಕೊಂಡಿದೆ.. ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ, ಕ್ರೀಡಾಚಟುವಟಿಕೆ ಹಮ್ಮಿಕೊಂಡಿದೆ.
ಮೋದಿ ಕರ್ಮಭೂಮಿಯಲ್ಲಿ ಪ್ರಜ್ವಲಿಸಿದ ದ್ವೀಪಗಳು!
ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಸಿ ಕ್ಷೇತ್ರದಲ್ಲಿ ಸಂಭ್ರಮ ಮತ್ತಷ್ಟು ಹೆಚ್ಚಿದೆ. ಕಾಶಿಯಲ್ಲಿರುವ ವಾರಣಾಸಿಯ ಭಾರತ ಮಾತಾ ದೇವಸ್ಥಾನದಲ್ಲಿ 71,000 ದ್ವೀಪಗಳನ್ನು ಬೆಳಗಿಸಲಾಗಿದೆ.
ಕುನೋ ರಾಷ್ಟ್ರೀಯ ಉದ್ಯಾನವನದ ಹೊಸ ಅತಿಥಿಗೆ ಸ್ವಾಗತ!
ಇನ್ನು, ದೇಶದ ವನ್ಯಜೀವಿ ಮತ್ತು ಆವಾಸಸ್ಥಾನ ಪುನರುಜ್ಜೀವನಗೊಳಿಸುವ ಮತ್ತು ವೈವಿಧ್ಯಗೊಳಿಸುವ ಪ್ರಯತ್ನಗಳ ಭಾಗವಾಗಿ ಪ್ರಧಾನಿ ಮಧ್ಯಪ್ರದೇಶಕ್ಕೆ ಆಗಮಿಸಲಿದ್ದಾರೆ.. ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಆಫ್ರಿಕಾದಿಂದ 8 ಚಿರತೆಗಳಿಗೆ ಹಸ್ತಾಂತರ ಮಾಡಲಿದ್ದಾರೆ.
ಪ್ರಧಾನಿ ಮೋದಿ ಜನ್ಮ ದಿನ, 56 ಐಟಂಗಳ ಭಕ್ಷ ಭೋಜನ
ಇತ್ತ ದೆಹಲಿಯಲ್ಲಿ ಪ್ರಧಾನಿ ಮೇಲಿನ ಪ್ರೀತಿಗಾಗಿ ರೆಸ್ಟೋರೆಂಟ್ವೊಂದು 56 ಐಟಂಗಳೊಂದಿಗೆ ದೊಡ್ಡ ಗಾತ್ರದ ಥಾಲಿಯನ್ನ ತಯಾರಿಸಲಿದೆ.. ಗ್ರಾಹಕರು ತಮಗೆ ಇಷ್ಟವಾದ ಸಸ್ಯಾಹಾರಿ ಮತ್ತು ಮಾಂಸಾಹಾರವನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಮೋದಿಗೆ ಬಂದ ಎಲ್ಲಾ ಉಡುಗೊರೆಗಳ ಹರಾಜು
ಪ್ರಧಾನಿ ಹುದ್ದೆಗೆ ಅಲಂಕರಿಸಿದಾಗಿಂದ ಬಂದಂತಹ ಉಡುಗೊರೆ ಇಂದಿನಿಂದ ಹರಾಜಾಗಲಿವೆ.. 8 ವರ್ಷಗಳಲ್ಲಿ ಸಿಕ್ಕಿರುವ ಉಡುಗೊರೆಗಳು, ಸ್ಮರಣಿಕೆಗಳು ಸೇರಿ ಸುಮಾರು 1,200 ವಸ್ತುಗಳನ್ನ ಹರಾಜಿಗೆ ಇಡಲಾಗ್ತಿದೆ.. ಬಂದ ದುಡ್ಡಲ್ಲಿ ನಮಾಮಿ ಗಂಗಾ ಮಿಷನ್‌ಗೆ ಮೀಸಲಿಡಲಾಗುತ್ತದೆ.
ಇಂದು ಜನಿಸಿದ ಶಿಶುಗಳಿಗೆ ಚಿನ್ನದ ಉಂಗುರ
ಇತ್ತ, ತಮಿಳುನಾಡಿನ ಬಿಜೆಪಿ ಘಟಕ ಇವತ್ತು ರಾಜ್ಯದಲ್ಲಿ ಜನ್ಮತಾಳುವ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ಕಾಣಿಕೆ ನೀಡಲು ನಿರ್ಧರಿಸಿದೆ. ಪ್ರತಿ ಉಂಗುರ 2 ಗ್ರಾಂ ಚಿನ್ನ ಒಳಗೊಂಡಿರಲಿದೆ. ಇದಲ್ಲದೆ, 720 ಕಿಲೋ ಗ್ರಾಂಗಳಷ್ಟು ಮೀನುಗಳನ್ನು ವಿತರಿಸುವ ಯೋಜನೆ ಹಾಕಿಕೊಂಡಿದೆ. ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನವನ್ನ ಸಂಭ್ರಮ, ಸಡಗರದಿಂದ ಆಚರಿಸಲು ಸಿದ್ಧತೆ ನಡೆದಿದೆ.
Thanks to PM Modi's love for wildlife, Cheetahs are returning to India after 7 decades!
He will personally receive the 8 Cheetahs from Namibia, arriving at Kuno National Park in Madhya Pradesh tomorrow.
Witness Modi walk the talk on wildlife conservation and much more here! pic.twitter.com/v6Zbp1qF2r
— Modi Story (@themodistory) September 16, 2022
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post