2023ರ ಚುನಾವಣೆಗೆ ಕಾಂಗ್ರೆಸ್ ಸರ್ವ ಸನ್ನದ್ಧಗೊಳ್ತಿದೆ. ಸಿದ್ದರಾಮೋತ್ಸವ ಬಳಿಕ ರಣೋತ್ಸಾಹದಲ್ಲಿರುವ ಸಿದ್ದರಾಮಯ್ಯ, ಅದೇ ಜೋಷ್ನ ರಥ, ಚುನಾವಣೆವರೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಅಂದಹಾಗೇ ರಥ ಅಂತ ಹೇಳ್ದೆ.. ಹೌದು ಸಿದ್ದರಾಮಯ್ಯ ರಥಯಾತ್ರೆನೇ ಹೊರಡ್ತಿರೋದು.. ಇದಕ್ಕಾಗಿ ಹೈಟೆಕ್ ರಥವೇ ಸಿದ್ಧವಾಗ್ತಿದೆ.
2023ರ ವಿಧಾನಸಭೆ ಮಹಾಸಮರ ಮೂವರು ಮಹಾರಥಿಗಳ ಮಹತ್ವಾಕಾಂಕ್ಷೆ ನಿರ್ಣಾಯಕ ಘಟ್ಟ. ಅದರಲ್ಲೂ ಕಾಂಗ್ರೆಸ್ ಒಳಗೆ-ಹೊರಗೆ ಚಕ್ರವ್ಯೂಹ ಬೇಧಿಸುವ ಸವಾಲು ಎದುರಿಸ್ತಿರುವ ಸಿದ್ದರಾಮಯ್ಯ ಪಾಲಿಗೆ ಈ ಚುನಾವಣೆ ಮಾಡು ಇಲ್ಲವೇ ಮಡಿ. 2018ರಲ್ಲಿ ಕೈಸುಟ್ಟುಕೊಂಡಿದ್ದ ಅಹಿಂದರಾಮಯ್ಯ, ಈ ಬಾರಿ ರೋಡ್ಬ್ರೇಕ್ಗಳನ್ನ ದಾಟಿ ರೇಸ್ ಗೆಲ್ಲಬೇಕಿದೆ.. ಅದಕ್ಕಾಗಿ ಈ ರೇಸ್ಗಾಗಿಯೇ ವಿಶೇಷ ರಥವೂ ಸಿದ್ಧವಾಗಿದೆ.
2023ರ ಸಾರ್ವತ್ರಿಕ ಚುನಾವಣೆಗೆ ಸಿದ್ದರಾಮಯ್ಯ ರಣಕಹಳೆ!
ಸಿದ್ದರಾಮೋತ್ಸವದ ಬಳಿಕ ರಾಜ್ಯದಲ್ಲಿ ರಥಯಾತ್ರೆಗೆ ಸಿದ್ಧತೆ!
2023 ರಾಜ್ಯ ವಿಧಾನಸಭೆಯ ಚುನಾವಣೆ, ದೇಶದ ದಿಕ್ಕು ದೆಸೆಗಳನ್ನ ನಿರ್ಣಯಿಸುವ ಮತಯುದ್ಧ.. ಬಿಜೆಪಿಗೆ ನೇರ ಸವಾಲು ಇರೋ ಏಕೈಕ ರಾಜ್ಯವಾಗಿರುವ ಕರ್ನಾಟಕದ ಬಗ್ಗೆ ಹೈಕಮಾಂಡ್ ಕೂಡ ಇಬ್ಬರು ಸಾರಥಿಗಳಾದ ಸಿದ್ದು-ಡಿಕೆಶಿ ಹೆಗಲಿಗೆ ಚುನಾವಣೆ ರಥ ಒಪ್ಪಿಸಿದೆ.. ಈಗಾಗಲೇ ಸಿದ್ದರಾಮೋತ್ಸವದಲ್ಲಿ ಸೇರಿದ್ದ ಜನಸಾಗರ, ರಾಜ್ಯ ರಾಜಕೀಯದಲ್ಲಿ ಕಂಪನ ಸೃಷ್ಟಿಸಿದೆ.. ಇದೀಗ ಹೊಸ ಟಾಸ್ಕ್ ಹಾಕಿಕೊಂಡಿರುವ ಸಿದ್ದು, ಜನರ ಆಶೀರ್ವಾದ ಕೇಳಲು ಸಜ್ಜಾಗಿದ್ದಾರೆ.
ಕರ್ನಾಟಕ ಎಲೆಕ್ಷನ್ ಮಾಸ್ಟರ್ ತಂತ್ರರಾಮಯ್ಯ, ಚುನಾವಣೆಗೆ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಜನಾಶೀರ್ವಾದ ರಥಯಾತ್ರೆಗಾಗಿ ವಿಶೇಷ ಬಸ್ ರೆಡಿ ಆಗಿದೆ. ಪ್ರತಿಷ್ಠಿತ ಕಂಪನಿಯಿಂದ ಹೈಟೆಕ್ ಬಸ್ ರೆಡಿಯಾಗಿದೆ. ಇದೇ ಬಸ್‌ನ ಮೂಲಕ ರಾಜ್ಯದ 224 ಕ್ಷೇತ್ರದಲ್ಲಿ ಸಂಚಾರ ನಡೆಸಿದ್ದಾರೆ.. ಈ ಹೈಟೆೆಕ್ ಬಸ್‌ನ ಎಕ್ಸ್‌ಕ್ಲೂಸಿವ್ ಮಾಹಿತಿ ನ್ಯೂಸ್‌ಫಸ್ಟ್‌ನಲ್ಲಿ ಬಿಚ್ಚಿಡ್ತಿದೆ.
ಹೈಟೆಕ್ ಬಸ್‌ನ ವಿಶೇಷತೆ ಏನು?
ಸಂಪೂರ್ಣ ಹೈಟೆಕ್ ಆಗಿರುವ ಈ ಪ್ರತಿಷ್ಠಿತ ಕಂಪನಿ ಬಸ್, 4 ಸುಖಾಸೀನ ಸೀಟ್ಗಳನ್ನ ಹೊಂದಿದೆ. ಬಸ್ನಲ್ಲಿ ಹವಾ ನಿಯಂತ್ರಿತ ವ್ಯವಸ್ಥೆ ಇರಲಿದೆ. ಅಲ್ಲದೆ, ಬಸ್ನಲ್ಲಿ ಎರಡು ಟಿವಿಗಳ ವ್ಯವಸ್ಥೆಯಿದ್ದು, ರೂಫ್ಗೆ ತಲುಪಲು ಲಿಫ್ಟ್ ವ್ಯವಸ್ಥೆ ಇದೆ. ಇದೇ ಬಸ್ನಲ್ಲಿ ಮೀಟಿಂಗ್ ಹಾಲ್ ಕೂಡ ಇದ್ದು, ಅದ್ಭುತ ಲೈಟಿಂಗ್ಸ್ ವ್ಯವಸ್ಥೆ ಇದೆ. ಇನ್ನು, ಈ ಹೈಟೆಕ್ ಬಸ್ನಲ್ಲಿ ಟಾಯ್ಲೆಟ್ ಮತ್ತು ವಾಷ್ ರೂಂ ಕೂಡ ಇದ್ದು, ಸಿದ್ದು ಸವಾರಿಗೆ ಸಜ್ಜಾಗಿದೆ. ಅಂಧ್ರದಿಂದ ಬೆಂಗಳೂರಿಗೆ ಬಂದಿರುವ ವಿಶೇಷ ಹೈಟೆಕ್ ಬಸ್ನಲ್ಲೇ ಸಿದ್ದರಾಮಯ್ಯ ರಥ ಯಾತ್ರೆ ಆರಂಭಿಸಲಿದ್ದಾರೆ.
ಶಾಸಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ ಸಿದ್ದು..
ಮೈಸೂರು ರಸ್ತೆಯ ಪ್ರತಿಷ್ಠಿತ ಅಟೋ ಮೊಬೈಲ್ ಕಂಪನಿಯಲ್ಲಿ ಬಸ್ ಅಲ್ಟ್ರೇಸನ್ ಕಾರ್ಯ ನಡೀತಿದೆ.. ಬಸ್ ಮಾಡಿಫಿಕೇಷನ್ ಉಸ್ತುವಾರಿ ಉಸ್ತುವಾರಿಯನ್ನ ಸಿದ್ದರಾಮಯ್ಯ ಆಪ್ತರಾಗಿರುವ ಬೆಂಗಳೂರಿನ ಕಾಂಗ್ರೆಸ್ ಶಾಸಕ ವಹಿಸಿಕೊಂಡಿದ್ದಾರೆ.. ಇದೇ ಬಸ್‌ನ ಮೂಲಕ ಸಿದ್ದರಾಮಯ್ಯ, ರಾಜ್ಯದ 224 ಕ್ಷೇತ್ರದಲ್ಲಿ ಸಂಚಾರ ಸಭೆ ಮತ್ತು ಱಲಿ ನಡೆಸಲಿದ್ದಾರೆ.. ಈ ಬಗ್ಗೆ ಈಗಾಗಲೇ ಶಾಸಕರೊಂದಿಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ.
ಒಟ್ಟಾರೆ, ಜನಾಶೀರ್ವಾದ ರಥಯಾತ್ರೆಗೆ ಸಿದ್ದರಾಮಯ್ಯ ತಯಾರಿ ನಡೆಸಿದ್ದು, ಚುನಾವಣೆಗಾಗಿ ಅಖಾಡಕ್ಕಿಳಿಯಲು ಸರ್ವ ಸಿದ್ಧತೆ ಕೈಗೊಂಡಿದ್ದಾರೆ.. ಭಾರತ್ ಜೋಡೋ ಯಾತ್ರೆ ಮುಗಿಯುತ್ತಿದ್ದಂತೆ ಸಿದ್ದು ರಥ ಯಾತ್ರೆ ಆರಂಭವಾಗಲಿದೆ ಅಂತ ಹೇಳಲಾಗ್ತಿದೆ.. ಮಾಸ್ರಾಮಯ್ಯ ಹೊರಡಲಿರುವ ಈ ಯಾತ್ರೆ ಸುದ್ದಿ ಕೇಳಿದ ಕಾಂಗ್ರೆಸ್ ಶಾಸಕರು ಖುಷ್ ಖುಷ್, ದಿಲ್ ಖುಷ್ ಆಗಿದ್ದಾರೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post