ಚಾಮರಾಜನಗರ: ‘ಭಾರತ್ ಜೋಡೋ’ ಯಾತ್ರೆ ಯಶಸ್ವಿಯಾಗುತ್ತೆ ಅನ್ನೋ ಸಂಶಯ ಅವರಿಗೆ (ಬಿಜೆಪಿ) ಇರಬಹುದು. ಅದಕ್ಕೆ ಡಿ.ಕೆ.ಶಿವಕುಮಾರ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಸಮನ್ಸ್ ಬಂದಿದೆ ಎಂದು ರಾಜ್ಯ ಕಾಂಗ್ರೆಸ್ನ ಯುವ ಘಟಕದ ಅಧ್ಯಕ್ಷ ನಲ್ಪಾಡ್ ಕಿಡಿಕಾರಿದ್ದಾರೆ.
‘ಭಾರತ್ ಜೋಡೋ’ ಯಾತ್ರೆ ರಾಜ್ಯಕ್ಕೆ ಬರುವ ಸಮಯದಲ್ಲಿ ಇ.ಡಿ. ನೋಟಿಸ್ ಬಂತು. ಮೂರು ವರ್ಷದಿಂದ ಪ್ರಕರಣ ನಡೀತಿದೆ, ಪ್ರಕರಣ ಆಯ್ತು, ಬಂಧನ ಸಹ ಆಯ್ತು. ಆಗಲೇ ಚಾರ್ಜ್ಶೀಟ್ ಹಾಕಬಹುದಿತ್ತು. ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ನಾವು ಮಾಡಿದ ಪಾದಯಾತ್ರೆಯನ್ನ ನೋಡಿದ್ದಾರೆ. ‘ಭಾರತ್ ಜೋಡೋ’ ಯಾತ್ರೆ ಯಶಸ್ವಿಯಾಗುತ್ತೆ ಅನ್ನೋ ಸಂಶಯ ಅವರಿಗೆ ಇರಬಹುದು. ಟೆನ್ಯನ್ ಕೊಡಬೇಕು ಎಂದೇ ಹೀಗೆ ಮಾಡ್ತಿರಬಹುದು ಎಂದು ಕಿಡಿಕಾರಿದ್ದಾರೆ.
ಭಾರತ್ ಜೊಡೋ ಯಾತ್ರೆಗೆ ಎಲ್ಲರ ಸಹಕಾರ ಸಿಗುತ್ತಿಲ್ಲ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಒಬ್ಬರು ಹೇಳಿದ ವಿಚಾರವನ್ನು ಮಧ್ಯದ ಸಾಲಿನಿಂದ ಓದುವ ಅವಶ್ಯಕತೆ ಇಲ್ಲ. ನೂರಕ್ಕೆ ನೂರು ಪಾಲು ಎಲ್ಲರೂ ಸಹಕಾರ ಕೊಡ್ತಾರೆ. ಎಲ್ಲ ಹಾಲಿ ಮತ್ತು ಮಾಜಿ ಶಾಸಕರು ಅದ್ದೂರಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸ್ವಾತಂತ್ರ್ಯ ನಡಿಗೆ, ಮೇಕೆದಾಟು ಪಾದಯಾತ್ರೆಗಿಂತಲೂ ಭಾರತ್ ಜೋಡೋ ಯಾತ್ರೆ ಅದ್ದೂರಿಯಾಗಿ ನಡೆಯುತ್ತೆ ಎಂದರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post