ಚಾಮರಾಜನಗರ: 50 ಸಾವಿರ ರೂಪಾಯಿ ಹಣಕ್ಕೆ 25 ದಿನದ ಮಗು ಮಾರಾಟ ಮಾಡಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಶಿಶುವನ್ನು ಪೊಲೀಸರು 24 ತಾಸಿನೊಳಗೆ ಪತ್ತೆಹಚ್ಚಿ ತಾಯಿ ಮಡಿಲಿಗೆ ಒಪ್ಪಿಸಿದ್ದಾರೆ. ಆದರೆ ಕಳೆದ 7 ದಿನಗಳಿಂದ ಎದೆಹಾಲು ಕುಡಿಸದೇ ಪ್ಯಾಕೆಟ್ ಹಾಲು ಕುಡಿಸಿರುವುದರಿಂದ ಮಗುವಿನ ಆರೋಗ್ಯದಲ್ಲಿ ಏರುಪಾರಾಗಿದ್ದು, ಸದ್ಯ ಶಿಶುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರದ ಕೋರ್ಟ್ ರಸ್ತೆ ಬಡಾವಣೆಯಲ್ಲಿ ವಾಸವಿರುವ, ಹೋಟೆಲ್ ಕಾರ್ಮಿಕ ಬಸಪ್ಪ ಹಾಗೂ ನಾಗವೇಣಿ ದಂಪತಿಗೆ 7 ವರ್ಷದ ಗಂಡು ಮಗು ಇದೆ. 25 ದಿನಗಳ ಹಿಂದಷ್ಟೇ ಎರಡನೇ ಹೆರಿಗೆಯಲ್ಲಿ ಮತ್ತೊಂದು ಗಂಡು ಮಗು ಜನಿಸಿತ್ತು. ಆ ಮಗುವನ್ನು ಬಸಪ್ಪ ಗಾಳೀಪುರದ ವ್ಯಕ್ತಿಯೊಬ್ಬನಿಗೆ 50 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು.
ಈ ಬಗ್ಗೆ ಮಾಹಿತಿ ತಿಳಿದುಕೊಂಡು ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮಗುವಿನ ಪತ್ತೆಗೆ ಹುಡುಕಾಟ ನಡೆಸಿದ್ರು. ಈ ವೇಳೆ ಮದ್ದೂರು ತಾಲೂಕಿನ ಊರೊಂದರಲ್ಲಿದ್ದ ಮಗುವನ್ನು ಪತ್ತೆಹಚ್ಚಿ ಪ್ರಕರಣ ಸುಖಾಂತ್ಯಗೊಳಿಸಿದ್ದಾರೆ. ಮಗು ಮಾರಾಟ ಮಾಡಿದ್ದ ಬಸಪ್ಪನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post