ಶಿವಮೊಗ್ಗ: ಐಸಿಸ್ ಜೊತೆ ನಂಟು ಹೊಂದಿದ್ದ ಬಂಧಿತ ಆರೋಪಿಗಳನ್ನ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಬಂಧಿಸಲಾಗಿದ್ದ ಆರೋಪಿಗಳನ್ನ ಕೋರ್ಟ್ಗೆ ಹಾಜರು ಪಡಿಸಿದ್ದ ಪೊಲೀಸರು ಹೆಚ್ಚಿನ ತನಿಖೆ ಸಂಬಂಧ ಇಬ್ಬರೂ ಆರೋಪಿತರನ್ನ ಕಸ್ಟಡಿಗೆ ಕೋರಿದ್ದರು. ಪೊಲೀಸರ ಮನವಿಯನ್ನು ಮಾನ್ಯ ಮಾಡಿದ ಕೋರ್ಟ್, 7 ದಿನಗಳ ಶಂಕಿತ ಉಗ್ರರನ್ನು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿದೆ.
ಬಂಧಿತ ಇಬ್ಬರು ಆರೋಪಿಗಳು, ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಕೃತ್ಯವೆಸಗಲು ಸಂಚು ರೂಪಿಸಿದ್ದರು ಅಂತ ಪೊಲೀಸರು ಆರೋಪಿಸಿದ್ದಾರೆ. ಆರೋಪಿಗಳು ಕಾರ್ಯಚರಿಸುತ್ತಿದ್ದ ಒಟ್ಟು 11 ಸ್ಥಳಗಳ ಮೇಲೆ ಇಲ್ಲಿಯವರೆಗೆ ದಾಳಿ ನಡೆಸಲಾಗಿದೆ. ಅಲ್ಲದೇ ಬಂಧಿತ ಆರೋಪಿಗಳನ್ನ ಮಂಗಳೂರಿನ ಬಂಟ್ವಾಳಕ್ಕೆ ಕರೆದೊಯ್ದು, ತೀರ್ಥಹಳ್ಳಿ ಡಿಎಸ್ಪಿ ಶಾಂತವೀರ್ ನೇತೃತ್ವದಲ್ಲಿ ಮಹಜರು ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ: ಮಲೆನಾಡಿನಲ್ಲಿ ಭೀತಿ ಹುಟ್ಟಿಸಿದ ಉಗ್ರರ ಹೆಜ್ಜೆ ಗುರುತು-ಬಗೆದಷ್ಟು ಸ್ಫೋಟಕ ಮಾಹಿತಿ ಬಯಲು..
ಬಂಟ್ವಾಳ ಮಂಗಳೂರು ನಡುವಿನ ಸೇತುವೆ ಬಳಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸ್ಫೋಟಕಗಳನ್ನು ಬಚ್ಚಿಟ್ಟಿರುವ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಹಲವು ಮಹತ್ವದ ಪುರಾವೆಗಳು ಲಭ್ಯವಾಗಿವೆ. ಇನ್ನು, ಆರೋಪಿಯ ಮೇಲಿನ ಕೃತ್ಯದ ಆರೋಪಕ್ಕೆ ಪೂರಕವಾಗಿ ಪೊಲೀಸರಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡಲಾಗ್ತಿದೆ.
ಇದನ್ನೂ ಓದಿ: ಶಂಕಿತ ಉಗ್ರರಿಂದ ಸ್ಫೋಟಕ ಮಾಹಿತಿ..ಅಬ್ದುಲ್ ಮತೀನ್ ಹುಡುಕಿಕೊಟ್ಟವ್ರಿಗೆ ₹10 ಲಕ್ಷ ಗಿಫ್ಟ್..!
ಇನ್ನು, ಬಂಧಿತ ಶಂಕಿತ ಆರೋಪಿ ಮಾಜ್ ತಂದೆಗೆ ಹೈಕೋರ್ಟ್ ದಂಡ ವಿಧಿಸಿದೆ. ಮಗ ನಾಪತ್ತೆಯಾಗಿದ್ದಾನೆ ತಂದೆ ಮುನೀರ್ ಸುಳ್ಳು ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು ಎನ್ನಲಾಗಿದೆ. ಟೆರರ್ ಕೇಸ್ನಲ್ಲಿ ಪೊಲೀಸ್ರು ಕರೆದೊಯ್ದಿರೋದು ಗೊತ್ತಿದ್ರೂ ಅರ್ಜಿ ಸಲ್ಲಿಸಿದ್ದಕ್ಕೆ ನ್ಯಾ.ಬಿ ವೀರಪ್ಪರ ಏಕಸದಸ್ಯ ಪೀಠ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಂಗ ಪ್ರಕ್ರಿಯೆಯ ದುರ್ಬಳಕೆ ಅಂತ ಮಾಜ್ ತಂದೆ ಮುನೀರ್ ಅಹ್ಮದ್ಗೆ 10 ಸಾವಿರ ದಂಡ ವಿಧಿಸಿದೆ.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post