ಟಾಪ್ ಮೋಸ್ಟ್ ನಟರಲ್ಲಿ ಕಿರುತೆರೆಯಲ್ಲಿ ಈಗ ನಂಬರ್ 1 ಸ್ಥಾನದಲ್ಲಿ ಇರೋದು ಕನ್ನಡತಿ ಧಾರಾವಾಹಿಯ ನಾಯಕ ನಟ ಕಿರಣ್ ರಾಜ್. ಕರ್ನಾಟಕದಲ್ಲಿ ಕಿರಣ್ ರಾಜ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಕಿರಣ್ ರಾಜ್ ಅವರ ಅಭಿಮಾನಿಗಳು ಎಲ್ಲಾ ಅಭಿಮಾನಿಗಳಿಗಿಂತಲೂ ಒಂದು ಹೆಜ್ಜೆ ಮುಂದಿದ್ದಾರೆ.
ಕಿರಣ್ ರಾಜ್ ಅಭಿಮಾನಿ ಒಬ್ಬರು ತಮ್ಮ ನೆಚ್ಚಿನ ನಟನಿಗೊಸ್ಕರ ನಕ್ಷತ್ರಾ ಒಂದನ್ನು ಖರೀದಿ ಮಾಡಿದ್ದಾರೆ. ಇದು ನಿಜಕ್ಕೂ ಅಚ್ಚರಿ ಪಡುವಂತಹ ಸುದ್ದಿ. ಕಿರಣ್ ರಾಜ್ ಫ್ಯಾನ್ ಒಬ್ಬರು (constellation Coma Berenices) ಕೋಮಾ ಬೆರೆನಿಸಸ್ ನಕ್ಷತ್ರಪುಂಜ ಎಂಬ ನಕ್ಷತ್ರ ಒಂದನ್ನು ಕಿರಣ್ ರಾಜ್ ಅವರಿಗೆ ಸರ್ಪ್ರೈಸ್ ಗಿಫ್ಟ್ ಮಾಡಿದ್ದಾರೆ.
ಈ ನಕ್ಷತ್ರಾದ ನಿಖರವಾದ ಅರ್ಥ ಇದೊಂದು ಬ್ರೈಟೆಸ್ಟ್ ಸ್ಟಾರ್. ಕಿರಣ್ ರಾಜ್ ಅವರ ಲೈಫ್ ಈ ನಕ್ಷತ್ರದಂತೆ ಹೊಳಿತಿರಲಿ ಎಂದು ಅವರ ಜೀವನ ನಕ್ಷತ್ರದಂತೆ ಬೆಳಗಲಿ. ಲೈಫ್ ಕಲರ್ ಫುಲ್ ಆಗಿರಲಿ ಅನ್ನುವುದು ಈ ನಕ್ಷತ್ರ ಕೊಡುವ ಉದ್ದೇಶವಾಗಿದೆ. ಇದೊಂದು ನಿಜಕ್ಕೂ ಆಕಾಶದೆತ್ತರ ಇರುವಷ್ಟು ಪ್ರೀತಿ ಅಂದ್ರೆ ತಪ್ಪಾಗಲ್ಲ. ಒಬ್ಬ ಅಭಿಮಾನಿ ತನ್ನ ನೆಚ್ಚಿನ ನಟನಿಗೆ ಏನೆಲ್ಲಾ ಮಾಡೋದಕ್ಕೆ ಆಗುತ್ತದೆಯೋ ಅದಕ್ಕೆಲ್ಲ ಮಿಗಿಲಾದ ಒಂದು ಹೆಜ್ಜೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post