ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಒಡಿಯನ್ ಸ್ಮಿತ್ ಒಂದೇ ಓವರ್ನಲ್ಲಿ 5 ಸಿಕ್ಸ್ ಸಿಡಿಸಿದ್ದಾರೆ.
ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಆಟಗಾರನಾಗಿರೋ ಸ್ಮಿತ್, ಜಮೈಕಾ ತಲ್ಲವಾಸ್ ವಿರುದ್ಧದ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ರು.
ಪ್ರಿಟೋರಿಯಸ್ ಎಸೆದ 18ನೇ ಓವರ್ನಲ್ಲಿ ಸ್ಮಿತ್ 5 ಸಿಕ್ಸರ್ಗಳನ್ನ ಚಚ್ಚಿದ್ರು. 8ನೇ ಕ್ರಮಾಂಕದಲ್ಲಿ ಕ್ರೀಸ್ಗಿಳಿದ ಸ್ಮಿತ್, ಕೇವಲ 16 ಎಸೆತಗಳಲ್ಲಿ 6 ಸಿಕ್ಸ್ ಸಹಿತ 42 ರನ್ ಸಿಡಿಸಿದ್ರು.
5 SIXES IN THE OVER! Watch the 5th six make its way into the stands as this evening’s @fun88eng Magic Moment!#CPL22 #CricketPlayedLouder #BiggestPartyInSport #GAWvJT #Fun88 pic.twitter.com/t2u7mcoyd1
— CPL T20 (@CPL) September 22, 2022
ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾದ ಯಂಗ್ ಬ್ಯಾಟ್ಸ್ಮನ್, ಬೇಬಿ ಎಬಿಡಿ, ಡಿವಾಲ್ಡ್ ಬ್ರೆವಿಸ್ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಅಬ್ಬರಿಸಿದ್ರು. ಸೇಂಟ್ ಕಿಟ್ಸ್ ಮತ್ತು ನೆವಿಸ್ ಪ್ಯಾಟ್ರಿಯಟ್ಸ್ ತಂಡದ ಆಟಗಾರನಾಗಿರೋ ಬ್ರೆವಿಸ್, ಟ್ರಿನಿಬಾಗೊ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ಎಸೆತಗಳಲ್ಲಿ 5 ಸಿಕ್ಸರ್ ಮೂಲಕ 30 ರನ್ ಸಿಡಿಸಿದ್ದಾರೆ. ಎದುರಿಸಿದ ಮೊದಲ ಬಾಲ್ ಯಾವುದೇ ರನ್ಗಳಿಸಿದ ಬ್ರೆವಿಸ್, ನಂತರದ 5 ಎಸೆತಗಳಲ್ಲಿ ಐದು ಸಿಕ್ಸರ್ ಬಾರಿಸಿದ್ರು.
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post