ಇಂದು ಹೈದರಾಬಾದ್ನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಕೊನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಗೆದ್ದು ಬೀಗಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಆಸಿಸ್ ಪರ ಓಪನರ್ ಆಗಿ ಬಂದ ಕ್ಯಾಮೇರಾನ್ ಗ್ರೀನ್ 21 ಬಾಲ್ನಲ್ಲಿ 3 ಸಿಕ್ಸರ್, 7 ಫೋರ್ ಸಮೇತ 52 ರನ್ ಚಚ್ಚಿದ್ರು. ಕೊನೇವರೆಗೂ ಕ್ರೀಸ್ನಲ್ಲಿ ಇದ್ದ ಟೀಂ ಡೇವಿಡ್ 27 ಬಾಲ್ನಲ್ಲಿ 4 ಸಿಕ್ಸರ್, 2 ಫೋರ್ ಸಮೇತ 54 ರನ್ ಬಾರಿಸಿದ್ರು. ಈ ಮೂಲಕ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ಟೀಂ ಇಂಡಿಯಾಗೆ ಆಸಿಸ್ 187 ರನ್ ಬಿಗ್ ಟಾರ್ಗೆಟ್ ಕೊಟ್ಟಿತ್ತು.
ಆಸಿಸ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಪರ ಮಿಸ್ಟರ್ 360 ಡಿಗ್ರೀ ಸೂರ್ಯಕುಮಾರ್ ಯಾದವ್ ಅತ್ಯದ್ಭುತ ಬ್ಯಾಟಿಂಗ್ ಮಾಡಿದ್ರು. ಆಸ್ಟ್ರೇಲಿಯಾ ಬೌಲರ್ಸ್ ಬೆಂಡೆತ್ತಿದ್ರು.
ಕೇವಲ 36 ಬಾಲ್ನಲ್ಲಿ 5 ಬಿಗ್ ಸಿಕ್ಸರ್, 5 ಫೋರ್ ಸಮೇತ ಬರೋಬ್ಬರಿ 69 ರನ್ ಸಿಡಿಸಿದ್ರು ಸೂರ್ಯ. 192 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿ ಸಖತ್ ಎಂಟರ್ಟೈನ್ ಮಾಡಿದ್ರು.
ಕೊನೇವರೆಗೂ ಕ್ರೀಸ್ನಲ್ಲಿ ನಿಂತು ಆಡಿದ ಕೊಹ್ಲಿ, 4 ಸಿಕ್ಸರ್, 3 ಫೋರ್ ಸಮೇತ 63 ರನ್ ಸಿಡಿಸಿದ್ರು. ಹಾರ್ದಿಕ್ ಪಾಂಡ್ಯ 1 ಸಿಕ್ಸರ್, 2 ಫೋರ್ ಸಮೇತ 25 ರನ್ ಸಿಡಿಸಿ ಗೆಲುವು ತಂದುಕೊಟ್ಟರು. ಟೀಂ ಇಂಡಿಯಾ 19.5 ಓವರ್ಗೆ 4 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿ ಸೀರೀಸ್ ಗೆದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post