ರಾಜಸ್ಥಾನದ ಟೈಲರ್ ಕನ್ಹಯ್ಯಲಾಲ್ ಶಿರಚ್ಛೇದ ಪ್ರಕರಣ ಯಾರಿಗೆ ತಾನೇ ಗೊತ್ತಿಲ್ಲ. ಇಬ್ಬರು ಹಂತಕರು ಮಾಡಿದ ಪಾಪಿ ಕೆಲಸಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು. ಸದ್ಯ ಜೈಲು ಸೇರಿರೋ ರಿಯಾಸ್ ಮತ್ತು ಗೌಸ್ , ಎನ್ಐಎ ಬಳಿ ಕಣ್ಣೀರು ಹಾಕ್ತಿದ್ದಾರಂತೆ. ತಮ್ಮ ಕುಟುಂಬದವರನ್ನ ನೋಡಿಕೊಳ್ಳೋರು ಯಾರು ಇಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ರಾಜಸ್ಥಾನದ ಉದಯ್ಪುರ ಕನ್ಹಯ್ಯಾ ಲಾಲ್ ಶಿರಚ್ಛೇದ ಪ್ರಕರಣ, ಇಡೀ ದೇಶವನ್ನೆ ಬೆಚ್ಚಿ ಬೀಳಿಸಿತ್ತು. ನೂಪುರ್ ಶರ್ಮಾ ಬೆಂಬಲಿಸಿದ್ದ ಅನ್ನೋ ಒಂದೇ ಒಂದು ಕಾರಣಕ್ಕೆ ಪಾಪಿಗಳು ಕನ್ಹಯ್ಯಾ ತಲೆಯನ್ನೆ ತೆಗೆದುಬಿಟ್ಟಿದ್ರು. ಅವರಿಗೆ ಒಂದು ಕುಟುಂಬ ಇದೆ ಅನ್ನೋದನ್ನೂ ಮರೆತು ಕನ್ಹಯ್ಯಾ ಶಿರಚ್ಛೇದ ಮಾಡಲಾಗಿತ್ತು. ಇದು ಇಡೀ ದೇಶಾದ್ಯಂತ ಸಿಕ್ಕಾಪಟ್ಟೆ ವಿರೋಧ ಕೂಡ ಆಗಿತ್ತು. ಸದ್ಯ ಕನ್ಹಯ್ಯಾ ಲಾಲ್ ಹಂತಕರು ಜೈಲುಪಾಲಾಗಿದ್ದಾರೆ. ಆದ್ರೆ ಅವರು ಮಾಡಿದ ಪಾಪದ ಕೆಲಸಕ್ಕೆ ಇಡೀ ಕುಟುಂಬ ಈಗ ಬೀದಿಗೆ ಬಂದಿದೆ.
ಹಂತಕರು ಮಾಡಿದ ಪಾಪದ ಕೆಲಸಕ್ಕೆ ಬೀದಿಗೆ ಬಂದ ಕುಟುಂಬ!
ತಮ್ಮವರನ್ನ ನೋಡಿಕೊಳ್ಳುವವರು ಯಾರಿಲ್ಲವೆಂದು ಕಣ್ಣೀರು!
ಕನ್ಹಯ್ಯಲಾಲ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರೋ ಮೊಹ್ಮದ್ ರಿಯಾಜ್ ಮತ್ತು ಗೌಸ್ ಮೊಹ್ಮದ್ ಈಗ ಅಜ್ಮೀರ್ ಜೈಲಿನಲ್ಲಿದ್ದಾರೆ. ಅಮಾಯಕನ ಶಿರಚ್ಛೇದ ಮಾಡಿದ ಕೆಲಸಕ್ಕೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದರೆ ಇವರನ್ನ ನಂಬಿಕೊಂಡಿದ್ದ ಕುಟುಂಬ ಈಗ ಬೀದಿಗೆ ಬಂದಿದೆ. ಆರ್ಥಿಕವಾಗಿ ಜರ್ಜರಿತಗೊಂಡು ಸಂಕಷ್ಟ ಪಡುತ್ತಿದೆ. ಎನ್ಐಎ ಮುಂದೆ ಮೊಹ್ಮದ್ ರಿಯಾಜ್ ಮತ್ತು ಗೌಸ್ ಮೊಹ್ಮದ್ ಕಣ್ಣೀರು ಹಾಕಿದ್ದಾರೆ. ನಾವು ಇಂಥಾ ಹತ್ಯೆ ಮಾಡಿ ಜೈಲು ಸೇರಿದ್ರೂ ತಮ್ಮವರು ತಮ್ಮ ಕುಟುಂಬವನ್ನ ನೋಡಿಕೊಳ್ತಾರೆ ಅನ್ನೋ ಭಂಡ ಧೈರ್ಯ ಆರೋಪಗಳದ್ದಾಗಿತ್ತು. ಇದೇ ಧೈರ್ಯದ ಮೇಲೆ ತಾವು ಹತ್ಯೆಗೆ ಮುಂದಾಗಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಹೇಳಿಕೊಂಡಿದ್ದಾರೆ.
ತಮ್ಮ ಕುಟುಂಬವನ್ನ ಯಾರು ಕೂಡ ನೋಡಿಕೊಳ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ. ಉದಯ್ಪುರದ ಮನೆಯಲ್ಲಿ ಗೌಸ್ ಕುಟುಂಬ ವಾಸವಾಗಿದೆ. ಖಾಂಜಿಪೀರ್ ರಾಝಾ ಏರಿಯಾದಲ್ಲಿ ಗೌಸ್ ನಿವಾಸ ಇದ್ದು, ಹೆಂಡತಿ ಮತ್ತು ಇಬ್ಬರು ಮಕ್ಕಳು ಜೀವನ ನಡೆಸ್ತಿದ್ದಾರೆ. ಆದ್ರೆ ಕಿರಾಣಿ ಅಂಗಡಿ ಇಟ್ಕೊಂಡು ಜೀವನ ನಡೆಸ್ತಿದ್ದ ಗೌಸ್ ಈಗ ಜೈಲು ಸೇರಿದ್ರಿಂದ ಹೆಂಡತಿ ಮಕ್ಕಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಮತ್ತೊಂದ್ಕಡೆ ಇದೇ ಏರಿಯಾದಲ್ಲಿದ್ದ ಮೊಹ್ಮದ್ ರಿಯಾಜ್ ಮನೆವರೆಗೂ ಕೂಡ ಆರ್ಥಿಕವಾಗಿ ಜರ್ಜರಿತಗೊಂಡಿದ್ದಾರೆ
ದ್ವೇಷದ ಕಾರಣಕ್ಕೆ ಹಿಂದೆ ಮುಂದೆ ನೋಡದೇ, ಕುಟುಂಬಸ್ಥನಾಗಿದ್ದ ಕನ್ಹಯ್ಯಲಾಲ್ ಹತ್ಯೆ ಮಾಡಿದ್ರು. ಆದ್ರೀಗ ತಮ್ಮದೇ ಕುಟುಂಬ ಆರ್ಥಿಕ ಸಮಸ್ಯೆ ಅನುಭವಿಸ್ತಿರೋದಕ್ಕೆ ಹಂತಕರು ಕಣ್ಣೀರು ಹಾಕ್ತಿದ್ದಾರೆ. ಹತ್ಯೆಯಾದಾಗ ತಮ್ಮ ಕುಟುಂಬವನ್ನ ಸಂಬಂಧಿಕರು ನೋಡಿಕೊಳ್ತಾರೆ ಎಂದು ಅಂದುಕೊಂಡಿದ್ರು. ಆದ್ರೆ ಇಬ್ಬರು ಜೈಲು ಸೇರಿದ ಬಳಿಕ, ತಮ್ಮವರನ್ನ ಯಾರೂ ಕೂಡ ನೋಡಿಕೊಳ್ತಿಲ್ಲ. ಸಂಬಂಧಿಕರು ಹತ್ತಿರ ಬರ್ತಿಲ್ಲ. ಊಟ, ಬಟ್ಟೆಗೆ ತಮ್ಮ ಕುಟುಂಬ ಸಮಸ್ಯೆ ಪಡ್ತಿದೆ ಅಂತ ಅಳಲು ತೋಡಿಕೊಂಡಿದ್ದಾರೆ. ಒಟ್ಟಾರೆ, ಪಾಪದ ಕೆಲಸ ಮಾಡಿ ಈಗ ಮರಗುರುತ್ತಿರೋ ಹಂತಕರಿಗೆ ಕುಟುಂಬದ ಚಿಂತೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post