ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ರಿಯಲ್ ಸೂಪರ್ ಸ್ಟಾರ್ ಉಪೇಂದ್ರ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಹ್ಯಾಟ್ರಿಕ್ ಹೀರೋ ಸೆಂಚುರಿ ಸ್ಟಾರ್ ಡಾ.ಶಿವರಾಜ್ ಕುಮಾರ್ ಮತ್ತು ರಿಯಲ್ ಸೂಪರ್ ಸ್ಟಾರ್ ಬುದ್ಧಿವಂತ ನಿರ್ದೇಶಕ ಉಪೇಂದ್ರ.
ಈ ಜೊತೆಗಾರುರು ಸ್ಯಾಂಡಲ್ವುಡ್ನಲ್ಲಿ ಅಳಿಸಲಾಗದ ರೆಕಾರ್ಡ್ ಬರೆದವರು. ಓಂ ಅನ್ನೊ ಸಿನಿಮಾದ ಮೂಲಕ ದಾಖಲೆಯ ಕೋಟೆಯನ್ನೇ ಕಟ್ಟಿದವರು. ಓಂ.. ಪ್ರೀತ್ಸೆ , ಲವ ಕುಶ ಹಿಂಗೆ ಮೂರು ಸಿನಿಮಾಗಳಲ್ಲಿ ಈಗಾಗಲೇ ಒಟ್ಟಿಗೆ ಕೆಲಸ ಮಾಡಿದ್ದಾರೆ ಶಿವಣ್ಣ ಮತ್ತು ಉಪ್ಪಿ.
ಬಹುನಿರೀಕ್ಷಿತ ಕನ್ನಡ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದಲ್ಲೂ ಉಪ್ಪಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ ಶಿವಣ್ಣ ಅಂತಲೂ ಗಾಂಧಿನಗರ ಗುಸು ಗುಸು ಅಂತ ಮಾತನಾಡುತ್ತೆ. ಈ ಕಬ್ಜ ಸಿನಿಮಾದ ಗುಸು ಗುಸು ಪಿಸು ಪಿಸು ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಸಿನಿಮಾದಲ್ಲಿ ಶಿವಣ್ಣ ಮತ್ತು ಉಪ್ಪಿ ಒಟ್ಟಿಗೆ ಕಾಣಿಸಿಕೊಳ್ತಾರೆ ಅನ್ನೋ ಸಮಾಚಾರ ಸೋರಿಕೆ ಆಗಿದೆ.
ಮಗದೊಮ್ಮೆ ಶಿವಣ್ಣನ ಚಿತ್ರದಲ್ಲಿ ಉಪೇಂದ್ರ!?
ಕಬ್ಜ ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿರೋದು ಇನ್ನೂ ಅಧಿಕೃತವಾಗಿ ಸಿನಿಮಾ ತಂಡ ಹೇಳಿಲ್ಲ. ಆದ್ರೆ ಮತ್ತೊಂದು ಸಿನಿಮಾದಲ್ಲಿ ಅದರಲ್ಲೂ ಶಿವಣ್ಣ ಹೀರೋ ಆಗಿ ನಟಿಸಲಿರುವ ಸಿನಿಮಾದಲ್ಲಿ ಉಪೇಂದ್ರ ನಟಿಸಲಿದ್ದಾರಂತೆ. ಅದಕ್ಕೆ ಉತ್ತರ ‘‘45’’ ಚಿತ್ರ.
‘‘45’’ ಇದು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಫಸ್ಟ್ ಟೈಮ್ ಡೈರೆಕ್ಷನ್ ಮಾಡಲು ಮುಂದಾಗಿರೋ ಸಿನಿಮಾ. ಡಿಕೆಡಿ ರಿಯಾಲಿಟಿ ಡ್ಯಾನ್ ಶೋ ಸೆಟ್ನಲ್ಲಿ ಅರ್ಜುನ್ ಜನ್ಯ ಅವರ ಒನ್ ಲೈನ್ ಕಥೆ ಮೆಚ್ಚಿನ ಒಲಿದು ಬಿಟ್ಟರು ಶಿವಣ್ಣ. ಈ ಚಿತ್ರಕ್ಕೆ ಗಾಳಿಪಟ 2 ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಬಂಡವಾಳ ಹುಡುತ್ತಿದ್ದಾರೆ.
45 ಸಿನಿಮಾದಲ್ಲಿ ಶಿವಣ್ಣನ ಜೊತೆ ಉಪ್ಪಿ ಅವರು ನಟಿಸಲಿದ್ದಾರೆ ಮಾತುಗಳು ಕೇಳಿ ಬರುತ್ತಿವೆ. ಶಿವಣ್ಣ ಮತ್ತು ಉಪ್ಪಿ ಒಟ್ಟಿಗೆ ಕಾಣಿಸಿಕೊಂಡರೆ ಖಂಡಿತ ಏನಾದ್ರು ಒಂದು ಮ್ಯಾಜಿಕ್ ಆಗೇ ಆಗುತ್ತೆ. ಕಾರಣ ಇಬ್ಬರ ನಡುವೆ ಇರುವ ಗೆಳೆತನ. ಒಬ್ಬರನೊಬ್ಬರು ಯಾವತ್ತಿಗೂ ಬಿಟ್ಟುಕೊಟ್ಟವರಲ್ಲ. 45 ಸಿನಿಮಾದ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಗಳು ಸಿಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post