ಪೇಸಿಎಂ ಮೂಲಕ ಸರ್ಕಾರಕ್ಕೆ ಚಾಟಿ ಬೀಸುತ್ತಿರೋ ಕಾಂಗ್ರೆಸ್ ಬಗ್ಗೆ ಸಿಎಂ ಬೊಮ್ಮಾಯಿ ಆಡಿದ ಅದೊಂದು ಮಾತು, ಕೈರಣಕಲಿಗಳನ್ನ ಕೆರಳಿಸಿಬಿಟ್ಟಿದೆ. ಸಿದ್ದರಾಮಯ್ಯ ಮತ್ತು ಡಿಕೆಎಸ್ ಜೊತೆ ಸೇರಿಯೇ ಸಿಎಂ ವಿರುದ್ಧ ಸಮರ ಸಾರಿಸಿದ್ದಾರೆ. ವಿರೋಧ ಪಕ್ಷದ ನಾಯಕರು ಬಿಟ್ಟ ಒಂದೊಂದು ಮಾತಿನ ಬಾಣ ಕೂಡ ನೇರವಾಗಿ ಬಿಜೆಪಿಗೆ ಚುಚ್ಚಿದಂತಿದೆ..
ರಾಜ್ಯ ರಾಜಕಾರಣದಲ್ಲಿ ‘ಡರ್ಟಿ ಪಾಲಿಟಿಕ್ಸ್’ ಸದ್ದು!
ಸಿಎಂ ಬಸವರಾಜ್ ಬೊಮ್ಮಾಯಿ ಕೊಟ್ಟ ಡರ್ಟಿ ಪಾಲಿಟಿಕ್ಸ್ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ವಾಗ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ. ಪೇ ಸಿಎಂ ಸಮರದಿಂದ ಶುರುವಾದ ಈ ಮಾತಿನ ಮಲ್ಲಯುದ್ಧ, ಡರ್ಟಿ ಪಾಲಿಟಿಕ್ಸ್ವರೆಗೂ ಬಂದು ನಿಂತಿದೆ. ಇದೇ ಕದನವೀಗ ಉಗ್ರ ರೂಪ ತಾಳಿ, ಏಟು, ಎದಿರೇಟಿಗೆ ಕಾರಣವಾಗಿದೆ..
ಸಿಎಂ ಬೊಮ್ಮಾಯಿ ವಿರುದ್ಧ ಸಿಡಿದೆದ್ದ ಕೈ ರಣಕಲಿಗಳು!
ಪೇಸಿಎಂ ಅಭಿಯಾನ ಮಾಡ್ತಿರೋ ಕಾಂಗ್ರೆಸ್ಗೆ ಡರ್ಟಿ ಪಾಲಿಟಿಕ್ಸ್ ಎಂದು ಸಿಎಂ ಬೊಮ್ಮಾಯಿ ಹರಿಹಾಯ್ದಿದ್ರು. ಇದಕ್ಕೆ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಖಡಕ್ ಆಗಿಯೇ ತಿರುಗೇಟು ಕೊಟ್ಟಿದ್ದಾರೆ. ಸಂಘ ಪರಿವಾರದವರದ್ದು ಡರ್ಟಿ ಪಾಲಿಟಿಕ್ಸ್. ನಾವು ಕೀಳು ಮಟ್ಟದ ರಾಜಕಾರಣ ಮಾಡಿಲ್ಲ ಎಂದು ಠಕ್ಕರ್ ನೀಡಿದ್ದಾರೆ..
ಸಿದ್ದರಾಮಯ್ಯ ಮಾತ್ರವಲ್ಲ, ಕೆಪಿಸಿಸಿ ಸಾರಥಿ ಡಿ.ಕೆ.ಶಿವಕುಮಾರ್ ಕೂಡ ಸಿಎಂ ಬೊಮ್ಮಾಯಿಗೆ ಬಿಸಿ ಮುಟ್ಟಿಸಿದ್ದಾರೆ.. ಜಾತಿ ಆಧಾರದ ಮೇಲೆ ಸಿಎಂ ಆಗಿದ್ರಾ ಅಂತ ಪ್ರಶ್ನೆ ಎಸೆದಿದ್ದಾರೆ..
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಪ್ಪು ಬಾವುಟ ಪ್ರದರ್ಶನ!
ಅತ್ತ ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ 40 ಪರ್ಸೆಂಟೇಜ್ ಆರೋಪ ಬೆನ್ನಿಗೆ ಬಿದ್ದಿದೆ. ಬಾಗಲಕೋಟೆಗೆ ಹೋಗಿದ್ದ ನಳಿನ್ ಕುಮಾರ್ ಕಟೀಲ್ಗೆ ಕಪ್ಪು ಬಾವುಟ ಪ್ರದರ್ಶಿಸಲು ಕೈ ಕಾರ್ಯಕರ್ತರು ಯತ್ನಿಸಿದ್ರು. ಆದ್ರೆ ಪೊಲೀಸರ ಮಧ್ಯಪ್ರವೇಶದಿಂದ ಮುತ್ತಿಗೆಗೆ ಬ್ರೇಕ್ ಬಿದ್ದಿದೆ. ಘೇರಾವ್ ಹಾಕುವ ಮೊದಲೇ ಕಾರ್ಯಕರ್ತರನ್ನ ವಶಕ್ಕೆ ಪಡೆಯಲಾಗಿತ್ತು..
ಒಟ್ಟಾರೆ, ಭ್ರಷ್ಟಾಚಾರ, 40% ಆರೋಪ ಸರ್ಕಾರವನ್ನ ಇನ್ನಿಲ್ಲದಂತೆ ಸತಾಯಿಸ್ತಿದೆ. ಇದೇ ಬಂಡವಾಳ ಮಾಡಿಕೊಂಡ ಕೈ ಕಲಿಗಳು, ಸಚಿವರು, ಶಾಸಕರು ಹೋದಲ್ಲಿ, ಬಂದಲ್ಲಿ ಪೇ ಸಿಎಂ ಅಭಿಯಾನದ ಮೂಲಕ ಗುಮ್ಮುತ್ತಿದ್ದಾರೆ. ಇದೇ ಸಮರ ಈಗ ವಾಗ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post