ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿ ದೊಡ್ಡ ಹಿಟ್ ಬಳಿಕ ನರ್ತನ್ ಜೊತೆ ಸಿನಿಮಾ ಮಾಡೋಕೆ ಯಶ್ ಡಿಸೈಡ್ ಮಾಡಿದ್ರು. ಚಾಪ್ಟರ್ 2 ರಿಲೀಸ್ ಆಗಲಿ ಅಷ್ಟೊತ್ತಿಗೆ ಸ್ಕ್ರಿಪ್ಟ್ ರೆಡಿ ಮಾಡ್ಕೋ ಅಂತ ಮಾತು ಕೊಟ್ಟು ಕಥೆಗಾಗಿ ಕೆಲಸ ಮಾಡಿದ್ರು. ಕೆಜಿಎಫ್ ಆದ್ಮೇಲೆ ಯಶ್ ಇಮೇಜ್ಗೆ ತಕ್ಕಂತೆ ಸಿನಿಮಾ ಮಾಡ್ಬೇಕು ಅನ್ನೋ ಹಠಕ್ಕೆ ಬಿದ್ದ ನರ್ತನ್ ಕೂಡ ಮೂರ್ನಾಲ್ಕು ವರ್ಷ ಬರಿ ಸ್ಕ್ರಿಪ್ಟ್ಗೋಸ್ಕರನೇ ಕೂತುಬಿಟ್ರು. ಮಫ್ತಿ ಆದ್ಮೇಲೆ ಬೇರೆ ಯಾವುದೇ ಹೊಸ ಚಿತ್ರ ಮಾಡೇ ಇಲ್ಲ ನರ್ತನ್. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಇಷ್ಟೊತ್ತಿಗೆ ಯಶ್ ಮತ್ತು ನರ್ತನ್ ಸಿನಿಮಾ ಅಫಿಶಿಯಲ್ ಆಗಿ ಸೆಟ್ಟೇರಬೇಕಿತ್ತು. ಆದರೆ ಅಭಿಮಾನಿಗಳು ನಿರೀಕ್ಷೆ ಮಾಡಿದ್ದೇ ಒಂದು, ಈ ಕಾಂಬಿನೇಷನ್ ವಿಷ್ಯದಲ್ಲಿ ಆಗಿದ್ದೇ ಇನ್ನೊಂದು.
ಯಶ್ ಮತ್ತು ನರ್ತನ್ ಸಿನಿಮಾ ಅನೌನ್ಸ್ ಆಗುತ್ತೆ, ಕೆಜಿಎಫ್ ಮೀರಿಸೋ ಲೆವಲ್ಗೆ ಈ ಚಿತ್ರ ಮೂಡಿಬರುತ್ತೆ, ಅದೂ ಇದು ಅಂತ ಕನಸು ಕಟ್ಕೊಂಡು ಕಾಯುತ್ತಿದ್ದ ರಾಕಿ ಫ್ಯಾನ್ಸ್ಗೆ ಎದುರಾಗಿದ್ದು ನಿರಾಸೆ ಮಾತ್ರ. ವರ್ಷಗಳ ಕಾಲ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ರು ಆ ಸ್ಕ್ರಿಪ್ಟ್ ಯಶ್ಗೆ ಇಷ್ಟವಾಗಲೇ ಇಲ್ಲ. ಎಷ್ಟೇ ಬದಲಾವಣೆ ಮಾಡಿದ್ರು ರಾಕಿ ಮನಸ್ಸು ಮಾಡಲೇ ಇಲ್ಲ. ಫೈನಲಿ ನರ್ತನ್ ಈ ಪ್ರಾಜೆಕ್ಟ್ನಿಂದ ಹೊರಗೆ ಬರೋಕೆ ಡಿಸೈಡ್ ಮಾಡಿದ್ರು. ಸದ್ಯಕ್ಕೆ ರಾಜಾಹುಲಿ ಜೊತೆ ನರ್ತನ್ ಸಿನಿಮಾ ಮಾಡ್ತಿಲ್ಲ, ಇಷ್ಟು ವರ್ಷ ತಲೆಕೆಡಿಸಿಕೊಂಡು ಬರೆದ ಸ್ಕ್ರಿಪ್ಟ್ ತಗೊಂಡು ಹೊರಬಂದಿದ್ದಾರೆ ಅಂತ ತಿಳಿದು ಬಂದಿದೆ.
ಬೇರೆಯವರ ಪಾಲಾಗುತ್ತಾ ಯಶ್ಗಾಗಿ ಮಾಡಿದ್ದ ಕಥೆ?
ನರ್ತನ್ ಸ್ಕ್ರಿಪ್ಟ್ಗೆ ಹೀರೋ ಆಗ್ತಾರಾ ಬಾಲಿವುಡ್ ನಟ?
ಯಶ್ ಪ್ರಾಜೆಕ್ಟ್ನಿಂದ ಹೊರಬಂದ ನರ್ತನ್ ಮುಂದಿನ ಹೆಜ್ಜೆ ಏನಿರಬಹುದು ಅಂತ ಇಂಡಸ್ಟ್ರಿ ಮಂದಿ ಯೋಚಿಸ್ತಿದ್ರು. ಯಶ್ಗೆ ಮಾಡಿದ್ದ ಸ್ಕ್ರಿಪ್ಟ್ನ ಬೇರೆ ನಟನೊಂದಿಗೆ ಸಿನಿಮಾ ಮಾಡ್ತಾರಾ ಅಥವಾ ಈ ಸ್ಕ್ರಿಪ್ಟ್ ಸೈಡಿಗಿಟ್ಟು ಬೇರೆ ಚಿತ್ರದ ಕೆಲಸ ಶುರು ಮಾಡ್ತಾರಾ ಅಂತ ಕನ್ಪ್ಯೂಶನ್ ಕಾಡ್ತಿತ್ತು. ಈ ಕನ್ಫ್ಯೂಶನ್ಗೆ ಈಗ ಉತ್ತರ ಸಿಕ್ಕಿದ್ದು, ಬೇರೆ ನಟನೊಂದಿಗೆ ಈ ಸ್ಕ್ರಿಪ್ಟ್ ಮಾಡೋಕೆ ಮುಂದಾಗಿದ್ದಾರಂತೆ ನರ್ತನ್. ಯಶ್ ಇಮೇಜ್ಗೆ ತಕ್ಕಂತೆ ಪ್ಯಾನ್ ಇಂಡಿಯಾ ಆಡಿಯೆನ್ಸ್ ಒಪ್ಪುವ ಮತ್ತು ಸ್ವೀಕರಿಸೋ ಥರಾ ಸ್ಕ್ರಿಪ್ಟ್ ರೆಡಿ ಮಾಡಿಕೊಂಡಿದ್ದ ನರ್ತನ್ ಈಗ ಪ್ಯಾನ್ ಇಂಡಿಯಾಗೆ ಒಗ್ಗುವ ಸ್ಟಾರ್ ನಟನೊಂದಿಗೆ ಈ ಪ್ರಾಜೆಕ್ಟ್ ಶುರು ಮಾಡೋಕೆ ನಿರ್ಧರಿಸಿದ್ದಾರಂತೆ. ಈ ಸಂಬಂಧ ಪ್ರಾಥಮಿಕ ಹಂತದ ಮಾತುಕತೆ ಆಗಿದ್ದು, ಶೀಘ್ರದಲ್ಲೇ ಸಿನಿಮಾ ಆರಂಭಿಸೋ ಸಾಧ್ಯತೆ ಇದೆಯಂತೆ.
ಅದೇ ಡೈರೆಕ್ಟರ್, ಅದೇ ಪ್ರೊಡ್ಯುಸರ್, ಹೀರೋ ಚೇಂಜ್!
ಯಶ್-ನರ್ತನ್ ಕಾಂಬಿನೇಷನ್ನಲ್ಲಿ ಬರಲಿದೆ ಎನ್ನಲಾಗಿದ್ದ ಚಿತ್ರವನ್ನ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಬೇಕಿತ್ತು. ಅದ್ಯಾವಾಗ ನರ್ತನ್ ಈ ಪ್ರಾಜೆಕ್ಟ್ನಿಂದ ಹೊರಬಂದ ಆ ಮೇಲೆ ಕೆವಿಎನ್ ಕೂಡ ಈ ಪ್ರಾಜೆಕ್ಟ್ ವಿಷ್ಯದಲ್ಲಿ ಮೌನಕ್ಕೆ ಶರಣಾಗಿದ್ರು. ಇದೀಗ, ಬೇರೆ ನಟನೊಂದಿಗೆ ನರ್ತನ್ ಈ ಸಿನಿಮಾ ಮಾಡೋಕೆ ಮುಂದಾಗಿದ್ದು, ಕೆವಿಎನ್ ಸಂಸ್ಥೆಯೇ ಬಂಡವಾಳ ಹಾಕೋಕೆ ತೀರ್ಮಾನಿಸಿದೆ. ಈ ಮೂಲಕ ಡೈರೆಕ್ಟರ್, ಪ್ರೊಡ್ಯೂಸರ್ ಕಾಂಬಿನೇಷನ್ ಮುಂದುವರಿದಿದ್ದು, ಹೀರೋ ಮಾತ್ರ ಬದಲಾಗಿದ್ದಾರಂತೆ. ನರ್ತನ್ ಚಿತ್ರಕ್ಕೆ ಹೀರೋ ಆಗಲಿರೋದು ಯಾರು ಅನ್ನೋದು ಸದ್ಯಕ್ಕೆ ಸೀಕ್ರೆಟ್. ಒಂದು ಮೂಲದ ಪ್ರಕಾರ, ಬಾಲಿವುಡ್ ಸ್ಟಾರ್ ನಟ ಈ ಚಿತ್ರಕ್ಕೆ ಹೀರೋ ಆಗಲಿದ್ದಾರಂತೆ. ಬಾಲಿವುಡ್ ಖ್ಯಾತಿಯಿದ್ರು ಎಲ್ಲಾ ಭಾಷೆಗೂ ಈ ನಟ ಒಪ್ಪುತ್ತಾರಂತೆ. ಈ ಮೂಲಕ ಕೆವಿಎನ್-ನರ್ತನ್ ಜೋಡಿಯಲ್ಲಿ ಬರಲಿರೋದು ಬಾಲಿವುಡ್ ಸಿನಿಮಾ ಎನ್ನಲಾಗುತ್ತಿದೆ.
ರಾಕಿ ಮುಂದಿನ ಸಿನಿಮಾ ಯಾರ ಜೊತೆ?
ಯಶ್19 ಚಿತ್ರದ ಅಪ್ಡೇಟ್ ಯಾವಾಗ?
ನರ್ತನ್, ಕೆವಿಎನ್ ಹೊರಬಂದಿದ್ದೇ ಆದ್ರೆ ಯಶ್ ಮುಂದಿನ ಸಿನಿಮಾ ಯಾರ್ ಜೊತೆ ಮಾಡ್ತಾರೆ? ಯಶ್ 19ನೇ ಸಿನಿಮಾದ ಅಪ್ಡೇಟ್ ಏನು ಅನ್ನೋದು ಇಡೀ ಇಂಡಿಯಾನ ಕಾಡ್ತಿರೋ ಪ್ರಶ್ನೆ. ನರ್ತನ್ ಎಕ್ಸಿಟ್ನಿಂದ ಸ್ವಲ್ಪ ಗೊಂದಲದಲ್ಲಿರೋ ಯಶ್ ಹೊಸ ಸ್ಕ್ರಿಪ್ಟ್ ಅನ್ನ ಹುಡುಕಾಟದಲ್ಲಿದ್ದಾರೆ. ಇನ್ನು ಡೈರೆಕ್ಟರ್ ಫಿಕ್ಸ್ ಆಗಿಲ್ಲ ಎನ್ನಲಾಗಿದೆ. ಆದ್ರೆ, ಯಶ್ ಮುಂದಿನ ಸಿನಿಮಾವನ್ನ ಕೂಡ ಕೆವಿಎನ್ ಸಂಸ್ಥೆಯೇ ನಿರ್ಮಾಣ ಮಾಡಲಿದೆ ಎನ್ನುವುದು ಸದ್ಯದ ಸಮಾಚಾರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post