T20 ಕ್ರಿಕೆಟ್ನಲ್ಲಿ ಒಬ್ಬೊಬ್ರು ಒಂದೊಂದು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ನಾನೇ ಎಲ್ಲ ಅಂತ ಮೆರಿತಿದ್ದಾರೆ. ಆದ್ರೆ ಈತ ಮಾತ್ರ ರನ್, ಸಿಕ್ಸ್, ಸೆಂಚುರಿ, ಕ್ಯಾಪ್ಟನ್ಸಿ. ಹೀಗೆ ಎಲ್ಲಾ ದಾಖಲೆಗಳನ್ನೂ ಪುಡಿಪುಡಿ ಮಾಡಿದ್ದಾರೆ. ಆ ಮೂಲಕ ಟಿ-20 ಕ್ರಿಕೆಟ್ನ ಹೊಸ ಡಾನ್ ಆಗಿದ್ದಾರೆ.
T20 ಕ್ರಿಕೆಟ್ ಅಂದ್ರೆನೇ ಹೊಡಿಬಡಿ ಆಟ. ಇಲ್ಲೇನಿದ್ರೂ, ಘರ್ಜಿಸಿದವ್ರಿಗಷ್ಟೆ ಡಿಮ್ಯಾಂಡ್. ಹೀಗಾಗಿ ನಾನೇ ಕಿಂಗ್ ಆಗ್ಬೇಕು ಅಂತ ಫೈಟ್ ನಡೀತಿದೆ. ಸದ್ಯ T20 ಫಾರ್ಮೆಟ್ಗೆ, ಮೊಹಮ್ಮದ್ ರಿಜ್ವಾನ್ ನಂಬರ್.1 ಇರ್ಬೋದು. T20 ಕ್ರಿಕೆಟ್ಗೆ ರೋಹಿತ್ ಶರ್ಮಾ ಬಾಸ್. ಚುಟುಕು ಫಾರ್ಮೆಟ್ಗೆ ಹಿಟ್ಮ್ಯಾನೇ, ಹೊಸ ಡಾನ್.
ಮುಂಬೈಕರ್ಗೆ ಹಾಕೋರಿಲ್ಲ ಬ್ರೇಕ್
ಈ ರೆಕಾರ್ಡ್ ನಂದು, ಆ ರೆಕಾರ್ಡ್ ನಂದು, ಇದನ್ನ ಬ್ರೇಕ್ ಮಾಡಿದ್ದು ನಾನೇ ಅಂತ, ಬಾರ್ಡರ್ ಹಾಕೋಳ್ಳೋರೇ ಜಾಸ್ತಿ. ಆದ್ರೆ ರೆಕಾರ್ಡ್ ಯಾವ್ದೇ ಇರಲಿ, ಅದಕ್ಕೆ ಅಪ್ಪ, ನಮ್ಮ ಗೂಳಿ ರೋಹಿತ್ ಶರ್ಮಾ. ಅದಕ್ಕೆ ಹೇಳೋದು ಟಿ20 ಕ್ರಿಕೆಟ್ಗೆ ರೋಹಿತ್ ಕಿಂಗ್ ಅಂತ. ಹೀಗಾಗಿ ಟಿ20 ಕ್ರಿಕೆಟ್ನಲ್ಲಿ ಮುಂಬೈಕರ್ಗೆ ಹಾಕೋರಿಲ್ಲ ಬ್ರೇಕ್.
ಚುಟುಕು ಕ್ರಿಕೆಟ್ನಲ್ಲಿ ರೋಹಿತ್ ಸಿಕ್ಸರ್ ಕಿಂಗ್
ಚುಟುಕು ಕ್ರಿಕೆಟ್ನಲ್ಲಿ ರೋಹಿತ್ ಸಿಕ್ಸರ್ಗಳ ಸರದಾರ. ಕ್ರಿಸ್ಗೆ ಬಂದ ಅಂದ್ರೆ ಬಾಲ್ನ ಎಲ್ಲೆಲ್ಲಿ ಲ್ಯಾಂಡ್ ಮಾಡ್ತಾರೆ ಅನ್ನೋದೇ ಗೊತ್ತಿಲ್ಲ. 177 ಸಿಕ್ಸರ್ ಚಚ್ಚಿರೋ ಹಿಟ್ಮ್ಯಾನ್, ಟಿ20 ಕ್ರಿಕೆಟ್ನಲ್ಲಿ ಅಧಿಕ ಸಿಕ್ಸರ್ಗಳನ್ನ ಗಳಿಸಿದ ಏಕೈಕ ಬ್ಯಾಟ್ಸ್‌ಮನ್.
ರನ್ ಗಳಿಸಿರೋದ್ರಲ್ಲೂ ಈ ಓಪನರ್ ಟಾಪರ್
ಶಾರ್ಟೆಸ್ಟ್ ಫಾರ್ಮೆಟ್ನಲ್ಲಿ ರನ್ ಸಾಮ್ರಾಟನಾಗಿ ರೋಹಿತ್ತೇ ಟಾಪರ್. ತಮ್ಮ ಬಿರುಸಿನ ಆಟದಿಂದಲೇ ರನ್ವೇಗ ಹೆಚ್ಚಿಸಿಕೊಂಡು, T20 ಕ್ರಿಕೆಟ್ನಲ್ಲಿ ರನ್ ಟಾಪರ್ ಆಗಿ ರೂಲ್ ಮಾಡ್ತಿದ್ದಾರೆ. ಈ ಹಿಂದೆ ಕೊಹ್ಲಿಯನ್ನ ಓವರ್ಟೇಕ್ ಮಾಡಿದ ಮುಂಬೈಕರ್ಗೆ, ಯಾರೂ ಲಗಾಮು ಹಾಕೋರೇ ಇಲ್ಲ. ಶರ್ಮಾ 3694 ರನ್ ಗಳಿಸಿದ್ರೆ ಕೊಹ್ಲಿ 3660 ರನ್.
ಮೋಸ್ಟ್ ಸೆಂಚುರಿ, ರೋಹಿತ್ ಶರ್ಮಾನೇ ಅಧಿಪತಿ
ಟಿ20 ಕ್ರಿಕೆಟ್ನಲ್ಲಿ ಫಿಫ್ಟಿ ಪ್ಲಸ್ ರನ್ ಗಳಿಸಿದ್ರೆ ಅದೇ ದೊಡ್ಡದು. 100ರ ಗಡಿ ದಾಟೋದು ಅಂದ್ರೆ ಸಾಮಾನ್ಯದ ಮಾತಲ್ಲ. ಈ ಸಾಧನೆ ಮಾಡಿದವ್ರು, ಕೆಲವೇ ಪ್ಲೇಯರ್ಸ್ ಅಷ್ಟೆ. ಆದ್ರೆ ರೋಹಿತ್ ಬರೋಬ್ಬರಿ 4 ಶತಕಗಳನ್ನ ಸಿಡಿಸಿ, ಅಧಿಪತಿಯಾಗಿದ್ದಾರೆ. ಅಂದ್ರೆ ಯಾವ ಲೆವೆಲ್ನಲ್ಲಿ ರೋಹಿತ್ ಬ್ಯಾಟ್ ಬೀಸಿರ್ಬೋದು, ನೀವೇ ಯೋಚಿಸಿ.
ಕ್ಯಾಪ್ಟನ್ನಲ್ಲೂ ಹಿಟ್ಮ್ಯಾನ್ ಏಕಚಕ್ರಾಧಿಪತಿ
ರನ್, ಸೆಂಚುರಿ, ಸಿಕ್ಸರ್ನಲ್ಲಿ ಮಾತ್ರವಲ್ಲ, ಕ್ಯಾಪ್ಟನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಕ್ಯಾಲೆಂಡರ್ YEARನಲ್ಲಿ ಹೆಚ್ಚು ಟಿ20 ಗೆದ್ದ ನಾಯಕ ಎಂಬ, ಹೊಸ ದಾಖಲೆ ಬರೆದಿದ್ದಾರೆ. ಸಾಧನೆ ಅಸಾಧ್ಯ ಎಂದು ಕ್ರಿಕೆಟ್ ಎಕ್ಸ್ಪರ್ಟ್ಸ್ ಹೇಳಿದ್ರು. ಆದ್ರೀಗ ಒಂದೇ ವರ್ಷದಲ್ಲಿ 20 ಪಂದ್ಯಗಳನ್ನ ಗೆದ್ದಿದ್ದ ಪಾಕ್ಗೇ, ಚೆಕ್ಮೇಟ್ ಇಟ್ಟು ಏಕಚಕ್ರಾಧಿಪತಿಯಾಗಿದ್ದಾರೆ. ಇವಿಷ್ಟು ಎಕ್ಸಾಂಪಲ್ಸ್ ಅಷ್ಟೆ, ಇನ್ನೂ ಎಷ್ಟೋ ರೆಕಾರ್ಡ್ಗಳು, ರೋಹಿತ್ ಹೆಸರಲ್ಲಿವೆ.
ಆನೆ ನಡೆದಿದ್ದೇ ದಾರಿ.. ತಾಕತ್ತಿದ್ರೆ ಕಟ್ಟಾಕು ಅಂತಾರಲ್ಲ ಹಾಗೇ ಹಿಟ್ಮ್ಯಾನ್, ಹಿಡಿದು ಕಟ್ಟಾಕೋ ಧಮ್, ಯಾರಿಗೆ ಇದೆ ಹೇಳಿ.? ಇನ್ಮುಂದೆ ಹಿಟ್ಮ್ಯಾನ್ ನಡೆದಿದ್ದೇ ದಾರಿ.! ಹಿಟ್ಮ್ಯಾನ್ಗೆ ಯಾರೂ ಅಡ್ಡ ಬರಂಗಿಲ್ಲ. ಬಂದ್ರೂ ಉಳಿಯಲ್ಲ. ಯಾಕಂದ್ರೆ, ರೋಹಿತ್ ಒಬ್ಬ, ಸುಂಟರಗಾಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post