ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಹಾಗೂ ಅದರ ಸಹವರ್ತಿ ಸಂಘಟನೆಗಳು ಅಥವಾ ಅಧೀನ ಸಂಘಟನೆಗಳನ್ನು ಕೇಂದ್ರ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ನಿಷೇಧಿಸಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತ ಮಾಡೋದಾಗಿ ಹೇಳಿದ್ದಾರೆ.
ದೇಶದಲ್ಲಿ ಆಂತರಿಕವಾಗಿ ವಿಧ್ವಂಸಕ ಕೃತ್ಯಗಳನ್ನು ಮಾಡುವ ದೇಶದ್ರೋಹಿ ಪ್ರಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ( PFI) ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿ ಆದೇಶ ಹೊರಡಿಸಿದೆ.
ಕರ್ನಾಟಕದ ಸಮಸ್ತ ದೇಶಪ್ರೇಮಿಗಳ ಪರವಾಗಿ ಪ್ರಧಾನಿ ಶ್ರೀ @narendramodi ಅವರಿಗೆ, ಗೃಹಸಚಿವ ಶ್ರೀ @AmitShah ಅವರಿಗೆ ಹೃದಯಸ್ಪರ್ಶಿ ವಂದನೆಗಳು. pic.twitter.com/RkNFf6KD3T
— Nalinkumar Kateel (@nalinkateel) September 28, 2022
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡ್ಬೇಕು ಎಂದು ಸಿಪಿಐ, ಸಿಪಿಎಂ ಮತ್ತು ಕಾಂಗ್ರೆಸ್‌ನಂತಹ ಪ್ರತಿಪಕ್ಷಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಈ ದೇಶದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಪಿಎಫ್ಐ ದೇಶ ವಿರೋಧಿ ಚಟುವಟಿಕೆಗಳಲ್ಲಿ, ಹಿಂಸಾಚಾರದಲ್ಲಿ ತೊಡಗಿತ್ತು. ಅವರು ದೇಶದ ಹೊರಗೆ ತಮ್ಮ ಆಜ್ಞೆಯನ್ನು ಹೊಂದಿದ್ದರು. ಕೆಲವು ಇಂಪ್ ಆಫೀಸರ್‌ಗಳು ಗಡಿಯುದ್ದಕ್ಕೂ ಹೋಗಿ ತಮ್ಮದೇ ಆದ ತರಬೇತಿಯನ್ನು ಹೊಂದಿದ್ದರು. ಈ ಸಂಸ್ಥೆಯನ್ನು ನಿಷೇಧಿಸುವ ಸಮಯ ಬಂದಿದೆ. ಗೃಹ ಇಲಾಖೆ ಸರಿಯಾದ ನಿರ್ಧಾರ ತೆಗೆದುಕೊಂಡಿದೆ. ಇದು ಎಲ್ಲಾ ದೇಶ ವಿರೋಧಿ ಗುಂಪುಗಳಿಗೆ ಸಂದೇಶವಾಗಿದೆ. ಇಂತಹ ಸಂಘಟನೆಗಳೊಂದಿಗೆ ಜನರು ಸಹವಾಸ ಮಾಡಬೇಡಿ ಎಂದು ಮನವಿ ಮಾಡುತ್ತೇನೆ ಎಂದು ತಿಳಿಸಿದ್ರು.
ಇದನ್ನೂ ಓದಿ: ಆಪರೇಷನ್ ಆಕ್ಟೋಪಸ್’ ಬೆನ್ನಲ್ಲೇ ಬ್ಯಾನ್ ಅಸ್ತ್ರ-PFI ಜೊತೆಗೆ 8 ಸಹ ಸಂಘಟನೆಗಳು ನಿಷೇಧ..
Union Home Ministry has banned the Popular Front of India #PFI and its affiliates for 5 years. Congratulations to PM Shri @narendramodi and Union Home Minister Shri @AmitShah for taking this historical decisive action against these terrorist outfits.@CMofKarnataka pic.twitter.com/liMCwa8dvC
— Araga Jnanendra (@JnanendraAraga) September 28, 2022
‘ಕೇಂದ್ರ ಸರ್ಕಾರದ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ’
ಬೆಂಗಳೂರುಇತ್ತ, ಬೆಂಗಳೂರಿನಲ್ಲಿ ಪಿಎಫ್ಐ ಬ್ಯಾನ್ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕೇಂದ್ರ ಸರಕಾರ ಮಹತ್ವದ ಬೆಳವಣಿಗೆಯೊಂದರಲ್ಲಿ, ಪಿಎಫ್ಐ ಹಾಗೂ ಅದರ ಇತರ ಸಹವರ್ತಿ ಸಂಸ್ಥೆಗಳನ್ನ ಏದು ವರ್ಷಗಳ ವರೆಗೆ UAPA ಕಾಯಿದೆ ಅಡಿಯಲ್ಲಿ ನಿಷೇಧಿಸಿದೆ. ಕೇಂದ್ರ ಸರ್ಕಾರದ ಈ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ ಅಂತ ಆರಗ ಜ್ಞಾನೇಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇನ್ನು ದೇಶದಲ್ಲಿ ಕೋಮು ಸೌಹಾರ್ದ ಕೆಡಿಸಿ , ಭಯೋತ್ಪಾದಕ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದ್ದ, ಪಿಎಫ್ಐ ಹಾಗೂ ಅದರ ಇತರ ಸಹ ಸಂಸ್ಥೆಗಳ ವಿರುದ್ಧ ಕೇಂದ್ರ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡಿದೆ.. ಕೇಂದ್ರ ಸರ್ಕಾರದ ಈ ನಡೆಯನ್ನ ನಾನು ಸ್ವಾಗತಿಸುತ್ತೇನೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ: FI ಸಂಘಟನೆ ಬ್ಯಾನ್-ನಿಜಕ್ಕೂ ಆಗಿದ್ದೇನು..? ಕೇಂದ್ರ ಸರ್ಕಾರ ಕೊಟ್ಟ ಕಾರಣಗಳೇನು..?
ಇದನ್ನೂ ಓದಿ: NIA ವಿರುದ್ಧ PFI ಕಾರ್ಯಕರ್ತರ ಸಮರ: RSS, ಮೋದಿ ಸರ್ಕಾರ ವಿರುದ್ಧ ಬಂಧಿತರ ಆಕ್ರೋಶ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post